Saturday, July 27, 2024

Team India South Africa Tour: ಮೂರು ಮಾದರಿಗೆ ಪ್ರತ್ಯೇಕ ಮೂರು ನಾಯಕರು!

ಮುಂಬಯಿ: ಭಾರತ ಕ್ರಿಕೆಟ್‌ ನಿಯಂತಣ ಮಂಡಳಿ (ಬಿಸಿಸಿಐ) ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ ಕ್ರಿಕೆಟ್‌ ತಂಡವನ್ನು ಪ್ರಕಟಿಸಿದ್ದು, ಮೂರು ಮಾದರಿಗೆ ಪ್ರತ್ಯೇಕ ನಾಯಕರನ್ನು ಆಯ್ಕೆ ಮಾಡಲಾಗಿದೆ. Team India three format three captains

ಆ ಪ್ರಕಾರ ಟೆಸ್ಟ್‌ ತಂಡಕ್ಕೆ ರೋಹಿತ್‌ ಶರ್ಮಾ, ಟಿ20 ತಂಡಕ್ಕೆ ಸೂರ್ಯ ಕುಮಾರ್‌ ಯಾದವ್‌ ಮತ್ತು ಏಕದಿನ ತಂಡಕ್ಕೆ ಕೆ.ಎಲ್.‌ ರಾಹುಲ್‌ ನಾಯಕರಾಗಿ ಕಾರ್ಯನಿರವಹಿಸಲಿದ್ದಾರೆ. ಭಾರತ ತಂಡವು ದಕ್ಷಿಣ ಆಫ್ರಿಕಾದ ನೆಲದಲ್ಲಿ ಮೂರು ಟಿ20, ಮೂರು ಏಕದಿನ ಮತ್ತು ಎರಡು ಟೆಸ್ಟ್‌ ಪಂದ್ಯಗಳ ಸರಣಿಯನ್ನಾಡಲಿದೆ. ಇದೇ ಪ್ರವಾಸದ ವೇಳೆ ಭಾರರತ ಎ ತಂಡವು  ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ ಎರಡು ನಾಲ್ಕು ದಿನಗಳ ಪಂದ್ಯವನ್ನಾಡಲಿದೆ. ಮತ್ತು ಮೂರು ದಿನಗಳ ಒಂದು ಅಂತ್‌ ತಂಡ ಪಂದ್ಯವನ್ನಾಡಲಿದೆ.

ಟೆಸ್ಟ್‌ ತಂಡದ ವಿವರ: ರೋಹಿತ್‌ ಶರ್ಮಾ (ನಾಯಕ), ಶುಭ್ಮನ್‌ ಗಿಲ್‌, ಯಶಸ್ವಿ ಜೈಸ್ವಾಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ರುತುರಾಜ್‌‌ ಗಾಯಕ್ವಾಡ್‌, ಇಶಾನ್‌ ಕಿಶನ್‌, (ವಿಕೆಟ್‌ ಕೀಪರ್‌), ಕೆ.ಎಲ್‌. ರಾಹುಲ್‌ (ವಿಕೆಟ್‌ ಕೀಪರ್‌), ರವಿಚಂದ್ರ ಅಶ್ವಿನ್‌, ರವೀಂದ್ರ ಜಡೇಜಾ, ಶಾರ್ದೂಲ್‌ ಠಾಕೂರ್‌, ಮೊಹಮ್ಮದ್‌ ಸಿರಾಜ್‌, ಮುಖೇಶ್‌ ಕುಮಾರ್‌, ಮೊಹಮ್ಮದ್‌ ಶಮಿ (ಫಿಟ್ನೆಸ್‌ ಆಧರಿಸಿ), ಜಸ್‌ಪ್ರೀತ್‌ ಬುಮ್ರಾ, (ಉಪನಾಯಕ), ಪ್ರಸಿಧ್‌ ಕೃಷ್ಣ.

