Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

154 ಎಸೆತ 156 ರನ್‌ 21 ಬೌಂಡರಿ ಕುಂದಾಪುರ ರಚಿತಾ ಹತ್ವಾರ್‌ ಸಾಧನೆ

ಬೆಂಗಳೂರು: ನಾಯಕಿಯ ಜವಾಬ್ದಾರಿಯು ಆಟ ಪ್ರದರ್ಶಿಸಿದ ಕುಂದಾಪುರದ ರಚಿತಾ ಹತ್ವಾರ್‌‌ ಹೈದಾರಾಬ್‌ನಲ್ಲಿ ನಡೆದ ವಿದರ್ಭ ವಿರುದ್ಧದ ಬಿಸಿಸಿಐ 19 ವರ್ಷ ವಯೋಮಿತಿಯ ವನಿತೆಯರ ಏಕದಿನ ಪಂದ್ಯದಲ್ಲಿ 156 ರನ್‌ ಸಿಡಿಸಿ ಕರ್ನಾಟಕಕ್ಕೆ ಜಯ ತಂದಿತ್ತಿದ್ದಾರೆ. Rachita Hatwar from Kundapura, who played the role of a captain, scored 156 runs to lead Karnataka to victory in the BCCI Under-19 Women’s ODI against Vidarbha in Hyderabad.

ನಾಯಕಿಯಾಗಿ ಚೊಚ್ಚಲ ಪಂದ್ಯವನ್ನಾಡಿದ ರಚಿತಾ 154 ಎಸೆತಗಳನ್ನೆದುರಿಸಿ 21 ಬೌಂಡಿ ನೆರವಿನಿಂದ 156 ರನ್‌ ಸಿಡಿಸುವುದೊಂದಿಗೆ ಕರ್ನಾಟಕ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 284 ರನ್‌ ಗಳಿಸಿತು. ಶ್ರೇಯಾ ಚನಾಣ್‌ 57 ರನ್‌ ಸಿಡಿಸಿ ತಂಡದ ಬೃಹತ್‌ ಮೊತ್ತಕ್ಕೆ ನೆರವಾದರು.

ಬೃಹತ್‌ ಮೊತ್ತವನ್ನು ಬೆಂಬತ್ತಿದ ವಿದರ್ಭ ಕರ್ನಾಟಕದ ದೀಕ್ಷಾ ಜೆ (3/53) ಹಾಗೂ ವಂದಿತಾ ರಾವ್‌ (4/49) ಅವರ ಬೌಲಿಂಗ್‌ ದಾಳಿಗೆ ಸಿಲುಕಿ 255 ರನ್‌ಗೆ ಸರ್ವ ಪತನ ಕಂಡು 29 ರನ್‌ ಅಂತರದಲ್ಲಿ ಸೋಲೊಪ್ಪಿಕೊಂಡಿತು.

ಮೂಲತಃ ಕುಂದಾಪುರದವರಾದ ರಚಿತಾ ಹತ್ವಾರ್‌ ಬೆಂಗಳೂರಿನಲ್ಲಿ ಕರ್ನಾಟಕ ಇನ್‌ಸ್ಟಿಟ್ಯೂಟ್‌ ಆಫ್‌‌ ಕ್ರಿಕೆಟ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ರಚಿತಾ ಹತ್ವಾರ್‌ ಕ್ರಿಕೆಟ್‌ ಸಾಧನೆಗೆ ಓದಿ

https://www.sportsmail.net/rachita-hatwar-from-kundapura-is-the-captain-of-the-karnataka-state-u19-womens-cricket-team/


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.