Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಮಾ. 29ರಂದು ಎಂ. ಚಂದ್ರಶೇಖರ್‌ ಹೆಗ್ಡೆ ಕ್ಲಬ್‌‌ ಹೌಸ್‌ ಉದ್ಘಾಟನೆ

ಬ್ರಹ್ಮಾವರ: ಉಡುಪಿ ಜಿಲ್ಲೆಯ ಪ್ರತಿಷ್ಠಿತ ಸ್ಪೋರ್ಟ್ಸ್‌ ಕ್ಲಬ್‌ ಬ್ರಹ್ಮಾವರ ಸ್ಪೋರ್ಟ್ಸ್‌ ಕ್ಲಬ್‌ನ “ಎಂ. ಚಂದ್ರಶೇಖರ ಹೆಗ್ಡೆ ಕ್ಲಬ್‌ ಹೌಸ್‌” ನ ಉದ್ಘಾಟನೆ ಮಾರ್ಚ್‌ 29 ರ ಭಾನುವಾರದಂದು ಬ್ರಹ್ಮಾವರದ ಹೆರಂಜೆಯಲ್ಲಿರುವ ಕ್ಲಬ್‌ನಲ್ಲಿ ನಡೆಯಲಿದೆ. The inauguration of the “M. Chandrashekhar Hegde Club House” of Brahmavar Sports Club, a prestigious sports club in Udupi district, will be held on Sunday, March 29 at the club located in Heranje, Brahmavar.

ಎಸಿ ರೂಮ್ಸ್‌, ಜಿಮ್ನೇಷಿಯಂ, ಸ್ನೂಕರ್‌ ರೂಮ್‌, ರಿಕ್ರಿಯೇಷನ್‌ ರೂಮ್‌, ರೆಸ್ಟೋರೆಂಟ್‌, ಸ್ಟೀಮ್‌ ರೂಮ್‌ಗಳನ್ನು ಹೊಂದಿರುವ ಕ್ಲಬ್‌‌ ಹೌಸನ್ನು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಉದ್ಘಾಟಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಶಾಸಕ ಯಶಪಾಲ್‌ ಸುವರ್ಣ ವಹಿಸುವರು. ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ, ಶಾಸಕ ಕಿರಣ್‌‌ ಕುಮಾರ್‌ ಕೊಡ್ಗಿ, ಮಾಜಿ ಸಚಿವ ಪ್ರಮೋಸ್‌ ಮಧ್ವರಾಜ್‌, ಮಾಜಿ ಶಾಸಕ ಕೆ ರಘುಪತಿ ಭಟ್‌, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಎಚ್‌. ಎಸ್‌. ‌ ಶೆಟ್ಟಿ ಹಾಗೂ ಇತರ ಗಣ್ಯರು ಪಾಲ್ಗೊಳ್ಳುವರು.

ವಿಶೇಷ ಆಹ್ವಾನಿತರಾಗಿ ಬೆಂಗಳೂರಿನ ಉದ್ಯಮಿ ವಿಜಯ ಹೆಗ್ಡೆ ಕುಕ್ಕೇಹಳ್ಳಿ, ಪ್ರಣವ್‌ ಆಸ್ಪತ್ರೆ ಬ್ರಹ್ಮಾವರದ ಡಾ. ಪ್ರವೀಣ್‌ ಕುಮಾರ್‌, ಶಂಕರನಾರಾಯಣ ಕ್ಯಾಷ್ಯಸ್‌ನ ಎಚ್‌. ಶಶಿಧರ್‌ ಶೆಟ್ಟಿ, ಬೆಂಗಳೂರಿನ ಉದ್ಯಮಿ ಎಸ್‌.ಆರ್‌ ಗುಣಶೀಲ ರೆಡ್ಡಿ, ಅಬುದಾಬಿಯ ಉದ್ಯಮಿ ಶೇಕ್‌ ಯೂನಸ್‌ ಹಸನ್‌, ಎಸ್‌ಎಸ್‌ ಟ್ರೇಡರ್ಸ್‌ ಬ್ರಹ್ಮಾವರದ ಪೀಟರ್‌ ಡಿʼಸೋಜಾ ಮೊದಲಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಬ್ರಹ್ಮಾವರ ಸ್ಪೋರ್ಟ್ಸ್‌ ಕ್ಲಬ್‌ನ ಅಧ್ಯಕ್ಷರಾದ ಬಿಜು ಜಿ ನಾಯರ್‌, ಗೌರವಾಧ್ಯಕ್ಷರಾದ ಚಂದ್ರಶೇಖರ್‌ ಹೆಗ್ಡೆ, ಖಜಾಂಚಿ ವಿಕ್ರಂ ಪ್ರಭು ಹಾಗೂ ಖಜಾಂಚಿ ಗ್ರೆಗೋರಿ ಡಿʼಸಿಲ್ವಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


administrator