Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಪಾಂಡೆ ಮಿಂಚು, ಮೈಸೂರು ವಾರಿಯರ್ಸ್‌ ಶುಭಾರಂಭ

ಮೈಸೂರು: ಮನೀಷ್ ಪಾಂಡೆ ಮತ್ತು ಸುಮಿತ್ ಕುಮಾರ್ ಅವರ ಅಜೇಯ 86 ರನ್‌ಗಳ ಜೊತೆಯಾಟ ಮತ್ತು ಎಲ್.ಆರ್. ಕುಮಾರ್ ಅವರ ಅಮೂಲ್ಯ ಮೂರು ವಿಕೆಟ್‌ ಸಾಧನೆಯ ನೆರವಿನಿಂದ  ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್ ತಂಡವು ಶ್ರೀರಾಮ್ ಕ್ಯಾಪಿಟಲ್ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20ಯ ತನ್ನ ಮೊದಲ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 39 ರನ್‌ಗಳ ಅದ್ಭುತ ಜಯ ದಾಖಲಿಸಿ, ಶುಭಾರಂಭ ಕಂಡಿದೆ.

Manish Pandey and Sumit star in Mysuru Warriors opening match triumph at KSCA Maharaja Trophy T20.

ಬ್ಲಾಸ್ಟರ್ಸ್ ತಂಡವು 19.1 ಓವರ್‌ಗಳಲ್ಲಿ 141 ರನ್‌ಗೆ ಸರ್ವ ಪತನ ಕಂಡಿತ್ತು. ನಾಯಕ ಮಯಾಂಕ್ ಅಗರವಾಲ್ 49 ಎಸೆತಗಳಲ್ಲಿ ಗಳಿಸಿದ 66 ರನ್‌ಗಳು ತಂಡಕ್ಕೆ ಜಯ ತರುವಲ್ಲಿ ವಿಫಲವಾಯಿತು. 180 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಬ್ಯಾಟಿಂಗ್ ಕ್ರಮಾಂಕವನ್ನು ಮೈಸೂರು ಬ್ಲಾಸ್ಟರ್ಸ್ ತಂಡದ ವೇಗಿಗಳಾದ ಎಲ್.ಆರ್. ಕುಮಾರ್ ಮತ್ತು ಕಾರ್ತಿಕ್ ಸಿಎ ಹಿಮ್ಮೆಟ್ಟುವಲ್ಲಿ ಯಶಸ್ವಿಯಾದರು. ಎಲ್.ಆರ್. ಕುಮಾರ್ ಮೊದಲ ವಿಕೆಟ್ ಪಡೆದರು, 8 ರನ್‌ ಗಳಿಸಿ ಆಡುತ್ತಿದ್ದ ಚೇತನ್‌ ಅವರ ವಿಕೆಟನ್ನು ಕಬಳಿಸಿಲು ಮನೀಶ್‌ ಪಾಂಡೆ ಅವರ ಕ್ಯಾಚ್‌ ನೆರವಾದರೆ, ರೋಹನ್ ಪಾಟೀಲ್ (10) ಕಾರ್ತಿಕ್ ಬೌಲಿಂಗ್‌ನಲ್ಲಿ ಔಟ್ ಆದರು. 4ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಭುವನ್ ರಾಜು ಗೋಲ್ಡನ್ ಡಕ್‌ಗೆ ಔಟಾದರು, ಬ್ಲಾಸ್ಟರ್ಸ್ 3.4 ಓವರ್‌ಗಳಲ್ಲಿ 3 ವಿಕೆಟ್‌ಗೆ ಕೇವಲ 22 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತು. ಬ್ಲಾಸ್ಟರ್ಸ್ ತಂಡದ ನಾಯಕ ಮಯಾಂಕ್ ಅಗರವಾಲ್ ಮತ್ತು ಶುಭಾಂಗ್ 32 ರನ್‌ಗಳೊಂದಿಗೆ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಲು ಪ್ರಯತ್ನಿಸಿದರು ಆದರೆ ಕೆ. ಗೌತಮ್ ಅವರ ಜೊತೆಯಾಟವನ್ನು ಮುರಿದರು, ಭುವನ್ ಶೆಟ್ಟಿ ಅವರು ಶಭಾಂಗ್‌ ಹೆಗ್ಡೆಗೆ ಕ್ಯಾಚ್ ನೀಡಿದರು. ಗೌತಮ್ ಸೂರಜ್ ಅಹುಜಾ ಅವರ ವಿಕೆಟ್ ಪಡೆದರೆ, ಶಿಖರ್ ಶೆಟ್ಟಿ ರೋಹನ್ ನವೀನ್ ಮತ್ತು ಎಂ. ವೆಂಕಟೇಶ್ ನವೀನ್ ಎಂಜಿ ಅವರನ್ನು ಔಟ್ ಮಾಡುವ ಮೂಲಕ ಮೈಸೂರು ವಾರಿಯರ್ಸ್‌ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಆದಾಗ್ಯೂ, ಬ್ಲಾಸ್ಟರ್ಸ್ ತಂಡದ ನಾಯಕ ಅಗರವಾಲ್ ಇನ್ನೂ ಕ್ರೀಸ್‌ನಲ್ಲಿ ಇದ್ದುದರಿಂದ, ಆದರೆ ರನ್ ರೇಟ್ ಕಡಿಮೆಯಾಗುತ್ತಿದ್ದ ಕಾರಣ, ಬೆಂಗಳೂರು ತಂಡವು ಕಠಿಣ ಹೋರಾಟದತ್ತ ಮುಖ ಮಾಡಿತ್ತು. ಟೈಲ್-ಎಂಡರ್‌ಗಳು ವೇಗವಾಗಿ ಆಟ ಆರಂಭಿಸಿದರು, ಮತ್ತು ಮಾಯಾಂಕ್ ಕೂಡ 19 ನೇ ಓವರ್‌ನಲ್ಲಿ  ನಿರ್ಗಮಿಸಿದರು.

ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಾಯಕ ಮನೀಷ್ ಪಾಂಡೆ 29 ಎಸೆತಗಳಲ್ಲಿ ಅಜೇಯ 58 ರನ್ ಗಳಿಸುವ ಮೂಲಕ ಮೈಸೂರು ಐದು ವಿಕೆಟ್‌ಗಳಿಗೆ 180 ರನ್‌ಗಳ ಬೃಹತ್‌ ಮೊತ್ತವನ್ನು ದಾಖಲಿಸಲು ನೆರವಾಯಿತು, ಪಾಂಡೆ ಅವರ ಇನ್ನಿಂಗ್ಸ್ ನಲ್ಲಿ ನಾಲ್ಕು ಬೌಂಡರಿಗಳು ಮತ್ತು ನಾಲ್ಕು ಸಿಕ್ಸರ್‌ ಸೇರಿತ್ತು. ಅವರ ಇನ್ನಿಂಗ್ಸ್‌ಗೆ ಸಾಥ್‌ ನೀಡಿದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸುಮಿತ್ ಕುಮಾರ್ 44 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು.

ಸಂಕ್ಷಿಪ್ತ ಸ್ಕೋರ್‌:

ಮೈಸೂರು ವಾರಿಯರ್ಸ್ 20 ಓವರ್‌ಗಳಲ್ಲಿ 180/5 (ಹರ್ಷಿಲ್ ಧರ್ಮಾನಿ 31 ಎಸೆತಗಳಲ್ಲಿ 38 ರನ್‌ಗಳು, ಮನೀಶ್ ಪಾಂಡೆ 29 ಎಸೆತಗಳಲ್ಲಿ 58* ರನ್‌ಗಳು, ಸುಮಿತ್ ಕುಮಾರ್ 28 ಎಸೆತಗಳಲ್ಲಿ 44* ರನ್‌ಗಳು, ಶುಭಾಂಗ್ ಹೆಗ್ಡೆ 3/23, ನವೀನ್ ಎಂಜಿ 1/27, ವಿದ್ಯಾಧರ್ ಪಾಟೀಲ್ 1/36)

ಬೆಂಗಳೂರು ಬ್ಲಾಸ್ಟರ್ಸ್ 19.2 ಓವರ್‌ಗಳಲ್ಲಿ 141/10 (ಮಾಯಾಂಕ್ ಅಗರವಾಲ್ 49 ಎಸೆತಗಳಲ್ಲಿ 66 ರನ್‌ಗಳು, ವಿದ್ಯಾಧರ್ ಪಾಟೀಲ್ 9 ಎಸೆತಗಳಲ್ಲಿ 16 ರನ್‌ಗಳು, ಕುಮಾರ್ ಎಲ್‌ಆರ್ 3/27, ಸಿಎ ಕಾರ್ತಿಕ್ 3/21, ಕೆ ಗೌತಮ್ 2/28)


administrator