ಭಾರತದ ಹಾಕಿಗೆ ಕನ್ನಡಿಗರಿಬ್ಬರು ಗೋಲ್ಕೀಪರ್ಸ್
ಬೆಂಗಳೂರು: ಗುರುವಾರದಿಂದ ಆಸ್ಟ್ರೇಲಿಯಾದ ಹೊಬಾರ್ಟ್ನಲ್ಲಿ ನಡೆಯಲಿರುವ ಎಫ್ಐಎಚ್ ಪುರುಷರ ಪ್ರೋ ಹಾಕಿ ಲೀಗ್ನಲ್ಲಿ ನಡೆಯಲಿರುವ ಪ್ರಸಕ್ತ ಸಾಲಿನ ಎಫ್ಐಎಚ್ ಪುರುಷರ ಪ್ರೋ ಹಾಕಿ ಲೀಗ್ನಲ್ಲಿ ಸ್ಪರ್ಧಿಸಲಿರುವ ಭಾರತ ತಂಡದಲ್ಲಿ ಕರ್ನಾಟಕದ ಇಬ್ಬರು ಗೋಲ್ಕೀಪರ್ಗಳು ಇರುವುದು ಹೆಮ್ಮೆಯ ಸಂಗತಿ. It is a matter of pride that two goalkeepers from Karnataka are in the Indian team that will compete in the FIH Men’s Pro Hockey League
ಹಾಸನದ ಮೋಹಿತ್ ಹೊನ್ನೇನಹಳ್ಳಿ ಹಾಗೂ ಮುಂಬೈಯಲ್ಲಿ ನೆಲೆಸಿರುವ ಸೂರಜ್ ಕರ್ಕೇರ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಇಬ್ಬರೂ ಗೋಲ್ಕೀಪರ್ಗಳು ಭಾರತ ಜೂನಿಯರ್ ಹಾಗೂ ಸೀನಿಯರ್ ತಂಡದಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಸೂರಜ್ ಕರ್ಕೇರ ಮೂಲತಃ ಉಡುಪಿ ಜಿಲ್ಲೆಯವರಾಗಿದ್ದು ಮುಂಬೈಯಲ್ಲಿ ನೆಲೆಸಿರುತ್ತಾರೆ.
ಫೆಬ್ರವರಿ 20 ರಿಂದ 25 ರ ವರೆಗೆ ಹೊಬಾರ್ಟ್ ಹಂತದ ಪಂದ್ಯಗಳು ನಡೆಯಲಿದೆ. ತಾಸ್ಮಾನಿಯಾ ಹಾಕಿ ಸೆಂಟರ್ನಲ್ಲಿ ನಡೆಯುವ ಚಾಂಪಿಯನ್ಷಿಪ್ನಲ್ಲಿ ಭಾರತ ಅನುಭವಿ ಹಾಗೂ ಯುವ ಆಟಗಾರರನ್ನು ಅಂಗಣಕ್ಕಿಳಿಸಲಿದೆ. 24 ಆಟಗಾರರನ್ನೊಳಗೊಂಡ ತಂಡ ಗೆಲ್ಲುವ ಆತ್ಮವಿಶ್ವಾಸಲ್ಲಿದೆ. ಆತಿಥೇಯ ಆಸ್ಟ್ರೇಲಿಯಾ, ಸ್ಪೇನ್ ಹಾಗೂ ಭಾರತ ತಂಡಗಳು ಇಲ್ಲಿ ಮುಖಾಮುಖಿಯಾಗಲಿವೆ.

