ಕುಸ್ತಿಯ ಮನೆಯಲ್ಲಿ ಅರಳುತ್ತಿರುವ ಪ್ರತಿಭೆ ಅಮೃತ ಫಕೀರಪ್ಪ
ರಾಯ್‌ಪುರ: ಧಾರವಾಡದ ಪುಟ್ಟ ಹಳ್ಳಿ ತಡಸಿನಕೊಪ್ಪ. ಇಲ್ಲಿ ಇಳಿ ವಯಸ್ಸಿನ ಲಿಂಗಪ್ಪ ಕುಸ್ತಿಯನ್ನೇ ಉಸಿರಾಗಿಸಿಕೊಂಡು ಬದುಕಿದವರು. ಅವರ ಮಗ ಫಕೀರಪ್ಪ ಕೂಡ ಕುಸ್ತಿಯಲ್ಲಿ ಪ್ರಭುತ್ವ ಸಾಧಿಸಿದವರು. ಈಗ ಲಿಂಗಪ್ಪನ ಮೊಮ್ಮಗ ಅಮೃತ್ ಮೂರನೇ ಪೀಳಿಗೆಯ ಕುಸ್ತಿಯಪಟುವಾಗಿ ಅಖಾಡಕ್ಕಿಳಿದು, ಸದ್ಯ ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಕಂಚಿನ ಪದಕ ಗೆದ್ದಿರುವುದು ಹೆಮ್ಮೆಯ ಸಂಗತಿ. Inspired by his grandfather and father, Amrit Fakirappa from Dharwad won a medal at the Khelo India Tribal Games.
ಹಳಿಯಾಳದಲ್ಲಿರುವ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಕ್ರೀಡಾ ಹಾಸ್ಟೆಲ್‌ನಲ್ಲಿದ್ದು, ದಾಂಡೇಲಿಯ ರಾಮನಗರ ಕಾಲೇಜಿಲ್ಲಿ ಪಿಯುಸಿ ಓದುತ್ತಿರುವ ಅಮೃತ್ ಫಕೀರಪ್ಪಗೆ ಕುಸ್ತಿ ತರಬೇತುದಾರರಾದ ತುಕಾರಾಮ್ ಹಾಗೂ ಶಿವಾನಂದ ಅವರು ತರಬೇತಿ ನೀಡುತ್ತಿದ್ದಾರೆ. ತಾಯಿ ರೇಣುಕಾ ಹಾಗೂ ತಂದೆ ಪಕೀರಪ್ಪ ಅಮೃತ್ ಅವರ ಕುಸ್ತಿ ಬದುಕಿಗೆ ಪ್ರೋತ್ಸಾಹ ನೀಡುತ್ತಿದ್ದು, ತಮ್ಮ ಕುಟುಂಬದಲ್ಲಿ ಅನಾದಿ ಕಾಲಂದಿದಲೂ ಬೆಳೆದುಕೊಂಡು ಬಂದಿರುವ ಭಾರತದ ಸಾಂಪ್ರದಾಯಿಕ ಕ್ರೀಡೆಗೆ ಜೀವ ತುಂಬುತಿದ್ದಾರೆ.

ಧಾರವಾಡದ ಮಾರುತಿ ಗರಡಿಮನೆಯಲ್ಲೂ ತರಬೇತಿ ಪಡೆಯುತ್ತಿರುವ ಅಮೃತ್ ಈಗಾಗಲೇ ರಾಜ್ಯ ಮಿನಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕದ ಸಾಧನೆ ಮಾಡಿರುತ್ತಾರೆ. ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿರುವ ಕುಸ್ತಿಯಲ್ಲu ಅಮೃತ್ ಬೆಳ್ಳಿಯ ಸಾಧನೆ ಮಾಡಿದ್ದಾರೆ.
ಬಡತನದ ನಡೆಯವೆಯೂ ಹಿರಿಯವರು ಉಳಿಸಿಕೊಂಡು ಬಂದಿರುವ ಕುಸ್ತಿ ಕ್ರೀಡೆಯಲ್ಲಿ ಯಶಸ್ಸು ಕಂಡ ಬದುಕನ್ನು ಕಟ್ಟಿಕೊಳ್ಳಬೇಕೆಂಬುದು ಅಮೃತ್ ಫಕೀರಪ್ಪ ಅವರ ಆಶಯ, ಅದೇ ರೀತಿಯಲ್ಲಿ ತರಬೇತಿ ಪ್ರಯತ್ನ ಮುಂದುವರಿಸಿದ್ದಾರೆ.

“ಇದು ಮೊದಲ ರಾಷ್ಟ್ರೀಯ ಮಟ್ಟದ ಸ್ಪರ್ಧೆ. ಇಲ್ಲಿ ಪದಕ ಗೆದ್ದಿರುವುದು ಖುಷಿ ಕೊಟ್ಟಿದೆ. ಅಪ್ಪ ಹಾಗೂ ಅಜ್ಜಗೆ ಖುಷಿಯಾಗಿದೆ. ನನ್ನ ಅಜ್ಜ ಹಾಗೂ ತಂದೆಯವರು ಬೆಳೆಸಿಕೊಂಡು ಬಂದಿರುವ ಕುಸ್ತಿ ಕ್ರೀಡೆಯಲ್ಲಿ ನಾನು ಮುಂದುವರಿಯುತ್ತಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ. ನಮ್ಮ ಕ್ರೀಡಾ ಹಾಸ್ಟೆಲ್‌ನ ಗುರುಗಳು ಉತ್ತಮ ರೀತಿಯಲ್ಲಿ ತರಬೇತಿ ನೀಡಿರುವುದರಿಂದ ಪದಕ ಗೆಲ್ಲಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಈ ಪದಕ ಸ್ಫೂರ್ತಿಯಾಗಿಲಿದೆ,” ಎಂದು ಅಮೃತ್ ಫಕೀರಪ್ಪ ಹೇಳಿದರು.

