ಜಪಾನಿನ ಅಕಾನೆ ಯಮಾಗುಚಿ ಅವರನ್ನು ಸೆಮಿಫೈನಲ್ ಪಂದ್ಯದಲ್ಲಿ ಸೋಲಿಸಿದ ಭಾರತದ ಬ್ಯಾಡ್ಮಿಂಟನ್ ತಾರೆ ಪಿ. ವಿ. ಸಿಂಧೂ ಭಾನುವಾರ ದ ಫೈನಲ್ ಹೋರಾಟದಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್ ಹಾಗೂ ಒಲಿಂಪಿಕ್ಸ್ ಚಾಂಪಿಯನ್ ಸ್ಪೇನ್‌ನ ಕರೋಲಿನ್ ಮರಿನ್ ಅವರ ವಿರುದ್ಧ ಸೆಣಸಲಿದ್ದಾರೆ.
ನಾನ್‌ಜಿಂಗ್ (ಚೀನಾ):ಫೈನಲ್ನ ಪಂದ್ಯದಲ್ಲಿ ಸಿಂಧೂಗೆ ಒಲಿಂಪಿಕ್ಸ್‌ನ ಸೇಡು ತೀರಿಸಿಕೊಳ್ಳಲು ಇಲ್ಲಿ ಮತ್ತೊಮ್ಮೆ ಅವಕಾಶ. ಇದೊಂದು ರೀತಿಯಲ್ಲಿ ರಿಯೋ ಒಲಿಂಪಿಕ್ಸ್‌ನ ಫೈನಲ್ ಪಂದ್ಯದ ಪುನರಾವರ್ತನೆಯೇ ಆಗಿದೆ. ಇಂಡಿಯನ್ ಓಪನ್ ನಲ್ಲೂ ಸಿಂಧೂ ಮರಿನ್ ಗೆ ಸೋಲುಣಿಸಿದ್ದರು. ಕಳೆದ ಬಾರಿ ರನ್ನರ್ ಅಪ್‌ಗೆ ತೃಪ್ತಿ ಪಟ್ಟಿದ್ದ ಸಿಂಧೂಗೆ ಇದು ಸತತ ಎರಡನೇಯ ಫೈನಲ್. ಸೆಮಿಫೈನಲ್ ಪಂದ್ಯದಲ್ಲಿ ಸಿಂಧೂ ಯಮಾಗುಚಿ ವಿರುದ್ಧ ೨೧-೧೬, ೨೪-೨೨ ಅಂತರದಲ್ಲಿ ಜಯ ಗಳಿಸಿದರು.
ಯಮಾಗುಚಿ ಹಾಗೂ ಸಿಂಧೂ ನಡುವಿನ ಸೋಲು ಗೆಲುವಿನ ಅಂತರ ೬-೪ರಿಂದ ಕೂಡಿತ್ತು. ದುಬೈ ಸೂಪರ್ ಸಿರೀಸ್ ಹಾಗೂ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಯಮಾಗುಚಿ ವಿರುದ್ಧ ಸಿಂಧೂ ಸೋಲನುಭವಿಸಿದ್ದರು. ೨೦೧೩ ಹಾಗೂ ೨೦೧೪ರಲ್ಲಿ ಸಿಂಧೂ ಕಂಚಿನ ಪದಕದ ಸಾ‘ಧನೆ ಮಾಡಿದ್ದರು.
ಸಿಂಧೂ ವಿರುದ್ಧ ಮರಿನ್ ಸೋಲು ಗೆಲುವಿನ ಅಂತರದಲ್ಲಿ ೬-೫ರ ಮುನ್ನಡೆ ಕಾಯ್ದುಕೊಂಡಿದ್ದಾರೆ. ಜೂನ್ ತಿಂಗಳಲ್ಲಿ ನಡೆದ ಮಲೇಷ್ಯಾ ಓಪನ್‌ನಲ್ಲಿ ಸಿಂಧೂ ಸ್ಪೇನ್‌ನ ಎದುರಾಳಿಗೆ ಸೋಲನುಭವಿಸಿದ್ದರು. ಮರಿನ್ ಚೀನಾದ ಎಂಟನೇ ಶ್ರೇಯಾಂಕಿತ ಆಟಗಾರ್ತಿ ಹೆ ಬಿಂಗ್ಜಿಯಾವೋ ವಿರುದ್ಧ ೧೩-೨೧, ೨೧-೧೬, ೨೧-೧೩ ಅಂತರದಲ್ಲಿ ಜಯ ಗಳಿಸಿ ಫೈನಲ್ ಪ್ರವೇಶಿಸಿದರು.
ಪ್ರಮುಖ ಅಂಶಗಳು
ಮುಖಾಮುಖಿ- ೬-೫
ಇತ್ತೀಚಿನ ಮುಖಾಮುಖಿ
೨೦೧೮ರ ಮಲೇಷ್ಯಾ ಓಪನ್ ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧೂ ೨೨-೨೦, ೨೧-೧೯ ಅಂತರದಲ್ಲಿ ಸೋಲನು‘ಭವಿಸಿದ್ದರು.
ವಿಶ್ವಚಾಂಪಿಯನ್‌ಷಿಪ್‌ನಲ್ಲಿ
೨೦೧೪ರ ವಿಶ್ವ ಚಾಂಪಿಯನ್‌ಷಿಪ್ ಸೆಮಿಫೈನಲ್ ಪಂದ್ಯದಲ್ಲಿ ಮರಿನ್ ‘ಭಾರತದ ಸಿಂಧೂಗೆ ಸೋಲುಣಿಸಿದ್ದರು.
ವಿಶ್ವ ರ್ಯಾಂಕಿಂಗ್
ಸಿಂಧೂ ೦೩, ಕರೋಲಿನ್ ಮರಿನ್ ೦೮
ಇತ್ತೀಚಿನ ಫೈನಲ್ ಮುಖಾಮುಖಿ
೨೦೧೭ರ ಇಂಡಿಯಾ ಓಪನ್ ಫೈನಲ್‌ನಲ್ಲಿ ಸಿಂಧೂ ೨೧-೧೯, ೨೧-೧೬ ಅಂತರದಲ್ಲಿ ಮರಿನ್‌ಗೆ ಸೋಲುಣಿಸಿದ್ದರು.