Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ವಿಕ್ಟೋರಿಯಾ ಫುಟ್ಬಾಲ್‌ ಅಕಾಡೆಮಿಗೆ ರಾಷ್ಟ್ರೀಯ ಚಾಂಪಿಯನ್‌ ಪಟ್ಟ

ಉಡುಪಿ: ಹೊಸದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಸ್ಟೈರ್ಸ್‌ ಫುಟ್ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಮಣಿಪಾಲದ ವಿಕ್ಟೋರಿಯಾ ಫುಟ್ಬಾಲ್‌ ಅಕಾಡೆಮಿ ಚಾಂಪಿಯನ್‌ ಪಟ್ಟ್‌ ಗೆದ್ದುಕೊಂಡಿದೆ. Victoria Football Academy Manipal Players Shine at National Stairs National Championship 2025

ದೆಹಲಿಯ ತ್ಯಾಗರಾಜ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ನಲ್ಲಿ ಮೇ 19 ರಿಂದ 22 ರವರೆಗೆ ನಡೆದ ಈ ಚಾಂಪಿಯನ್‌ಷಿಪ್‌ 19 ವರ್ಷ ವಯೋಮಿತಿಯ ಆಟಗಾರರಿಗೆ ಅವಕಾಶವಿದ್ದಿತ್ತು. ಉತ್ತರ ಪ್ರದೇಶ ವಿರುದ್ಧ ನಡೆದ ಪಂದ್ಯದಲ್ಲಿ ಕರ್ನಾಟದ ರೆಯಾನ್‌ ಕೋರ್ಡ ಹಾಗೂ ಅಲ್ಮಿರ್‌ ಗಳಿಸಿದ ಗೋಲಿನಿಂದ ಜಯ ದಾಖಲಾಯಿತು. ಹೊಸದಿಲ್ಲಿ ವಿರುದ್ಧ ನಡೆದ ಪಂದ್ಯದಲ್ಲಿ ಕರ್ನಾಟಕ 4-0 ಗೋಲಿನ ಅಂತರದಲ್ಲಿ ಜಯ ಗಳಿಸಿತ್ತು. ಕರ್ನಾಟಕದ ಪರ ಶಾನ್‌ ಎರಡು ಗೋಲು ಗಳಿಸಿದರೆ, ಪ್ರಣಯ್‌ ಹಾಗೂ ಧನೇಶ್‌ ತಲಾ ಒಂದು ಗೋಲು ಗಳಿಸಿ ಜಯದ ರೂವಾರಿ ಎನಿಸಿದರು. ಲೀಗ್‌ನಲ್ಲಿ 6 ಗೋಲು ಹಾಗೂ 6 ಅಂಕ ಗಳಿಸಿ ಅಗ್ರ ಸ್ಥಾನ ಗಳಿಸಿದ ಕರ್ನಾಟಕ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತು.

ತಂಡದ ಜಯದಲ್ಲಿ ಪ್ರಧಾನ ಕೋಚ್‌‌ ಆಗಿ ಕಾರ್ಯನಿರ್ವಹಿಸಿದ್ದ ಇಬ್ರಾಹಿಂ ಎಂ, ಹಾಗೂ ಮ್ಯಾನೇಜರ್‌ ಅಶಿಯಾಮ್‌ ಅವರಿಗೆ ವಿಕ್ಟೋರಿಯಾ ಫುಟ್ಬಾಲ್‌ ಅಕಾಡೆಮಿಯ ನಿರ್ದೇಶಕರಾದ ಕ್ಲೈವ್‌ ಮಸ್ಕರೆನ್ಹಾಸ್‌ ಹಾಗೂ ಮಲಿನ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Victoria FA – Karnataka

List of under 19 players – Shaun Joshua Noronha, Mohammad Almir, Maaz Ummer Yellur, Himesh U Kumar, Cris Olivera, Eshaan S Billava, Calvin Dias, ⁠Ayush D Jain, ⁠Pranith D Shetty, ⁠Vishwanath

⁠Hari Krishna Mukundh, ⁠Gaurav Prabhu Nandauke, ⁠Romero

⁠Pranay, ⁠Mohammed Ifraz Khalife, ⁠Dhanesh,⁠ Denzil Valentin Rodrigues, ⁠Pratham Acharya

⁠Varshith Sai Reddy, ⁠Riyan Corda ⁠Afrain

Coach – Ibrahim M

Manager – Ashiyam


administrator