KIUG2025: ಶ್ರೀಹರಿ ನಟರಾಜ್ಗೆ ಸಪ್ತ ಸ್ವರ್ಣದ ಗೌರವ
ಸೋಮಶೇಖರ್ ಪಡುಕರೆ, ಜೈಪುರ: ಇಲ್ಲಿನ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ನಲ್ಲಿ 27 ಚಿನ್ನದ ಪದಕಗಳೊಂದಿಗೆ ಒಟ್ಟು 45 ಪದಕಗಳನ್ನು ಗೆದ್ದಿರುವ ಕರ್ನಾಟಕದ ಜೈನ್ ಕಾಲೇಜು ಪದಕಗಳ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. Olympian Srihari Nataraj and Bhavya Sachdeva helped Jain University stamp their authority in the pool, ending the contingent’s swimming campaign with 27 gold medals. Jain University sit atop the medal standings with 45 medals
ಒಲಿಂಪಿಯನ್ ಶ್ರೀಹರಿ ನಟರಾಜ್ ಸ್ಪರ್ಧಿಸಿರುವ 9 ವಿಭಾಗಗಳಲ್ಲಿ ಒಟ್ಟು 7 ಚಿನ್ನ ಹಾಗೂ 2 ಬೆಳ್ಳಿಯ ಪದಕಗಳನ್ನು ಗೆದ್ದು ವೈಯಕ್ತಿಮ ವಿಭಾಗದ ಚಾಂಪಿಯನ್ ಆಗಲು ವೇದಿಕೆ ಸಜ್ಜುಮಾಡಿಕೊಂಡರು. ಜೈನ್ ಕಾಲೇಜು ತಂಡ 27 ಚಿನ್ನ, 9 ಬೆಳ್ಳಿ ಹಾಗೂ 9 ಕಂಚಿನ ಪದಕಗಳನ್ನು ಗೆದ್ದು ಈಜಿನಲ್ಲಿ ಪ್ರಭುತ್ವ ಸಾಧಿಸಿತು ಮಾತ್ರವಲ್ಲ ಐದನೇ ದಿನದಲ್ಲೂ ಪದಕ ಪಟ್ಟಿಯಲ್ಲಿ ಮೇಲುಗೈ ಸಾಧಿಸಿತು. ಜೈನ್ ಕಾಲೇಜಿನ ಭವ್ಯ ಸಚ್ದೇವ್ ಕೂಡ ಈಜಿನಲ್ಲಿ ಜೈನ್ ಕಾಲೇಜು ಅಗ್ರ ಸ್ಥಾನಕ್ಕೇರಲು ನೆರವಾದರು.
ಸಿದ್ಧಿ ಸಮುದಾಯಕ್ಕೊಂದು ಕಂಚಿನ ಕೊಡುಗೆ: ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ನಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಸಮುದಾಯದ ಶಾಲಿನ ಸಯರ್ ಸಿದ್ಧಿ 57 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿರುವುದು ಚಿನ್ನ ಗೆದ್ದಷ್ಟೇ ಸಂಂಭ್ರಮವನ್ನುಂಟು ಮಾಡಿದೆ. ಕರ್ನಾಟಕ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದ ಗಾಯತ್ರಿ ರಮೇಶ್ ಸುತಾರ್ 59 ಕೆಜಿ ವಿಭಾಗದ ಫ್ರೀ ಸ್ಟೈಲ್ ಕುಸ್ತಿಯಲ್ಲಿ ಚಿನ್ನ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾನಿಲಯದ ಈಜುಪಟುಗಳು 2 ಚಿನ್ನ, 2 ಬೆಳ್ಳಿ ಹಾಗೂ 3 ಕಂಚಿನ ಪದಕ ಗೆದ್ದಿರುತ್ತಾರೆ. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಈಜುಪಟುಗಳು 5 ಬೆಳ್ಳಿ ಹಾಗೂ 2 ಕಂಚಿನ ಪದಕ ಗೆದ್ದಿರುತ್ತಾರೆ. ಬೆಂಗಳೂರು ಸಿಟಿ ವಿಶ್ವವಿದ್ಯಾನಿಲಯ ಈಜಿನಲ್ಲಿ 4 ಬೆಳ್ಳಿ ಹಾಗೂ ಫೆನ್ಸಿಂಗ್ನಲ್ಲಿ 1 ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾರೆ.
ಜಮಖಂಡಿಯ ಬಾಗಲಕೋಟೆ ವಿಶ್ವವಿದ್ಯಾನಿಲಯದ ನಂದಾ ಚಿಚಖಂಡಿ ವನಿತೆಯರ ರೋಡ್ ಸೈಕ್ಲಿಂಗ್ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