ಟಿ20 ತಂಡದ ವಿವರ: ಯಶಸ್ವಿ ಜೈಸ್ವಾಲ್‌, ಶುಭ್ಮನ್‌ ಗಿಲ್‌, ರುತುರಾಜ್‌ ಗಾಯಕ್ವಾಡ್‌, ತಿಲಕ್‌ ವರ್ಮಾ, ಸೂರ್ಯಕುಮಾರ್‌ ಯಾದವ್‌ (ನಾಯಕ), ರಿಂಕು ಸಿಂಗ್‌, ಶ್ರೇಯಸ್‌ ಅಯ್ಯರ್‌, ಇಶಾನ್‌ ಕಿಶನ್‌ (ವಿ.ಕೀ) ಜಿತೇಶ್‌ ಶರ್ಮಾ (ವಿ.ಕೀ), ರವೀಂದ್ರ ಜಡೇಜಾ (ಉಪನಾಯಕ), ವಾಷಿಂಗ್ಟನ್‌ ಸುಂದರ್‌, ರವಿ ಬಿಷ್ಣೋಯ್‌, ಕುಲದೀಪ್‌ ಯಾದವ್‌, ಆರ್ಷದೀಪ್‌ ಸಿಂಗ್‌, ಮೊಹಮ್ಮದ್‌ ಸಿರಾಜ್‌, ಮುಖೇಶ್‌ ಕುಮಾರ್‌, ದೀಪಕ್‌ ಚಹಾರ್‌.

ಏಕದಿನ ತಂಡದ ವಿವರ: ರುತುರಾಜ್‌ ಗಾಯಕ್ವಾಡ್‌, ಸಾಯಿ ಸುದರ್ಶನ್‌, ತಿಲಕ್‌ ವರ್ಮಾ, ರಜತ್‌ ಪಾಟಿದಾರ್‌, ರಿಂಕು ಸಿಂಗ್‌, ಶ್ರೇಯಸ್‌ ಅಯ್ಯರ್‌, ಕೆ.ಎಲ್‌ ರಾಹುಲ್‌ (ವಿ.ಕೀ), ಸಂಜು ಸ್ಯಾಮ್ಸನ್‌(ವಿ.ಕೀ), ಅಕ್ಷರ್‌ ಪಟೇಲ್‌, ವಾಷಿಂಗ್ಟನ್‌ ಸುಂದರ್‌, ಕುಲದೀಪ್‌ ಯಾದವ್‌, ಯಜುವೇಂದ್ರ ಚಹಾಲ್‌, ಮುಖೇಶ್‌ ಕುಮಾರ್‌, ಆವೇಶ್‌ ಖಾನ್‌, ಅರ್ಷದೀಪ್‌ ಸಿಂಗ್‌, ದೀಪಕ್‌ ಚಹಾರ್‌.

ಭಾರತ ಎ ತಂಡದ ವಿವರ: ಕೆ.ಎಸ್‌ ಭರತ್‌ (ನಾಯಕ, ವಿಕೀ), ಸಾಯ್‌ ಸುದರ್ಶನ್‌, ಅಭಿಮನ್ಯು ಈಶ್ವರನ್‌ (ಫಿಟ್ನೆಸ್‌ ಆಧರಿಸಿ), ದೇವದತ್ತ ಪಡಿಕ್ಕಲ್‌, ಪ್ರದೋಶ್‌ ರಾಜನ್‌ ಪೌಲ್‌, ಸರ್ಫರಾಜ್‌ ಖಾನ್‌, ದ್ರುವ್‌ ಜುರೇಲ್‌, ಶಾರ್ದೂಲ್‌ ಠಾಕೂರ್‌, ಪಲ್ಕಿಟ್‌ ನಾರಂಗ್‌, ಸೌರಭ್‌ ಕುಮಾರ್‌, ಮಾನವ್‌ ಸಥಾರ್‌, ಪ್ರಸಿಧ್‌ ಕೃಷ್ಣ, ಆಕಾಶ್‌ದೀಪ್‌, ವಿದ್ವತ್‌ ಕಾವೇರಪ್ಪ, ತುಶಾರ್‌ ದೇಶಪಾಂಡೆ. ನವದೀಪ್‌ ಸೈನಿ. ಹರ್ಷಿತ್‌ ರಾಣಾ.

Related Articles