ನನಗೂ ಕನ್ನಡ ಬರುತ್ತೆ ಗುರು: ರಾಹುಲ್ ದ್ರಾವಿಡ್!!!
ಬೆಂಗಳೂರು: ಇಂದು ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರ ಹುಟ್ಟುಹಬ್ಬ, ವೃತ್ತಿ ಬದುಕಿನಲ್ಲಿ ರಾಹುಲ್ ದ್ರಾವಿಡ್ ಅವರನ್ನು ಹಲವು ಸಂದರ್ಭದಲ್ಲಿ ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಆದರೆ ಒಂದು ಚರ್ಚೆಯ ವೇಳೆ ಕೇಳಿದ ಪ್ರಶ್ನೆಗೆ ಅವರು ನೀಡಿದ ಉತ್ತರ ಇಲ್ಲದೆ. Nanagoo Kannada barutte guru, Guru me also know Kannada…
18 ವರ್ಷಗಳ ಹಿಂದಿನ ಮಾತು. ಆಗ ನಾನು ಕನ್ನಡ ಪ್ರಭದಲ್ಲಿ ಕೆಲಸ ಮಾಡುತ್ತಿದ್ದೆ. ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೊಟೇಲ್‌ನಲ್ಲಿ ಬಿಬಿಸಿ ರೇಡಿಯೋ ಲೈವ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಅದು ರಾಹುಲ್ ದ್ರಾವಿಡ್ ಅವವರೊಂದಿಗೆ ಚರ್ಚೆ. ಪತ್ರಕರ್ತರಲ್ಲಿ ಯಾರಾದರೂ ಪ್ರಶ್ನೆ ಕೇಳುವುದಿದ್ದರೆ ಚೀಟಿಯಲ್ಲಿ ಬರೆದು ಕೊಡಬೇಕಿತ್ತು, ನನಗೆ ಒಂದು ಸಂಶಯ ಕ್ಲಿಯರ್ ಮಾಡಿಕೊಳ್ಳಬೇಕಾಗಿತ್ತು. ರಾಹುಲ್ ದ್ರಾವಿಡ್‌ಗೆ ಕನ್ನಡ ಬರುತ್ತಾ? ಎಂಬುದು ಆ ಸಂಶಯ. ಚೀಟಿಯಲ್ಲಿ “Can you talk in Kannada?” ಎಂದು ಚೀಟಿಯಲ್ಲಿ ಬರೆದು ಕಳುಹಿಸಿದೆ. ಅದಕ್ಕೆ ರಾಹುಲ್ ದ್ರಾವಿಡ್ ಅವರು ನೀಡಿದ ಉತ್ತರ ಅದ್ಭುತವಾಗಿತ್ತು, “ಏನ್ ಗುರು…. ನನಗೂ ಕನ್ನಡ ಬರುತ್ತೆ ಗುರು, ಎಂದು ಕನ್ನಡದಲ್ಲೇ ಹೇಳಿ, ಬಳಿಕ ಬೇರೆವರಿಗೆ ಅರ್ಥವಾಗಲಿ ಎಂದು ಇಂಗ್ಲಿಷ್‌ನಲ್ಲಿ “ನಾವೂ ಪಂದ್ಯದ ವೇಳೆ, ಕರ್ನಾಟಕದ ಆಟಗಾರರೊಂದಿಗೆ ಕನ್ನಡದಲ್ಲೇ ಮಾತನಾಡುತ್ತೇವೆ,” ಎಂದರು. ಮರುದಿವಸ ಕನ್ನಡ ಪ್ರಭದಲ್ಲಿ, “ನನಗೂ ಕನ್ನಡ ಬರುತ್ತೆ ಗುರುʼ ಎಂದ ದ್ರಾವಿಡ್ ಎಂಬ ಹೆಡ್ಡಿಂಗ್‌ನಲ್ಲಿ ಸುದ್ದಿ ಪ್ರಕಟವಾಗಿತ್ತು.
ಇನ್ನೊಮ್ಮೆ ಚಿನ್ನಸ್ವಾಮಿ ಕ್ರೀಡಾಂಗಣದ ಬಿ ಗ್ರೌಂಡ್‌ನಲ್ಲಿದ್ದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA)ನಲ್ಲಿ ಜಿಮ್‌ನಲ್ಲಿದ್ದ ರಾಹುಲ್ ದ್ರಾವಿಡ್ ಹೊರಗೆ ಬರುವುದನ್ನು ಕಾಯುತ್ತಿದ್ದೆವು. ಆಗ ಅವರ ಹಿರಿಯ ಮಗ ಸಮಿತ್ ದ್ರಾವಿಡ್ ಕ್ರಿಕೆಟ್‌ಗೆ ಕಾಲಿಟ್ಟಿದ್ದರು, ಹೊರಗೆ ಬರುತ್ತಿದ್ದ ದ್ರಾವಿಡ್ ಅವರಲ್ಲಿ ಒಂದು ಫೋಟೋ ತೆಗೆಸಿಕೊಂಡು, ಬಳಿಕ, “ಮಗನ ಬಗ್ಗೆ ಮಾತನಾಡಬಹುದಾ?” ಎಂದು ಕೇಳಿದೆ, ಆಗ ದ್ರಾವಿಡ್, “ದಯವಿಟ್ಟು leave him, let him play first, ಬೇಸರ ಮಾಡಬೇಡಿ” ಎಂದು ಹೊರಟು ಹೋದರು,
ಸಚಿನ್ ಅವರನ್ನು ಕ್ರಿಕೆಟ್‌ನ ದೇವರು ಎಂದು ಕರೆಯುತ್ತೇವೆ, ಅವರನ್ನು ದ್ವೇಷಿಸುವವರೂ ಇರಬಹುದು, ಆದರೆ ಕ್ರೀಡಾ ಜಗತ್ತು ಹೆಚ್ಚು ಇಷ್ಟಪಡುವ ಆಟಗಾರರೆಂದರೆ ಅದು “ರಾಹುಲ್ ದ್ರಾವಿಡ್”.
ಇಂದು ಕ್ರಿಕೆಟ್ ಜಗತ್ತಿನ ಗ್ರೇಟ್ ವಾಲ್ ಎಂದೇ ಖ್ಯಾತಿ ಪಡೆದಿರುವ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರ ಹುಟ್ಟು ಹಬ್ಬ. ಹಾಗಾಗಿ ನೆನಪಿನಂಗಳದಲ್ಲಿ ಚಿಕ್ಕ ಮೆಲುಕು….. ಶುಭಾಶಯಗಳು ದ್ರಾವಿಡ್ ಸರ್.

