Saturday, October 12, 2024

ಮೂಡಬಿದಿರೆಯ ಆಳ್ವಾಸ್‌ನಲ್ಲಿ ವನಿತೆಯರ ಕಬಡ್ಡಿ ಆಯ್ಕೆ ಟ್ರಯಲ್ಸ್‌

ಬೆಂಗಳೂರು: ಬಿಹಾರದ ಪಾಟಲೀಪುತ್ರ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ನಲ್ಲಿ  01-09-2022 ರಿಂದ 04-09-2022 ರವರೆಗೆ ನಡೆಯಲಿರುವ 48ನೇ  ರಾಷ್ಟ್ರೀಯ ಜೂನಿಯರ್‌ ಬಾಲಕಿಯರ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕ ಬಾಲಕಿಯರ ತಂಡದ ಆಯ್ಕೆಯು  ಮೂಡಬಿದಿರೆಯ ಅಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ಇದೇ  ಆಗಸ್ಟ್‌ 16 ರಂದು ನಡೆಯಲಿದೆ.

ಈ ಆಯ್ಕೆ ಪ್ರಕ್ರಿಯೆಯಲ್ಲಿ ಕರ್ನಾಟಕದ ಅರ್ಹ ಕಬಡ್ಡಿ ಆಟಗಾರ್ತಿಯರು ಪಾಲ್ಗೊಳ್ಳಬಹುದು. ಆಯ್ಕೆಯಾದ ಆಟಗಾರ್ತಿಯರಿಗೆ ಮೂಡಬಿದಿರೆಯಲ್ಲೇ 17-08-2022 ರಿಂದ 28-08-2022ರವರೆಗೆ ತರಬೇರತಿ ನೀಡಲಾಗುವುದು.

ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳುವವರು 16-08-2022 ರಂದು ಬೆಳಿಗ್ಗೆ 8 ಗಂಟೆಗೆ ಹಾಜರಿರತಕ್ಕದ್ದು.

ನಿಯಮಗಳು: ದೇಹದ ತೂಕ 65ಕೆಜಿ ಮತ್ತು ಅದಕ್ಕಿಂತ ಕಡಿಮೆ ಇರತಕ್ಕದ್ದು,

4-09-2022ರಂದು ವಯಸ್ಸು 20 ವರ್ಷ ಮತ್ತು ಅದಕ್ಕಿಂತ ಕಡಿಮೆ ಇರಬೇಕು.

ಆಯ್ಕೆ ಟ್ರಯಲ್ಸ್‌ಗೆ ಬರುವಾಗ ಆಧಾರ ಕಾರ್ಡ್‌ ತಂದಿರಬೇಕು.

ಪಾಸ್‌ಪೋರ್ಟ್‌ಗಾತ್ರದ 2 ಫೋಟೊಗಳು ತರತಕ್ಕದ್ದು.

ಹೆಚ್ಚಿನ ವಿವರಗಳಿಗಾಗಿ ಮೂಡಬಿದಿರೆ ಆಳ್ವಾಸ್‌ ಕಾಲೇಜಿನ ಮಹಿಳಾ ಕಬಡ್ಡಿ ತಂಡದ ಕೋಚ್‌ ಹಂಸ ಸಿ. ಅವರನ್ನು 9916087513 ರತನ್‌ ಅವರನ್ನು 9448529625 ದೂರವಾಣಿ ಮೂಲಕ ಸಂಪರ್ಕಿಸಬಹುದು.

Related Articles