Thursday, December 12, 2024

ಫೀನಿಕ್ಸ್ ಗೋಲ್ಡ್ ಕಾಯಿನ್ಸ್ ಟೇಬಲ್ ಟೆನಿಸ್ ಲೀಗ್

ಸ್ಪೋರ್ಟ್ಸ್ ಮೇಲ್ ವರದಿ

ಬೆಂಗಳೂರಿನ ಯಲಚೇನಹಳ್ಳಿಯಲ್ಲಿರುವ ಫೀನಿಕ್ಸ್ ಜೋನ್ ಟೇಬಲ್ ಟೆನಿಸ್ ಅಕಾಡೆಮಿಯು 2019 ಜನವರಿ 6ರಂದು ಫೀನಿಕ್ಸ್ ಜೋನ್-3 ಗೋಲ್ಡ್ ಕಾಯಿನ್ಸ್ ಟೇಬಲ್ ಟೆನಿಸ್ ಲೀಗ್ ಟೂರ್ನಿಯನ್ನು ಆಯೋಜಿಸಿದೆ.

17 ವರ್ಷ ವಯೋಮಿತಿಯ ಕಿರಿಯರು ಹಾಗೂ 17 ವರ್ಷ ಮೇಲ್ಪಟ್ಟ ಹಿರಿಯರಿಗಾಗಿ ನಡೆಯುವ ಈ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ವಿಜೇತರಾದವರು 1 ಗ್ರಾಂ ಚಿನ್ನದ ನಾಣ್ಯವನ್ನು ಬಹುಮಾನವಾಗಿ ಪಡೆಯಲಿದ್ದಾರೆ. ಅದೇ ರೀತಿ ರನ್ನರ್ ಅಪ್ ಸ್ಥಾನ ಗಳಿಸುವವರಿಗೆ ನಗದು ಬಹುಮಾನವಿರುತ್ತದೆ.
ಯುವ ಆಟಗಾರರಿಗೆ ಉತ್ತೇಜನ ನೀಡುವ ಫೀನಿಕ್ಸ್ ಅಕಾಡೆಮಿಯು ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳಿಂದ ಕೂಡಿದೆ. ಈಗಾಗಲೇ ಹಲವಾರು ಆಟಗಾರರು ರಾಷ್ಟ್ರಮಟ್ಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿರುತ್ತಾರೆ.
ಪ್ರವೇಶ ಶುಲ್ಕ :  300 ರೂ.
ಶುಲ್ಕವನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದು- https://goo.gl/forms/TKeaO6yjVNscKnvj1
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಜನವರಿ 5, 2019, ಶನಿವಾರ, ಸಂಜೆ 6 ಗಂಟೆ.
ಪಂದ್ಯ ಆರಂ‘- ಜನವರಿ 6, 2019, ಭಾನುವಾರ  ಬೆಳಿಗ್ಗೆ 9 ಗಂಟೆಗೆ.
ಬಹುಮಾನ – 17 ವರ್ಷ ವಯೋಮಿತಿಯೊಳಗಿನ ಚಾಂಪಿಯನ್ನರಿಗೆ 1 ಗ್ರಾಂ ಚಿನ್ನದ ನಾಣ್ಯ, ಇದೇ ವಿಭಾಗದ ರನ್ನರ್ ಅಪ್‌ಗೆ 1,000 ರೂ. ನಗದು ಬಹುಮಾನ.
17 ವರ್ಷ ಮೇಲ್ಪಟ್ಟ ಸೀನಿಯರ್ ವಿಭಾಗದ ಚಾಂಪಿಯನ್ನರಿಗೆ 1 ಗ್ರಾಂ ಚಿನ್ನದ ನಾಣ್ಯ, ಇದೇ ವಿಭಾಗದ ರನ್ನರ್ ಅಪ್‌ಗೆ 1,000 ರೂ. ನಗದು ಬಹುಮಾನ.
ಮಾದರಿ- ಆಲ್ರೌಂಡ್,
ಬಿ /5 ,ಫೈನಲ್ಸ್ -ಬಿ / 7, ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ಅಸೋಸಿಯೇಷನ್‌ನ ನಿಯಮದ ಪ್ರಕಾರ.
ಹೆಚ್ಚಿನ ವಿವರಗಳಿಗೆ-ವಿ. ಪ್ರಸನ್ನ, 9008825541 ಅವರನ್ನು ಸಂಪರ್ಕಿಸಿ.
ವಿಳಾಸ
ಫೀನಿಕ್ಸ್ ಜೋನ್ ಟೇಬಲ್ ಟೆನಿಸ್ ಅಕಾಡೆಮಿ.
ಪ್ರಮಿಳಾ ಮತ್ತು ಅಮಿತಾ ಕಾಂಪ್ಲೆಕ್ಸ್, ಉಡುಪಿ ಗ್ರ್ಯಾಂಡ್ ಹೋಟೇಲ್‌ನ ಮೇಲ್ಗಡೆ,
2ನೇ ಮಹಡಿ, ರಾಜೇನಹಳ್ಳಿ, ಯಲಚೇನಹಳ್ಳಿ ಮೆಟ್ರೋ ಸ್ಟೇಷನ್ ಹತ್ತಿರ, ಜೆಪಿ ನಗರ, ಬೆಂಗಳೂರು.
ದೂರವಾಣಿ-9008825541

Related Articles