ದೆಹಲಿ:
ಡಾಂಗ್ ಗಿಯಾನ್ ಲೀ(10), ರೋಹಿತ್ ಗುಲಿಯಾ(7) ಹಾಗೂ ಪರ್ವೇಶ್ ಭೈನ್ಸವಾಲ್ ಮತ್ತು ಸಚಿನ್ ಅವರ ತಲಾ ಆರು ಅಂಕಗಳ ನೆರವಿನಿಂದ ಗುಜರಾತ್ ಪಾರ್ಚುನ್ ಗೈಂಟ್ಸ್ ತಂಡ ವಿವೋ ಪ್ರೊ ಕಬಡ್ಡಿ ಟೂರ್ನಿಯ 48ನೇ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ 45-38 ಅಂತರದಲ್ಲಿ ಗಲುವು ಸಾಧಿಸಿತು.
ಇಲ್ಲಿನ ಶಾಹಿದ್ ವಿಜಯ್ ಸಿಂಗ್ ಪಠಿಕ್ ಕ್ರೀಡಾ ಸಂಕೀರ್ಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿನ ಲಯ ಮುಂದುವರಿಸಿದ ಫಾರ್ಚುನ್‌ಗೈಂಟ್ಸ್ ತಂಡ ಮತ್ತೊಂದು ವಿಜಯದ ಮಾಲೆಯನ್ನು ಖಾತೆಗೆ ಸೇರಿಸಿಕೊಂಡಿತು. ಇದರೊಂದಿಗೆ ಗುಜರಾತ್ ತಂಡ ಒಟ್ಟು 22 ಅಂಕಗಳೊಂದಿಗೆ ಗುಂಪು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಇನ್ನೂ ಕಳೆದ ಎರಡು ಪಂದ್ಯಗಳಲ್ಲಿ ಸೋತು ನಿರಾಸೆ ಅನುಭವಿಸಿದ್ದ ದಬಾಂಗ್ ಡೆಲ್ಲಿ ತಂಡ ಗೆಲುವಿನ ಲಯಕ್ಕೆ ಹಿಂತಿರುಗಲಿಲ್ಲ. ಮತ್ತೊಮ್ಮೆ ತವರು ಅಭಿಮಾನಿಗಳ ಎದುರು ಸೋಲು ಅನುಭವಿಸಿತು. ಡೆಲ್ಲಿ ಪರ ಅತ್ಯುತ್ತಮ ಆಟವಾಡಿದ ಚಂದ್ರನ್ ರಂಜಿತ್(11), ನವೀನ್ ಕುಮಾರ್(6) ಹಾಗೂ ಪವನ್ ಕುಮಾರ್(5) ಅತ್ಯುತ್ತಮ ಆಟವಾಡಿದರೂ ಪಂದ್ಯದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಡೆಲ್ಲಿ ತಂಡ ಗುಂಪು ಪಟ್ಟಿಯಲ್ಲಿ 17 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.