Thursday, October 10, 2024

ಸಿಮ್‌ ಮಾರುವ ಹುಡುಗನ ಕಂಚಿನ ಪದಕದ ಸಾಧನೆ!

ಬದುಕಿನಲ್ಲಿ ದುರಂತಳು ಸಂಭವಿಸಲೇ ಬಾರದು. ಆದರೆ ಕೆಲವು ದುರಂತಗಳು ಬದುಕಿಗೆ ಹೊಸ ತಿರುವನ್ನೇ ನೀಡುತ್ತವೆ. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿರುವ ಭಾರತದ 84 ಕ್ರೀಡಾ ಸಾಧಕರ ಬದುಕಿನ ಹಿನ್ನಲೆಯನ್ನು ಗಮನಿಸಿದಾಗ ಅಲ್ಲಿ 84 ದುರಂತ ಕತೆಗಳಿವೆ. ಆದರೆ ಆ ದುರಂತ ಕತೆಗಳು ಈಗ ಸುಖಾಂತದತ್ತ ಮುಖಮಾಡಿವೆ. ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನ ಮಿಶ್ರ ಆರ್ಚರಿಯಲ್ಲಿ ಜಮ್ಮುವಿನ ಕೈ ಇಲ್ಲದೆ ಕಾಲಿನಲ್ಲೇ ಗುರಿ ಇಡುವ ಬಿಲ್ಗಾರ್ತಿ ಶೀತಲ್‌ ದೇವಿಯ ಜೊತೆಗೂಡಿ ಕಂಚಿನ ಪದಕ ಗೆದ್ದಿರುವ ರಾಕೇಶ್‌ ಕುಮಾರ್‌ ಅವರ ಬದುಕಿನ ಕತೆಯೂ ಕೂಡ ದುರಂತದಿಂದ ಹೊರತಾಗಿಲ್ಲ. Mobile sim seller Rakesh Sharma won the medal at Paris Paralympics.

ಜಮ್ಮು ಮತ್ತು ಕಾಶ್ಮೀರದಲ್ಲಿರುವ ವೈಷ್ಣೋ ದೇವಿ ದೇವಾಲಯವಿರುವ ಕತ್ರಾ ಗ್ರಾಮದಲ್ಲಿ ನೆಲೆಸಿರುವ ರಾಕೇಶ್‌ ಕುಮಾರ್‌ 2009ರಲ್ಲಿ ಕಾರು ಅಪಘಾತದಲ್ಲಿ ಬೆನ್ನುಮೂಳೆ ಮುರಿದುಕೊಂಡು ವೀಲ್‌ಚೇರ್‌ಗೆ ಆಶ್ರಯವಾಗಬೇಕಾಯಿತು. ಬಡವರ ಮನೆಯ ಹುಡುಗ ಬೇರೆ ದಾರಿ ಇಲ್ಲದೆ ಮನೆಯ ಎದುರುಗಡೆ ಮೊಬೈಲ್‌ ಸಿಮ್‌ ಮತ್ತು ಇತರ ಪರಿಕರಗಳನ್ನು ಮಾರುವ ಅಂಗಡಿ ಇಟ್ಟುಕೊಂಡು ದಿನ ದೂಡುತ್ತಿದ್ದ. ಒಂದು ದಿನ ವೈಷ್ಣೋದೇವಿ ದೇವಸ್ಥಾನದ ಕ್ರೀಡಾ ಅಕಾಡೆಮಿಯ ಆರ್ಚರಿ ಕೋಚ್‌ ಕುಲದೀಪ್‌ ವಿದ್ವಾನ್‌ ಈ ಅಂಗಡಿಗೆ ಬರುತ್ತಾರೆ. ರಾಕೇಶ್‌ ಅವರನ್ನು ಕಂಡು ಅಕಾಡೆಮಿಗೆ ಕರೆದೊಯ್ಯುತ್ತಾರೆ. ವೈಷ್ಣೋದೇವಿ ದೇವಾಲಯ ಎಲ್ಲ ವರ್ಗದ ಜನರಿಗೆ ಕ್ರೀಡಾ ತರಬೇತಿ ನೀಡುತ್ತಿರುವ ಏಕೈಕ ದೇವಾಲಯ. ಇಲ್ಲಿ ತರಬೇತಿ ಪಡೆದ ರಾಕೇಶ್‌ ಶರ್ಮಾ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ಸಾಧನೆ ಮಾಡುತ್ತಾರೆ. ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಗೆದ್ದಿರುವ ಕಂಚಿನ ಪದಕ ಅವರ ಬದುಕಿಗೆ ಹೊಸ ನೆಲೆಯನ್ನು ನೀಡಿತು. ತಾನು ಕಲಿಯುವುದರ ಜೊತೆಯಲ್ಲಿ ಅಕಾಡೆಮಿಯ ಇತರ ಬಿಲ್ಗಾರರಿಗೂ ರಾಕೇಶ್‌ ತರಬೇತಿ ನೀಡುತ್ತಿದ್ದಾರೆ. ಏಷ್ಯನ್‌ ಗೇಮ್ಸ್‌, ವಿಶ್ವ ಚಾಂಪಿಯನ್‌ಷಿಪ್‌ ಹಾಗೂ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ರಾಕೇಶ್‌ ಶರ್ಮಾ ಭಾರತದ ಹೆಮ್ಮೆ.

Related Articles