ಹರಿಯಾಣಕ್ಕೆ ಪ್ರೊ ಕುಸ್ತಿ ಲೀಗ್ ಚಾಂಪಿಯನ್ ಪಟ್ಟ

0
190
ಸ್ಪೋರ್ಟ್ಸ್ ಮೇಲ್ ವರದಿ

ಗ್ರೆಟರ್ ನೊಯಿಡಾದ ಗೌತಮ ಬುದ್ಧ ವಿಶ್ವವಿದ್ಯಾನಿಲಯದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಆವೃತ್ತಿಯ ಪ್ರೊ ಕುಸ್ತಿ ಲೀಗ್‌ನ ಫೈನಲ್‌ನಲ್ಲಿ ಪಂಜಾಬ್ ರಾಯಲ್ಸ್ ವಿರುದ್ಧ  6-3 ಅಂತರದಲ್ಲಿ ಜಯ ಗಳಿಸಿದ ಹರಿಯಾಣ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.

ಅಲೆಕ್ಸಾಂಡರ್ ಖೊತ್ಸಿಯಾನಿವಸ್ಕಿ, ಅಲಿ ಶಬಾನೋವ್, ಕಿರಣ್, ರವಿ ಕುಮಾರ್ ಹಾಗೂ ಅನಸ್ತಾಸಿಯಾ ನಿಶ್ಚಿತ ಅವರು ಪ್ರಭುತ್ವ ಸಾಧಿಸುವುದರೊಂದಿಗೆ ಕಳೆದ ಮೂರು ಆವೃತ್ತಿಗಳಲ್ಲಿ ರನ್ನರ್ ಸ್ಥಾನಕ್ಕೆ ತೃಪ್ತಿಪಡೆಯುತ್ತಿದ್ದ ಹರಿಯಾಣ ಹಾಲಿ ಚಾಂಪಿಯನ್ ಪಂಜಾಬ್ ರಾಯಲ್ಸ್‌ಗೆ ಸೋಲುಣಿಸಿ ಪ್ರಶಸ್ತಿ ಗೆದ್ದುಕೊಂಡಿತು. ಮೊದಲ ಐದು ಹೋರಾಟಗಳಲ್ಲಿ ಹರಿಯಾಣದ ಸ್ಪರ್ಧಿಗಳು ಜಯ ಗಳಿಸಿ ಚಾಂಪಿಯನ್ ಪಟ್ಟ ಖಚಿತಪಡಿಸಿದರು.
ಪಂಜಾಬ್ ತಂಡದ ಸ್ಟಾರ್ ಕುಸ್ತಿಪಟು ಬಜಂರ್ ಪೂನಿಯಾ ಅಖಾಡಕ್ಕೆ ಇಳಿಯುವ ಮೊದಲೇ ಹರಿಯಾಣ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ಏಷ್ಯನ್ ಚಾಂಪಿಯನ್ ಹಾಗೂ ಪದ್ಮಶ್ರೀ ಪ್ರಶಸ್ತಿ ಗೆದ್ದಿರುವ ಬಜರಂಗ್ ಪೂನಿಯಾ 11-0 ಅಂತರದಲ್ಲಿ ರಜನೀಶ್ ವಿರುದ್ಧ ಜಯ ಗಳಿಸಿದರೂ ತಂಡದ ಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.