Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಸ್ವಂತ ಕಂಪೆನಿ “ವೆಲ್‌ ಸ್ಪೋರ್ಟ್ಸ್‌” ಸ್ಥಾಪಿಸಿದ ನೀರಜ್‌ ಚೋಪ್ರಾ

ಬೆಂಗಳೂರು: ಒಲಿಂಪಿಕ್ಸ್‌ ಪದಕ ವಿಜೇತ, ಕ್ರೀಡಾ ಜಗತ್ತಿನ ಶ್ರೇಷ್ಠ ಜಾವೆಲಿನ್‌ ಎಸೆತಗಾರರಲ್ಲಿ ಒಬ್ಬರಾಗಿರುವ ಭಾರತದ ನೀರಜ್‌ ಚೋಪ್ರಾ ಇದುವರೆಗೆ ಜೆಎಸ್‌ಡಬ್ಲ್ಯು ಜೊತೆ ಪಾಲುದಾರರಾಗಿದ್ದು, ಇದೀಗ ತಮ್ಮದೇ ಆದ ಸ್ವಂತ “ವೆಲ್‌ ಸ್ಪೋರ್ಟ್ಸ್‌” ಎಂಬ ಅಥ್ಲೀಟ್‌ ಮ್ಯಾನೇಜ್‌ಮೆಂಟ್‌ ಕಂಪೆನಿಯನ್ನು ಸ್ಥಾಪಿಸಿದ್ದಾರೆ. Olympic champion Neeraj Chopra as he concludes his long standing association with JSW Sports and launches his own athlete management firm, Vel Sports

2016ರಲ್ಲಿ ನೀರಜ್‌ ಚೋಪ್ರಾ ಅವರು JSW ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್‌ ಎಕ್ಸಲೆನ್ಸ್‌ ಪ್ರೋಗ್ರಾಂ (SEP) ಮೂಲಕ ನೀರಜ್‌ ಕ್ರೀಡಾ ಜಗತ್ತಿಗೆ ಪರಿಚಿತರಾದರು. ಕ್ರೀಡಾ ಜಗತ್ತಿನಲ್ಲಿ ಪ್ರೀತಿಯಿಂದ ಗೋಲ್ಡನ್‌ ಬಾಯ್‌ ಎಂದೇ ಕರೆಯಲ್ಪಡುವ ನೀರಜ್‌, 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಟ್ರ್ಯಾಕ್‌ ಮತ್ತು ಫೀಲ್ಡ್‌ ವಿಭಾಗದಲ್ಲಿ ಭಾರತದ ಪರ ಚಿನ್ನ ಗೆದ್ದ ಮೊದಲ ಅಥ್ಲೀಟ್‌ ಎಂಬ ಗೌರವಕ್ಕೆ ಪಾತ್ರರಾದರು. 2023 ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಹಾಗೂ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ನೀರಜ್‌ ಚೋಪ್ರಾ ಭಾರತದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದರು.

“ಕಳೆದ ಒಂದು ದಶಕದ ಅವಧಿಯಲ್ಲಿ ಜೆಎಸ್‌ಡಬ್ಲ್ಯು ನನ್ನ ಕ್ರೀಡಾ ಬದುಕನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳುವುದಕ್ಕೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದೆ, ಅದೇ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುವುದು ಮುಂದಿನ ಗುರಿ,” ಎಂದು ನೀರಜ್‌ ಚೋಪ್ರಾ ಹೇಳಿದ್ದಾರೆ.


administrator