ದಕ್ಷಿಣ ವಲಯ ಜೂನಿಯರ್ ಹಾಕಿ: ಕರ್ನಾಟಕ ಚಾಂಪಿಯನ್
ಬೆಂಗಳೂರು: ಆಂಧ್ರಪ್ರದೇಶದ ವಿರುದ್ಧದ ಫೈನಲ್ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಕರ್ನಾಟಕ ಬಾಲಕಿಯರ ತಂಡ 19 ವರ್ಷ ವಯೋಮಿತಿಯ ದಕ್ಷಿಣ ವಲಯ ಹಾಕಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. Karnataka South Zone U19 girls hockey championship by defeating Andhra Pradesh by 2-0 goals.
ನಾಯಕಿ ದೀಪಿಕಾ ಆರ್. ಎರಡು ಗೋಲುಗಳನ್ನು ಗಳಿಸಿ ಚಾಂಪಿಯನ್ ಪಟ್ಟದ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು. ಕರ್ನಾಟಕ ಬಾಲಕಿಯರ ತಂಡದ ಈ ಸಾಧನೆಗೆ ಹಾಕಿ ಕರ್ನಾಟಕ ಅಭಿನಂದನೆ ಸಲ್ಲಿಸಿದೆ.

