Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಅಕ್ಟೋಬರ್‌ 2 ರಿಂದ 4ನೇ ಆವೃತ್ತಿಯ ಪ್ರೈಮ್‌ ವಾಲಿಬಾಲ್‌ ಲೀಗ್‌

ಹೊಸದಿಲ್ಲಿ: ಭಾರತದ ವಾಲಿಬಾಲ್‌ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದ ಪ್ರೈಮ್‌ ವಾಲಿಬಾಲ್‌ ಲೀಗ್‌ (ಪಿವಿಎಲ್‌) ನ ನಾಲ್ಕನೇ ಆವೃತ್ತಿ ಅಕ್ಟೋಬರ್‌ 2 ರಿಂದ ಆರಂಭಗೊಳ್ಳಲಿದೆ. ಮೂರು ಆವೃತ್ತಿಗಳಲ್ಲಿ ಯಶಸ್ಸು ಕಂಡ ಲೀಗ್‌ ಈ ಬಾರಿ ಮತ್ತೆ ಭಾರತದ ಹಾಗೂ ಅಂತಾರಾಷ್ಟ್ರೀಯ ಆಟಗಾರರ ಸಮ್ಮಿಲನದಿಂದ ಮತ್ತಷ್ಟು ಉತ್ಕೃಷ್ಟ ಪ್ರದರ್ಶನದೊಂದಿಗೆ ಆರಂಭಗೊಳ್ಳಲಿದೆ. The Prime Volleyball League (PVL) is all set to return for its fourth instalment, kicking off electrifying volleyball action from October 2, 2025.

ಪಿವಿಎಲ್‌ ನಾಲ್ಕನೇ ಆವೃತ್ತಿಯ ಆಟಗಾರರ ಹರಾಜು ಪ್ರಕಿಯೆ ಕ್ಯಾಲಿಕಟ್‌ನಲ್ಲಿ  ಜೂನ್‌ 8 ರಂದು ನಡೆಯಲಿದೆ. ವಾಲಿಬಾಲ್‌ ಕ್ರೀಡೆಗೆ ಖ್ಯಾತಿ ಪಡೆದಿರುವ ಕ್ಯಾಲಿಕಟ್‌ ಹರಾಜು ಪ್ರಕ್ರಿಯೆಯ ಆತಿಥ್ಯ ವಹಿಸುವ ನಾಲ್ಕನೇ ನಗರವಾಗಿದೆ. ಮೇ 1 ರಿಂದ ಮೇ 31 ರ ವರೆಗೆ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಈ ಕುರಿತು ಹೆಚ್ಚಿನ ವಿವರಗಳನ್ನು ಇನ್ನು ಕೆಲವು ದಿನಗಳಲ್ಲೇ ನೀಡಲಾಗುವುದು ಎಂದು ಪಿವಿಎಲ್‌‌ ಪ್ರಕಟಣೆ ತಿಳಿಸಿದೆ.


administrator