ಕಬಡ್ಡಿ: ಉಡುಪಿ ಜಿಲ್ಲಾ ಮಟ್ಟಕ್ಕೆ ಮಣೂರು ಪಡುಕರೆ ಪ್ರೌಢ ಶಾಲೆ
ಕೋಟ: ದೈಹಿಕ ಶಿಕ್ಷಕ ಚಂದ್ರಶೇಖರ ಶೆಟ್ಟಿ ಅವರ ತರಬೇತಿಯಲ್ಲಿ ಪಳಗಿದ ಹಾಗೂ ಅನುಭವಿ ಆಟಗಾರ ಲಕ್ಷ್ಮೀಶ್ ಶ್ರೀಯಾನ್ ಅವರ ನಾಕಯಕತ್ವದಲ್ಲಿ ಉತ್ತಮ ಪ್ರದರ್ಶನ ತೋರಿದ ಸರಕಾರಿ ಪ್ರೌಢ ಶಾಲೆ ಮಣೂರು ತಂಡ ಉಡುಪಿ ತಾಲೂಕು ಮಟ್ಟದ ಕಬಡ್ಡಿಯಲ್ಲಿ ಜಯ ಗಳಸಿ ಜಿಲ್ಲಾ ಮಟ್ಟಕ್ಕೆ ಅರ್ಹತೆ ಪಡೆದಿದೆ. Manuru Padukare High School Kabaddi team qualify for Udupi District level.
ಕುಂಜಾಲು ಪ್ರೌಢ ಶಾಲಾ ಆತಿಥ್ಯದಲ್ಲಿ ನಡೆದ ಬ್ರಹ್ಮಾವರ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಮಣೂರು ಪಡುಕರೆ ಪ್ರೌಢ ಶಾಲೆ ನಿಟ್ಟೂರು ಶಾಲೆಯ ವಿರುದ್ಧದ ಫೈನಲ್ ಪಂದ್ಯದಲ್ಲಿ ಜಯ ಗಳಿಸಿ ಜಿಲ್ಲಾ ಮಟ್ಟಕ್ಕೆ ಅರ್ಹತೆ ಪಡೆಯಿತು.
ಕಳೆದ ಬಾರಿ ವಲಯ ಮಟ್ಟದಲ್ಲಿ ಆಡಿ ಅನುಭವ ಹೊಂದಿರುವ ಲಕ್ಷ್ಮೀಶ್ ನಾಯಕತ್ವದ ಮಣೂರು ಪಡುಕರೆ ಪ್ರೌಢ ಶಾಲೆ ಸೆಪ್ಟೆಂಬರ್ 11 ರಂದು ಉಡುಪಿ ಜಿಲ್ಲೆ ಕೋಡಿ ಕನ್ಯಾಣ ಪ್ರೌಢ ಶಾಲೆಯ ಆತಿಥ್ಯದಲ್ಲಿ ನಡೆಲಿರುವ ಜಿಲ್ಲಾ ಮಟ್ಟದ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಗೆದ್ದು ವಿಭಾಗೀಯ ಮಟ್ಟಕ್ಕೆ ಅರ್ಹತೆ ಪಡೆಯುವ ಗುರಿ ಹೊಂದಿದೆ.
ತಂಡದ ಯಶಸ್ಸಿಗೆ ಶಾಲೆಯ ಮುಖ್ಯೋಪಾಧ್ಯಾಯರಾದ ವಿವೇಕಾನಂದ ಗಾಂವ್ಕರ್ ಹಾಗೂ ಅಧ್ಯಾಪಕ ವೃಂದ ಅಭಿನಂದನೆಯನ್ನು ಸಲ್ಲಿಸಿದೆ.