KIUG2025: ಈಜುಕೊಳದ ಬಗ್ಗೆ ಶ್ರೀಹರಿ ನಟರಾಜ್ ಅಸಮಾಧಾನ
ಜೈಪುರ: ಸವಾಯ್ ಮಾನ್ ಸಿಂಗ್ ಈಜುಕೊಳದಲ್ಲಿ ನಡೆದ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನ ಈಜಿನಲ್ಲಿ ಕರ್ನಾಟಕದ ಜೈನ್ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದ ಒಲಿಂಪಿಯನ್ ಶ್ರೀಹರಿ ನಟರಾಜ್ ಇಲ್ಲಿನ ಈಜುಕೊಳದ ವ್ಯವಸ್ಥೆಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. Shrihari Nataraj targets to winning medals at Asian and commonwealth Games.
9 ಚಿನ್ನ ಹಾಗೂ 2 ಬೆಳ್ಳಿ ಪದಕ ಸೇರಿ ಒಟ್ಟು 11 ಪದಕಗಳನ್ನು ಗೆದ್ದಿರುವ ಶ್ರೀಹರಿ ನಟರಾಜ್, “ಸಾಮಾನ್ಯವಾಗಿ ಈಜುಕೊಳದಲ್ಲಿ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಬೇಕು. ಆದರೆ ಇಲ್ಲಿ 18 ಡಿಗ್ರಿ ಇದೆ. ಇಂಥ ಪರಿಸ್ಥಿತಿಯಲ್ಲಿ ಈಜುವುದು ಕಷ್ಟ. ನೀರಿನ ಉಷ್ಣಾಂಶವನ್ನು ಉತ್ತಮಪಡಿಸಬಹುದಾಗಿತ್ತು, ಆದರೆ ಇಲ್ಲಿ ಮಾಡಿರಲಿಲ್ಲ, ಇದರಿಂದ ಅನೇಕ ಸ್ಪರ್ಧಿಗಳಿಗೆ ತೊಂದರೆಯಾಗಿದೆ, ಉತ್ತಮ ರೀತಿಯಲ್ಲಿ ಯೋಜನೆ ಮಾಡಬಹುದಾಗಿತ್ತು” ಎಂದರು.
ಇಲ್ಲಿ ತಾನು ಪ್ರತಿನಿಧಿಸುತ್ತಿರುವ ವಿಶ್ವವಿದ್ಯಾನಿಲಯಕ್ಕಾಗಿ ಪದಕ ಗೆದ್ದ ತೃಪ್ತಿ ಇದೆ, ಆದರೆ ಮುಂದಿನ ಏಷ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲುವುದು ಪ್ರಮುಖವಾಗಿದೆ ಎಂದು ಶ್ರೀಹರಿ ಈ ಸಂದರ್ಭದಲ್ಲಿ ಹೇಳಿದ್ದಾರೆ.
“ಮುಂದಿನ ಏಷ್ಯನ್ ಗೇಮ್ಸನ್ ವೇಳೆ ನನಗೆ 25 ವರ್ಷ, ಇದು ಒಬ್ಬ ಈಜುಗಾರನಿಗೆ ಸಾಧನೆಯ ಉನ್ನತ ವರ್ಷ. ಕಾಮನ್‌ವೆಲ್ತ್ ಹಾಗೂ ಏಷ್ಯನ್ ಕ್ರೀಡಾಕೂಟಗಳಲ್ಲಿ ಪದಕ ಗಲ್ಲುತ್ತೇಂಬ ಆತ್ಮವಿಶ್ವಾಸವಿದೆ, ಅದಕ್ಕೆ ನನ್ನ ದೇಹವೂ ಸೂಕ್ತವಾಗಿದೆ,” ಎಂದರು.
2018ರಲ್ಲಿ ಮೊದಲ ಖೇಲೋ ಇಂಡಿಯಾದ ಸಾಧನೆಯಿಂದಾಗಿ ಟಾಪ್ಸ್‌ನಲ್ಲಿ ಅವಕಾಶ ಸಿಕ್ಕಿತು, ಇದರಿಂದಾಗಿ ಟೋಕಿಯೋ ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ಗಳಲ್ಲಿ ಸ್ಪರ್ಧಿಸುವಂತಾಯಿತು ಎಂದು ಶ್ರೀಹರಿ ಹೇಳಿದರು.

