ಗೋಲು ಗಳಿಸದೇ ಸ್ಪೇನ್‌ಗೆ ಶಾಕ್ ನೀಡಿದ ಪುಟ್ಟ ದೇಶ ಕೇಪ್ ವಾರ್ಡೆ
ಅಟ್ಲಾಂಟ: ವಿಶ್ವಕಪ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನ ಸೋಮವಾರದ ಪಂದ್ಯದಲ್ಲಿ ಸ್ಪೇನ್‌ಗೆ ಅಚ್ಚರಿಯ ಆಘಾತ. ಪುಟ್ಟ ದೇಶ ಕೇಪ್ ವಾರ್ಡೆ ವಿರುದ್ಧ ನಡೆದ ಪಂದ್ಯದಲ್ಲಿ ಸ್ಪೇನ್ ಗೋಲು ಗಳಿಸುವಲ್ಲಿ ವಿಫಲವಾಗಿರುವುದು ಮಾತ್ರವಲ್ಲ. ಅನುಭವಿ ಆಟಗಾರರಿಗೆ ಕಾಲಿನ ಮೂಲಕ ಚೆಂಡನ್ನು ಸ್ಪರ್ಷಿಸುವ ಅವಕಾಶವೂ ಸಿಗಲಿಲ್ಲ. ಇದರೊಂದಿಗೆ ಮಾಜಿ ಚಾಂಪಿಯನ್ ಡ್ರಾ ಗಳಿಸುವ ಮೂಲಕ ಮಾನಸಿಕವಾಗಿ ಸೋತಿದೆ. Spain held to shock draw by Cape Verde in their World Cup opener.
ಸ್ಪೇನ್‌ನ ಟಾರ್ಗೆಟ್‌ಗೆ ಗೋಡೆಯಾಗಿ ನಿಂತ ಕೋಪ್ ವಾರ್ದೆಯ ಗೋಲ್‌ಕೀಪರ್ ವೊಝಿನ್ಹಾ ಆ ದೇಶದ ಫುಟ್ಬಾಲ್ ಅಭಿಮಾನಿಗಳ ಪಾಲಿನ ಹೀರೋ ಎನಿಸಿದರು. ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
23 ಶಾಟ್ಸ್, 8 ಸಾಟ್ಸ್ ಆನ್ ಟಾರ್ಗೆಟ್, 62% ಚೆಂಡಿನ ಮೇಲೆ ನಿಯಂತ್ರಣ, 764 ಪಾಸ್‌ಗಳು, 92% ಪಾಸ್ ನಿಖರತೆ ಹಾಗೂ 11 ಕಾರ್ನರ್‌ಗಳ ಮೂಲಕ ಚಾಂಪಿಯನ್ ತಂಡದಂತೆ ಸ್ಪೇನ್ ಆಡಿದರೂ ಕೇಪ್ ಪಾರ್ಡೆ ರಕ್ಷಣಾ ಕೋಟೆಯನ್ನು ಬೇಧಿಸಲಾಗಲಿಲ್ಲ,
ಮಾಜಿ ಚಾಂಪಿಯನ್ ತಂಡದ ಅನುಭವಿ ಆಟಗಾರ ಮೈಕ್ ಒಯಾರ್ಜಬಾಲ್ 30 ನಿಮಿಷಕ್ಕೂ ಹೆಚ್ಚು ಕಾಲ ಅಂಗಣದಲ್ಲಿದ್ದರೂ ಚೆಂಡನ್ನು ಮುಟ್ಟಲಾಗದೆ 1966ರ ನಂತರ ಈ ಅಪಖ್ಯಾತಿಗೆ ತುತ್ತಾದ ಮೊದಲ ಆಟಗಾರರೆನಿಸಿದರು.
ಸಮಬಲದ ಸೋಮವಾರ:
ಫಿಫಾ ವಿಶ್ವಕಪ್‌ನಲ್ಲಿ ಸೋಮವಾರ ನಡೆದ ಎಲ್ಲ ಪಂದ್ಯಗಳೂ ಡ್ರಾದಲ್ಲಿ ಕೊನೆಗೊಂಡಿರುವುದು ವಿಶೇಷವಾಗಿತ್ತು. ಇರಾನ್ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯ 2-2 ಗೋಲುಗಳಿಂದ ಸಮಬಲಗೊಂಡಿತ್ತು, ಸೌದಿ ಅರೇಬಿಯಾ ಹಾಗೂ ಉರುಗ್ವೆ ನಡುವಿನ ಪಂದ್ಯ 1-1 ಗೋಲುಗಳಿಂದ ಸಮಬಲಗೊಂಡಿತು. ಬೆಲ್ಜಿಯಂ ಮತ್ತು ಈಜಿಪ್ಟ್ 1-1 ಅಂತರದಲ್ಲಿ ಅಂಕ ಹಂಚಿಕೊಂಡವು.

