ಟೈ ಬ್ರೇಕರ್‌ನಲ್ಲಿ ಸೋತ ಬೆಂಗಳೂರು ಬುಲ್ಸ್
ಜೈಪುರ: ದಿಟ್ಟ ಹೋರಾಟ ನೀಡಿದ ಹೊರತಾಗಿಯೂ ಬೆಂಗಳೂರು ಬುಲ್ಸ್ ತಂಡ ಟೈ ಆದ ರೋಚಕ ಪಂದ್ಯದಲ್ಲಿಯು.ಪಿ. ಯೋಧಾಸ್ ತಂಡದ ವಿರುದ್ಧ ವೀರೋಚಿತ ಸೋಲನುಭವಿಸಿತು. UP Yoddhas survive Alireza Mirzaian’s heroics, defeat Bengaluru Bulls in tie-breaker
ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿಗುರುವಾರ ನಡೆದ ಪಂದ್ಯದಲ್ಲಿಬುಲ್ಸ್ 5-6 ರಲ್ಲಿಸೋಲು ಕಂಡಿತು. ಪಂದ್ಯದ ಪೂರ್ಣಾವಧಿಯಲ್ಲಿಉಭಯ ತಂಡಗಳು 36-36 ಅಂಕಗಳಿಂದ ಸಮಬಲ ಸಾಧಿಸಿದವು. ನಂತರ ಹೊಸ ನಿಯಮದನ್ವಯ ನಡೆದ ರೇಡಿಂಗ್‌ನಲ್ಲಿಯೋಧಾಸ್ ಮೇಲುಗೈ ಸಾಧಿಸಿತು.
ಬೆಂಗಳೂರು ಬುಲ್ಸ್ ತಂಡದ ಪರ ಆಲ್‌ರೌಂಡರ್ ಅಲಿರೇಜಾ ಮಿರ್ಜಾಯಿನ್ 11 ಅಂಕ ಗಳಿಸಿದರೆ, ಆಕಾಶ್ ಶಿಂದೆ 7 ಅಂಕ ಸಂಪಾದಿಸಿ ತಂಡದ ಹೋರಾಟಕ್ಕೆ ಕಾರಣರಾದರು. ಅತ್ತ ಯೋಧಾಸ್ ತಂಡದ ಪರ ಭವಾನಿ 10 ಅಂಕ ಕಲೆಹಾಕಿದರೆ, ಗಗನ್ ಗೌಡ್ 6 ಅಂಕಗಳ ಕೊಡುಗೆ ನೀಡಿದರು. ಇವರಲ್ಲದೆ, ಆಶು ಸಿಂಗ್, ಹಿತೇಶ್ ಮತ್ತು ಸುಮಿತ್ ತಂಡದ ಹೋರಾಟಕ್ಕೆ ತಮ್ಮ ಕೊಡುಗೆ ನೀಡಿದರು. ಪಂದ್ಯ ಮುಕ್ತಾಯಕ್ಕೆ 5 ನಿಮಿಷಗಳ ಆಟ ಬಾಕಿ ಇರುವಾಗ ಬೆಂಗಳೂರು ಬುಲ್ಸ್ ಕೇವಲ 3 (29-32) ಅಂಕಗಳ ಹಿನ್ನಡೆಯಲ್ಲಿತ್ತು.
ಇದಕ್ಕೂ ಮುನ್ನ ಉಭಯ ತಂಡಗಳು ಮುನ್ನಡೆ ಸಾಧಿಸುವ ಛಲದೊಂದಿಗೆ ದ್ವಿತೀಯಾರ್ಧ ಆರಂಭಿಸಿದವು. ಇತ್ತಂಡಗಳು ಆಕ್ರಣಕಾರಿ ಆಟಕ್ಕೆ ಒತ್ತು ನೀಡಿದವು. ರೇಡರ್ ಭವಾನಿ ರಜ್‌ಪೂತ್ ಆಕ್ರಮಣಕಾರಿ ದಾಳಿ ನಡೆಸಿದ ಕಾರಣ ಯೋಧಾಸ್ 27-25ರಲ್ಲಿಪಂದ್ಯದಲ್ಲಿಮೊದಲ ಬಾರಿಗೆ ಮೇಲುಗೈ ಸಾಧಿಸಿತು. ಹಿನ್ನಡೆ ತಗ್ಗಿಸಲು ಬುಲ್ಸ್ ಆಟಗಾರರು ಹರಸಾಹಸ ನಡೆಸಿದರೂ ಹೊಂದಾಣಿಕೆ ಆಟ ಸಾಧ್ಯವಾಗಲಿಲ್ಲ. 32ನೇ ನಿಮಿಷದಲ್ಲಿಮತ್ತೊಮ್ಮೆ ಬುಲ್ಸ್ ಮನೆಯನ್ನು ಖಾಲಿ ಮಾಡಿಸಿದ ಯೋಧಾಸ್, 31-26ರಲ್ಲಿಮೇಲುಗೈ ಸಾಧಿಸಿ ಗೆಲುವಿನ ಧ್ಯಾನ ಮಾಡಿತು. ಆದರೆ ಈ ಹಂತದಲ್ಲಿಎಚ್ಚರಿಕೆ ಆಟದ ಮೊರೆ ಹೋದ ಬುಲ್ಸ್, ದಾಳಿ ಮತ್ತು ಟ್ಯಾಕಲ್ ಎರಡರಲ್ಲೂಪುಟಿದೇಳುವ ಮೂಲಕ 29-32ರಲ್ಲಿಹಿನ್ನಡೆ ತಗ್ಗಿಸುವ ಸಾಹಸ ಮಾಡಿದರು.
