“ಧಾರ್ಮಿಕ ನಂಬಿಕೆಗಾಗಿ ಪರ ಸ್ತ್ರೀಯ ಸ್ಪರ್ಷ ಮಾಡೊಲ್ಲ”
ಹೊಸದಿಲ್ಲಿ: ನೆದರ್ಲೆಂಡ್ಸ್‌ನಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್ ಚೆಸ್ ಟೂರ್ನಿಯಲ್ಲಿ ಭಾರತದ ಸ್ಪರ್ಧಿ, ಗ್ರ್ಯಾಂಡ್ ಮಾಸ್ಟರ್ ಆರ್. ವೈಶಾಲಿ ಅವರ ಕೈ ಕುಲುಕಲು ನಿರಾಕರಿಸಿದ ಉಜ್ಬೆಕಿಸ್ತಾಆನದ ಆಟಗಾರ, ಗ್ರ್ಯಾಂಡ್ ಮಾಸ್ಟರ್ ನಾಡಿರ್ಬೆಕ್ ಯಾಕುಬೊಯೆವ್ ಅವರು ಕ್ರೀಡಾ ಜಗತ್ತಿನಲ್ಲಿ ಹೊಸ ವಿವಾದ ಹುಟ್ಟು ಹಾಕಿದ್ದಾರೆ. Uzbek chess player apologies with Indian Grandmaster R Vaishali
ಕ್ರೀಡೆಯಲ್ಲಿ ಯಾವುದೇ ಪಂದ್ಯ ಆರಂಭವಾಗುವುದಕ್ಕೆ ಮೊದಲು ಇತ್ತಂಡಗಳ ಆಟಗಾರರು ಕೈ ಕುಲುಕಿಸಿ ಆರಂಭಿಸುವುದು ಮತ್ತು ಸೋಲಿರಲಿ ಗೆಲುವಿರಲಿ ಕೈ ಕುಲುಕಿಸಿ ನಿರ್ಗಮಿಸುವುದು ಕ್ರೀಡಾ ಧರ್ಮ. ಆಟಗಾರರು ಪರಸ್ಪರ ಆಲಿಂಗಿಸಿ ಅಭಿನಂದಿಸುವುದು, ಬೀಳ್ಕೊಡುವುದು ಇದೆಲ್ಲ ಸಾಮಾನ್ಯ. ಆದರೆ ಭಾರತದ ವೈಶಾಲಿ ಪಂದ್ಯ ಆರಂಭಕ್ಕೆ ಮುನ್ನ ಕೈಕುಲುಕಿಸಲು ಯಾಕೊಬೊಯೆವ್ ಎದುರಿಗೆ ಕೈ ಮುಂದಕ್ಕೆ ತಂದಾಗ ಆತ ನಿರಾಕರಿಸಿದ. ಆ ವೀಡಿಯೋ ಸಾಕಷ್ಟು ವೈರಲ್ ಆಗಿದೆ. ಇದಕ್ಕೆ ಯಾಕೊಬೊಯೆವ್ ಸ್ಪಷ್ಟೀಕರಣವನ್ನೂ ನೀಡಿದ್ದು, ಆ ಬಗ್ಗೆ ವೈಶಾಲಿಯಲ್ಲಿ ಕ್ಷಮೆಯನ್ನೂ ಕೇಳಿದ್ದಾರೆ.
“ಆಟಕ್ಕೆ ಮುನ್ನ ವೈಶಾಲಿ ಜೊತೆ ನಡೆದುಕೊಂಡು ವರ್ತನೆ ಬಗ್ಗೆ ನಾನು ಕ್ಷಮೆಯಾಚಿಸುತ್ತಿರುವೆ. ಭಾರತದ ಚೆಸ್ ಆಟಗಾರ್ತಿಯ ಬಗ್ಗೆ ಮತ್ತು ಮಹಿಳೆಯರ ಬಗ್ಗೆ ಅಪಾರ ಗೌರವವಿದೆ, ಆದರೆ ಧಾರ್ಮಿಕ ನಂಬಿಕೆಯ ಕಾರಣ ನಾನು ಯಾವುದೇ ಪರಸ್ತ್ರೀಯನ್ನು ಮುಟ್ಟುವುದಿಲ್ಲ,” ಎಂದು ಹೇಳಿದ್ದಾರೆ.