ಮುಂಬೈ, ಅಕ್ಟೋಬರ್ 19: ಪ್ರೊ ಕಬಡ್ಡಿ Pro Kabaddi League Season 10 ಲೀಗ್‌ನ ಆಯೋಜಕರಾದ ಮಶಾಲ್ ಸ್ಪೋರ್ಟ್ಸ್ 10ನೇ ಆವೃತ್ತಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಡಿಸೆಂಬರ್ 2 ರಂದು ಅಹಮದಾಬಾದ್‌ನ ಅರೆನಾ ಬೈ ಟ್ರಾನ್ಸ್‌ಸ್ಟೇಡಿಯಾ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.
ಲೀಗ್ ಹಂತವು 2023 ಡಿಸೆಂಬರ್ 2 ರಿಂದ 2024ರ ಫೆಬ್ರವರಿ 21 ರವರೆಗೆ ನಡೆಯಲಿದೆ. ಪ್ಲೇ ಆಫ್‌ಗಳ ವೇಳಾಪಟ್ಟಿಯನ್ನು ನಂತರದ ದಿನಾಂಕದಲ್ಲಿ ಪ್ರಕಟಿಸಲಾಗುವುದು.
ಅಹಮದಾಬಾದ್ ಚರಣ 2023ರ ಡಿಸೆಂಬರ್ 2ರಿಂದ 7ರವರೆಗೆ ನಡೆಯಲಿದೆ. ನಂತರ, ಬೆಂಗಳೂರು (8-13 ಡಿಸೆಂಬರ್ 2023), ಪುಣೆ (15-20 ಡಿಸೆಂಬರ್ 2023), ಚೆನ್ನೈ (22-27 ಡಿಸೆಂಬರ್ 2023), ನೋಯ್ಡಾ (29 ಡಿಸೆಂಬರ್ 2023 – 3 ಜನವರಿ 2024), ಮುಂಬೈ (5-10 ಜನವರಿ 2024), ಜೈಪುರ (12-17 ಜನವರಿ 2024), ಹೈದರಾಬಾದ್ (19-24 ಜನವರಿ 2024), ಪಟನಾ (26-31 ಜನವರಿ 2024), ಡೆಲ್ಲಿ(2-7 ಫೆಬ್ರವರಿ 2024), ಕೋಲ್ಕೊತಾ (9-14 ಫೆಬ್ರವರಿ 2024) ಮತ್ತು ಪಂಚಕುಲ (16-21 ಫೆಬ್ರವರಿ 2024)
ಗುಜರಾತ್ ಜಯಂಟ್ಸ್ ಹಾಗೂ ತೆಲುಗು ಟೈಟನ್ಸ್ ತಂಡಗಳು ಮುಖಾಮುಖಿಯೊಂದಿಗೆ 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿ ಆರಂಭವಾಗಲಿದೆ. ಪವನ್ ಶೆರಾವತ್, ಫಜೆಲ್ ಅತ್ರಾಚಲಿ, ಅಜಿಂಕ್ಯ ಪವಾರ್ ಮತ್ತು ನವೀನ್ ಕುಮಾರ್ ಅವರಂತಹ ಅಗ್ರಮಾನ್ಯ ಸ್ಟಾರ್‌ಗಳು ಆರಂಭಿಕ ವಾರಾಂತ್ಯದ ಹೈವೋಲ್ಟೇಜ್ ಪಂದ್ಯಗಳ ಮೂಲಕ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಲು ಸಜ್ಜಾಗಿದ್ದಾರೆ.