Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ರಾಹುಲ್‌ ಶತಕ ವ್ಯರ್ಥ: ಸೋಲುಂಡ ತವರು

ರಾಜ್‌ಕೋಟ್‌: ಬಹಳ ಸಮಯದ ಬಳಿಕ ಕೆ.ಎಲ್‌. ರಾಹುಲ್‌ (112*) ಶತಕ ಗಳಿಸಿದರೂ ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಜಯ ಗಳಿಸಲು ವಿಫಲವಾಗಿದೆ. ಡೆರಿಲ್‌ ಮಿಚೆಲ್‌ (131*) ಅವರ ಶಕತದ ನೆರವಿನಿಂದ ಪ್ರವಾಸಿ ಕಿವೀಸ್‌ ತಂಡ 7 ವಿಕೆಟ್‌ ಜಯ ಗಳಿಸಿದೆ. New Zealand beat India by 7 wickets with Daryl Mitchell scoring a brilliant 131*

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ನ್ಯೂಜಿಲೆಂಡ್‌ ಉತ್ತಮ ರೀತಿಯಲ್ಲಿ ಬೌಲಿಂಗ್‌ ಪ್ರದರ್ಶಿಸಿ ಭಾರತವನ್ನು 284 ರನ್‌ ಗೆ ಕಟ್ಟಿ ಹಾಕಿತು. ನಾಯಕ ಶುಭ್ಮನ್‌ ಗಿಲ್‌ 56 ರನ್‌ ಗಳಿಸಿ ನಾಯಕನ ಜಾವಾಬ್ದಾರಿಯುತ ಆಟ ಪ್ರದರ್ಶಿಸಿದರು. ಈ ಬಾರಿ ರೋಹಿತ್‌ ಶರ್ಮಾ (24) ಹಾಗೂ ವಿರಾಟ್‌ ಕೊಹ್ಲಿ (23) ಅಲ್ಪ ಮೊತ್ತಕ್ಕೆ ಪೆವಿಲಿಯನ್‌ ಸೇರಿದರು. ಇಂಥ ಸಂದರ್ಭದಲ್ಲಿ ಅಂಗಣಕ್ಕಿಳಿದ ಕೆ ಎಲ್‌ ರಾಹುಲ್‌ 92 ಎಸೆತಗಳನ್ನೆದುರಿಸಿ 11 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ ಅಜೇಯ 112 ರನ್‌ ಗಳಿಸಿ ಏಕದಿನ ಕ್ರಿಕೆಟ್‌ನಲ್ಲಿ 8 ನೇ ಶತಕ ದಾಖಲಿಸಿದರು. 2023ರ ನಂತರ ರಾಹುಲ್‌ ಏಕದಿನದಲ್ಲಿ ಶತಕ ಗಳಿಸಿದ್ದು ಇದೇ ಮೊದಲು.

ಸಾಧಾರಣ ಮೊತ್ತವನ್ನು ಬೆಂಬತ್ತಿದ ನ್ಯೂಜಿಲೆಂಡ್‌ 46 ರನ್‌ಗೆ 2 ವಿಕೆಟ್‌ ಕಳೆದುಕೊಂಡಿತ್ತು, ಆದರೆ ವಿಲ್‌ ಯಂಗ್‌ (87) ಹಾಗೂ ಡೆರಿಲ್‌ ಮಿಚೆಲ್‌ 162 ರನ್‌ ಜೊತೆಯಾಟವಾಡಿ ಜಯಕ್ಕೆ ಭದ್ರತಳಪಾಯ ಹಾಕಿದರು. ಮಿಚೆಲ್‌ 117 ಎಸೆತಗಳನ್ನೆದುರಿಸಿ 11 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ 131* ರನ್‌ ಗಳಿಸಿ ಏಕದಿನದಲ್ಲಿ 8ನೇ ಶತಕ ಪೂರ್ಣಗೊಳಿಸಿದರು.


administrator