ಉಭಯ ತಂಡಗಳು ಮುನ್ನಡೆ ಸಾಧಿಸುವ ಛಲದೊಂದಿಗೆ ದ್ವಿತೀಯಾರ್ಧ ಆರಂಭಿಸಿದವು. ಇತ್ತಂಡಗಳು ಆಕ್ರಣಕಾರಿ ಆಟಕ್ಕೆ ಒತ್ತು ನೀಡಿದವು. ರೇಡರ್ ಭವಾನಿ ರಜ್‌ಪೂತ್ ಆಕ್ರಮಣಕಾರಿ ದಾಳಿ ನಡೆಸಿದ ಕಾರಣ ಯೋಧಾಸ್ 27-25ರಲ್ಲಿಪಂದ್ಯದಲ್ಲಿಮೊದಲ ಬಾರಿಗೆ ಮೇಲುಗೈ ಸಾಧಿಸಿತು. ಹಿನ್ನಡೆ ತಗ್ಗಿಸಲು ಬುಲ್ಸ್ ಆಟಗಾರರು ಹರಸಾಹಸ ನಡೆಸಿದರೂ ಹೊಂದಾಣಿಕೆ ಆಟ ಸಾಧ್ಯವಾಗಲಿಲ್ಲ.
32ನೇ ನಿಮಿಷದಲ್ಲಿಮತ್ತೊಮ್ಮೆ ಬುಲ್ಸ್ ಮನೆಯನ್ನು ಖಾಲಿ ಮಾಡಿಸಿದ ಯೋಧಾಸ್, 31-26ರಲ್ಲಿಮೇಲುಗೈ ಸಾಧಿಸಿ ಗೆಲುವಿನ ಧ್ಯಾನ ಮಾಡಿತು. ಆದರೆ ಈ ಹಂತದಲ್ಲಿಎಚ್ಚರಿಕೆ ಆಟದ ಮೊರೆ ಹೋದ ಬುಲ್ಸ್, ದಾಳಿ ಮತ್ತು ಟ್ಯಾಕಲ್ ಎರಡರಲ್ಲೂಪುಟಿದೇಳುವ ಮೂಲಕ 29-32ರಲ್ಲಿಹಿನ್ನಡೆ ತಗ್ಗಿಸುವ ಸಾಹಸ ಮಾಡಿದರು.
ಮೊದಲ ಹತ್ತು ನಿಮಿಷಗಳ ಆಟದಲ್ಲಿಲಭಿಸಿದ ಮುನ್ನಡೆಯನ್ನು ಕಾಪಿಟ್ಟುಕೊಳ್ಳುವಲ್ಲಿಎಡವಿದ ಬೆಂಗಳೂರು ಬುಲ್ಸ್ ತಂಡದ ಪಂದ್ಯದ ಮೊದಲಾರ್ಧದ ಮುಕ್ತಾಯಕ್ಕೆ ಕೇವಲ ಒಂದು ಅಂಕದಿಂದ (20-19) ಮುನ್ನಡೆ ಕಂಡುಕೊಂಡಿತು.
11ನೇ ನಿಮಿಷದಲ್ಲಿಯೋಧಾಸ್ ತಂಡವನ್ನು ಅಂಗಣದಿಂದ ಕಾಲಿ ಮಾಡಿಸಿದ ಬುಲ್ಸ್ ಆಟಗಾರರು ಮೊದಲಾರ್ಧದ ಬಹುತೇಕ ಸಮಯ ಮೇಲುಗೈ ಸಾಧಿಸಿದರು. ಆದರೆ ವಿರಾಮಕ್ಕೆ ಹೋಗಬೇಕು ಎನ್ನುವಷ್ಟರಲ್ಲಿಸಮನ್ವತೆಯ ಕೊರತೆಯಿಂದ ಆಲೌಟ್ ಬಲೆಗೆ ಬಿದ್ದರು. ಹೀಗಾಗಿ ಸೇಡು ತೀರಿಸಿಕೊಂಡ ಯೋಧಾಸ್ ಕೇವಲ 1 ಅಂಕ ಹಿನ್ನಡೆ ಅನುಭವಿಸಿತು.
ಬೆಂಗಳೂರು ಬುಲ್ಸ್ ತನ್ನ ಮುಂದಿನ ಪಂದ್ಯದಲ್ಲಿಅಕ್ಟೋಬರ್ 2ರಂದು ಪುಣೇರಿ ಪಲ್ಟನ್ ತಂಡದ ಸವಾಲು ಎದುರಿಸಲಿದೆ.

