Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಗಿಲ್ಲಿಗೆ ಬಿಗ್‌ ಬಾಸ್‌, ಗಿಲ್‌ಗೆ ಬಿಗ್‌ ಲಾಸ್‌!

ಇಂದೋರ್‌: ಭಾರತ ಕ್ರಿಕೆಟ್‌ ತಂಡ ನ್ಯೂಜಿಲೆಂಡ್‌ ವಿರುದ್ಧದ  ಏಕದಿನ ಸರಣಿಯಲ್ಲಿ 2-1 ಅಂತರದಲ್ಲಿ ಸೋಲನುಭವಿಸಿದ್ದು, ನಾಯಕನಾಗಿ ಶುಭ್ಮನ್‌ ಗಿಲ್‌ಗೆ ಇದು ದೊಡ್ಡ ನಷ್ಟ. ಅಂದರೆ ಬಿಗ್‌ ಲಾಸ್‌. ಅದೇ ರೀತಿ ಕರ್ನಾಟಕದಲ್ಲಿ ಸಾಕಷ್ಟು ಚರ್ಚೆಯ ಕೇಂದ್ರವಾಗಿದ್ದ ಬಿಗ್‌ ಬಾಸ್‌ 12ನೇ ಸೀಸನ್‌ನಲ್ಲಿ ಗಿಲ್ಲಿ ನಟ ಅವರು ಪ್ರಶಸ್ತಿ ಗೆದ್ದಿದ್ದಾರೆ. New Zealand won the final match by 41 run and won the series by 2-1.

ಸರಣಿಯಲ್ಲಿ ಕುತೂಹಲ ಕಾಯ್ದುಕೊಳ್ಳುವುದಕ್ಕಾಗಿ ಎರಡನೇ ಪಂದ್ಯದಲ್ಲಿ ಸಾಮರ್ಥ್ಯಕ್ಕೆ ತಕ್ಕಂತೆ ಆಡದ ಭಾರತ ಮೂರನೇ ಪಂದ್ಯದಲ್ಲಿ ಜಯ ಗಳಿಸಿ ಸರಣಿ ಗೆಲ್ಲುವ ಯೋಜನೆ ಹಾಕಿಕೊಂಡಿತ್ತು. ಆದರೆ ಡೆರಿಲ್‌ ಚಿಚೆಲ್‌ (137) ಹಾಗೂ ಗ್ಲೆನ್‌ ಫಿಲಿಪ್ಸ್‌ (106) ಅವರ ಆಕರ್ಷಕ ಶತಕದ ನೆರವಿನಿಂದ ಕಿವೀಸ್‌ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 337 ರನ್‌ ಗಳಿಸಿ ಸವಾಲನ್ನು ನೀಡಿತ್ತು.

ಉತ್ತಮ ಬ್ಯಾಟಿಂಗ್‌ ಪಡೆಯನ್ನು ಹೊಂದಿತುವ ಭಾರತಕ್ಕೆ ಈ ಮೊತ್ತ ಕಠಿಣವಾಗಿರಲಿಲ್ಲ. ಆದರೆ ನ್ಯೂಜಿಲೆಂಡ್‌ ಬೌಲರ್‌ಗಳು ಭಾರತದ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದರು. ವಿರಾಟ್‌ ಕೊಹ್ಲಿ ಅವರ ಆಕರ್ಷಕ ಶತಕ (124) ಹಾಗೂ ನಿತೀಶ್‌ ಕುಮಾರ್‌ (53) ಹಾಗೂ ಹರ್ಷಿತ್‌ ರಾಣಾ (52) ಅವರ ಅರ್ಧ ಶತಕದ ನಡುವೆಯೂ 41 ರನ್‌ ಅಂತರದಲ್ಲಿ ಸೋಲೊಪ್ಪಿಕೊಂಡಿತು. ವಿರಾಟ್‌ ಕೊಹ್ಲಿ ಏಕದಿನದಲ್ಲಿ 54ನೇ ಶತಕ ಸಿಡಿಸಿದರು, ಆದರೆ ಭಾರತ 286 ರನ್‌ಗೆ ಸರ್ವ ಪತನ ಕಂಡಿತು.


administrator