ಪ್ರೋ ಪಂಜಾ ಲೀಗ್: ಸ್ಪರ್ಧೆಯಲ್ಲಿ ಗುರುವನ್ನೇ ಸೋಲಿಸಿದ ಶಿಷ್ಯೆ
ಗ್ವಾಲಿಯರ್: ಇಲ್ಲಿ ನಡೆಯುತ್ತಿರುವ ಪ್ರೋ ಪಂಜಾ ಲೀಗ್‌ನ ಎರಡನೇ ಆವೃತ್ತಿಯಲ್ಲಿ ತನಗೆ ತರಬೇತಿ ನೀಡಿದ ಗುರುವನ್ನೇ ಶಿಷ್ಯೆಯೊಬ್ಬರು ಸೋಲಿಸಿದ ಅಪೂರ್ವ ಘಟನೆ ನೆಡೆದಿದೆ. Nirmal Devi defeats her mentor Yogesh Chaudhary in historic Pro Panja League Independence Day clash
ಲೀಗ್‌ನಲ್ಲಿ ಸ್ಪರ್ಧಿಸುತ್ತಿರುವ ರೋಹ್ತಾಕ್ ರೌಡೀಸ್ ತಂಡದ ಸ್ಪರ್ಧಿ ನಿರ್ಮಲ್ ದೇವಿ ಅವರು 65 ಕೆಜಿ ವಿಭಾಗಲ್ಲಿ ಜೈಪೂರ್ ವೀರ್ಸ್ ತಂಡದ ಯೋಗೇಶ್ ಚೌಧರಿಗೆ ಸೋಲುಣಿಸಿದ್ದಾರೆ. ಇದರೊಂದಿಗೆ ಪ್ರೋ ಪಂಜಾ ಲೀಗ್‌ನಲ್ಲಿ ಮೊದಲ ಬಾರಿಗೆ ಕೋಚ್ ಹಾಗೂ ಮೆಂಟರ್ ಅವರನ್ನು ಶಿಷ್ಯೆಯೊಬ್ಬರು ಸೋಲಿಸಿದಂತಾಗಿದೆ.
ನಿರ್ಮಲ್ ದೇವಿ ಅವರ ಈ ಸಾಧನೆಯನ್ನು ನೋಡಿ ಎಲ್ಲ ತಂಡಗಳ ನಾಯಕರು ಎದ್ದು ನಿಂತು ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು.