ರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್: ಪಲ್ಲವಿಗೆ ಸ್ವರ್ಣ ಡಬಲ್
ಬೆಂಗಳೂರು: ತೆಲಂಗಾಣದಲ್ಲಿ ನಡೆದ 7ನೇ ರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಪಲ್ಲವಿ ಕೆ ಎಂ ಅವರು ವನಿತೆಯರ ಸಿಂಗಲ್ಸ್‌ನಲ್ಲಿ ಎರಡು ಚಿನ್ನ ಹಾಗೂ ಮಿಕ್ಸೆಡ್ ಡಬಲ್ಸ್‌ನಲ್ಲಿ ಒಂದು ಬೆಳ್ಳಿ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. Pallavi K. M. from Karnataka brought glory to the state by winning two gold medals in the 7th National Para Badminton Championship held in Telangana.
ಕರ್ನಾಟಕದ ಸ್ಪರ್ಧಿಗಳು ಒಟ್ಟು 2 ಚಿನ್ನ, 4 ಬೆಳ್ಳಿ ಹಾಗೂ 5 ಕಂಚಿನ ಪದಕ ಗೆದ್ದಿರುತ್ತಾರೆ. ವನಿತೆಯರ ಸಿಂಗಲ್ಸ್ ಡಬ್ಲ್ಯುಎಚ್ -1 ವನಿತೆಯರ ಡಬಲ್ಸ್ ಡಬ್ಲ್ಯುಎಚ್ 2 ವಿಭಾಗದಲ್ಲಿ ಪಲ್ಲವಿ ಚಿನ್ನ ಗೆದ್ದರೆ, ಮಿಕ್ಸೆಡ್ ಡಬ್ಲ್ಯುಎಚ್ 1-ಡಬ್ಲ್ಯುಎಚ್ 2 ವಿಭಾಗದಲ್ಲಿ ಬೆಳ್ಳಿ ಗೆದ್ದರು.

ಅಮ್ಮು ಮೋಹನ್ ವನಿತೆಯರ WD WH1 – WH2 ವಿಭಾಗದಲ್ಲಿ ಒಂದು ಬೆಳ್ಳಿ ಹಾಗೂ WH2 & MXD WH1 – WH2 ವಿಭಾಗದಲ್ಲಿ ಎರಡು ಕಂಚಿನ ಪದಕ ಗೆದ್ದರು. ಧಾನೇಶ್ವರಿ ವನಿತೆಯರ ಡಬಲ್ಸ್ SH6 ವಿಭಾಗದಲ್ಲಿ ಬೆಳ್ಳಿ ಹಾಗೂ ವನಿತೆಯರ ಸಿಂಗಲ್ಸ್‌ನ SH6 ವಿಭಾಗದಲ್ಲಿ ಕಂಚಿನ ಪದಕ ಗೆದ್ದರು.
ವನಿತೆಯರ ಬಡಲ್ಸ್‌ನಲ್ಲಿ ಜನನಿ ಆರ್. SH6 ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರು. ಪುರುಷರ ಸಿಂಗಲ್ಸ್ WH2 ವಿಭಾಗದಲ್ಲಿ ಸಿದ್ದಣ್ಣ ಸಾಹುಕಾರ್ ಬೆಳ್ಳಿಯ ಸಾಧನೆ ಮಾಡಿದರು. ಪುರುಷರ ಡಬಲ್ಸ್ ವಿಭಾಗದಲ್ಲಿ ಜೆಮ್ಷೆಡ್ ಎಂಇ SU-5 ವಿಭಾಗದಲ್ಲಿ ಕಂಚಿನ ಪದಕ ಗೆದ್ದರು. ಮಂಜುನಾಥ್ ಸಿ WH1 – WH2 ವಿಭಾಗದಲ್ಲಿ ಕಂಚಿನ ಪದಕ ಗೆದ್ದಿರುತ್ತಾರೆ. ಅನುಷಾ ಒ.ಸಿ. ಅವರು ವನಿತೆಯರ ಸಿಂಗಲ್ಸ್ WH1 ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಪದಕ ಗೆದ್ದಿರುವ ಹಾಗೂ ಭಾಗವಹಿಸಿರುವ ಸ್ಪರ್ಧಿಗಳಿಗೆ ಕರ್ನಾಟಕ ತಂಡದ ಪ್ರಧಾನ ಕೋಚ್, ಅಂತಾರಾಷ್ಟ್ರೀಯ ಮಾಜಿ ಆಟಗಾರ ಅನಂದ್ ಕುಮಾರ್ ಅವರು ಅಭಿನಂದನೆ ಸಲ್ಲಿಸಿರುತ್ತಾರೆ.

