ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್: ಫೈನಲ್‌ಗೆ ಲಕ್ಷ್ಯ ಸೇನ್
ಲಂಡನ್: ಕೆನಡಾದ ವಿಕ್ಟರ್ ಲಾಯ್ ಅವರನ್ನು 21-16, 18-21, 21-15 ಅಂತರದಲ್ಲಿ ಮಣಿಸಿದ ಭಾರತದ ಲಕ್ಷ್ಯ ಸೇನ್ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಫೈನಲ್ ತಲುಪಿದ್ದಾರೆ. Lakshya Sen Defeats Victor Lai To Enter All England Championships Badminton Final.
ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ 12ನೇ ರಾಂಕ್ ಆಟಗಾರ ಲಕ್ಷ್ಯ ಸೇನ್, 16ನೇ ರಾಂಕ್ ಆಟಗಾರ ವಿಕ್ಟರ್ ಅವರನ್ನು 1 ಗಂಟೆ ಹಾಗೂ 37ನೇ ನಿಮಿಷಗಳ ಹೋರಾಟದಲ್ಲಿ ಮಣಿಸಿ ಎರಡನೇ ಬಾರಿಗೆ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನ ಫೈನಲ್ ಪ್ರವೇಶಿಸಿದರು.
2022ರಲ್ಲೂ ಫೈನಲ್ ತಲುಪಿದ್ದ ಲಕ್ಷ್ಯ ಸೇನ್ ಭಾನುವಾರ ನಡೆಲಿರುವ ಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆಯ ಲಿನ್ ಚನ್ -ಯಿ ವಿರುದ್ಧ ಸೆಣಸಲಿದ್ದಾರೆ.

