ಜನತಾ ಪಿಯು ಕಾಲೇಜು ರಾಜ್ಯದಲ್ಲೇ ಟಾಪ್ 2
ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಶಿಕ್ಷಣ ಕ್ರಾಂತಿಯನ್ನೇ ಉಂಟು ಮಾಡಿರುವ ಕುಂದಾಪುರದ ಹೆಮ್ಮಾಡಿಯ ಜನತಾ ಶಿಕ್ಷಣ ಸಂಸ್ಥೆಯು ದ್ವಿತೀಯ ಪಿಯುಸಿ ಪಲಿತಾಂಶದಲ್ಲಿ ರಾಜ್ಯಕ್ಕೇ ದ್ವಿತೀಯ ಸ್ಥಾನ ಗಳಿಸಿದ್ದು, ಕಾಲೇಜಿನ 15 ವಿದ್ಯಾರ್ಥಿಗಳು ರಾಜ್ಯದಲ್ಲೇ ಅಗ್ರ ಸ್ಥಾನ ಪಡೆದಿದ್ದಾರೆ. Janata PU College Hemmadi, Kundapura, has secured second place in the state in the second PUC results, with 15 students from the college securing the top positions in the state.
ಶಿಕ್ಷಣ ತಜ್ಞ ಗಣೇಶ್ ಮೊಗವೀರ ಅವರ ಮುತುವರ್ಜಿಯಲ್ಲಿ ನಡೆಯುತ್ತಿರುವ ಈ ಕಾಲೇಜು ನೀಡುತ್ತಿರುವ ಶಿಕ್ಷಣ ಕ್ರಮ ರಾಜ್ಯಕ್ಕೇ ಮಾದರಿ ಎನಿಸಿದ್ದು, ಪಾಠದ ಜೊತೆಯಲ್ಲಿ ಕ್ರೀಡೆ, ಕಲೆ, ಸಂಸ್ಕೃತಿಯ ಕಡೆಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಇಲ್ಲಿಯ ವಿಶೇಷವಾಗಿದೆ.




ವಿಜ್ಞಾನ ವಿಭಾಗದಲ್ಲಿ ರಶ್ಮಿ ಪೈ 598, ಶ್ರಾವ್ಯ ದೇವಾಡಿಗ 597, ಅಕ್ಷತಾ ವೀರಣ್ಣ 596, ಪ್ರಜ್ಞಾ ಎಸ್ ಪೂಜಾರಿ 594, ಇಂಚರಾ ಅಶೋಕ್ 594, ಮಾನ್ಯ 592, ಪ್ರಸಾದ್ ಪೂಜಾರಿ 591, ಸ್ಮೃತಿಕಾ 590 ಅಂಕ ಗಳಿಸಿ ಅದ್ಭುತ ಸಾಧನೆ ಮಾಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಶಮ್ಯ ಶೆಟ್ಟಿ 597, ಪ್ರಥಮ್ ಕಾಂಚನ್ 596, ಸುಚಿತ್ರ 595, ಅನ್ವಿತಾ 594, ಸಾನಿಕಾ 593, ರನ್ಮಯ್ 592, ಪ್ರೀತನ್ 591, ಕಲ್ಪಿತಾ 592 ಅಂಕ ಗಳಿಸಿ ರಾಜ್ಯ ಮಟ್ಟದಲ್ಲೇ ವಿಶೇಷ ಸಾಧನೆ ಮಾಡಿದ್ದಾರೆ.



ಎಸ್.ಎಸ್.ಎಲ್.ಸಿ ತನಕ ಸರಕಾರಿ ಶಾಲೆಯಲ್ಲಿ ಓದಿದ್ದ ರಶ್ಮಿ ಪೈ ಇವರು ಪಿಯುಸಿಯನ್ನು ಹೆಮ್ಮಾಡಿಯ ಜನತಾ ಕಾಲೇಜಿನಲ್ಲಿ ಮುಂದುವರಿಸಿದ್ದರು. ಇದೀಗ ಜಿಲ್ಲೆಗೆ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇವರು ರಾಜೇಶ ಪೈ ಮತ್ತು ಪೂಜಾ ಪೈ ದಂಪತಿಯ ಪುತ್ರಿ.
“ಪದವಿ ಪೂರ್ವ ಶಿಕ್ಷಣ ದಲ್ಲಿ ಪ್ರಾಂಶುಪಾಲರ ಮಾರ್ಗದರ್ಶನ ಮತ್ತು ಅನುಭವಿ ಉಪನ್ಯಾಸಕರ ಅರ್ಥಪೂರ್ಣ ಪಾಠ ಪ್ರವಚನ ಜೊತೆಗೆ ಹೆತ್ತವರ ಪ್ರೋತ್ಸಾಹ ನನ್ನ ಸಾಧನೆಗೆ ದಾರಿದೀಪವಾಗಿದೆ,” ಎನ್ನುತ್ತಾರೆ ರಶ್ಮಿ ಪೈ.
ಶಾಲೆಗೆ ಉತ್ತಮ ಫಲಿತಾಂಶ ತಂಡ ವಿದ್ಯಾರ್ಥಿಗಳಿಗೆ ಹಾಗೂ ಮಕ್ಕಳ ಸಾಧನೆಗೆ ಪೂರಕವಾಗಿ ಶಿಕ್ಷಣ ನೀಡಿದ ಉಪನ್ಯಾಸ ವೃಂದಕ್ಕೆ ಪ್ರಾಂಶುಪಾಲರಾದ ಗಣೇಶ್ ಮೊಗವೀರ ಅವರು ಅಭಿವನಂದನೆ ಸಲ್ಲಿಸಿದ್ದಾರೆ.

