ವೇಗದ ಓಟಗಾರ್ತಿ ಧನಲಕ್ಷ್ಮೀಗೆ 8 ವರ್ಷ ನಿಷೇಧ!
ಚೆನ್ನೈ: ನಿಷೇಧಿತ ಔಷಧ ಸೇವನೆ ಮಾಡಿ ಈ ಹಿಂದೆ ಮೂರು ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದ ಭಾರತದ ವೇಗದ ಓಟಗಾರ್ತಿ ಧನಲಕ್ಷ್ಮೀ ಶೇಖರ್ ಅವರಿಗೆ ರಾಷ್ಟ್ರೀಯ ಉದ್ದೀಪನ ಔಷಧ ನಿಯಂತ್ರಣ ಘಟಕ (NADA) ಎಂಟು ವರ್ಷಗಳ ಕಾಲ ನಿಷೇಧ ಹೇರಿದೆ. Indian sprinter Dhanalakshmi Sekar has been sanctioned with an eight-year ban by the National Anti-Doping Agency (NADA) after testing positive for the banned anabolic steroid Drostanolone,
ಇದರೊಂದಿಗೆ 27 ವರ್ಷ ಪ್ರಾಯದ ಧನಲಕ್ಷ್ಮೀಯ ಕ್ರೀಡಾ ಬದುಕು ಇಲ್ಲಿಗೇ ಕೊನೆಗೊಂಡತೆಂದೇ ಹೇಳಬಹುದು. ಧನಲಕ್ಷ್ಮೀ ಅವರು ವಿಶ್ವ ಉದ್ದೀಪನ ಔಷಧ ನಿಯಂತ್ರಣ ಘಟಕ (WADA) ನಿಷೇಧಿಸಿರುವ ಡ್ರೊಸ್ಟಾನೊಲೊನ್ (Drostanolone) ಸೇವನೆ ಮಾಡಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗಿದೆ.
2025ರಲ್ಲಿ ನಡೆದ ಅಂತರ್ ರಾಜ್ಯ ಚಾಂಪಿಯನ್‌ಷಿಪ್‌ನಲ್ಲಿ ಧನಲಕ್ಷ್ಮೀ 11.36 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದಿದ್ದರು. ಆದರೆ ಎರಡನೇನಿಷೇಧಿತ ಔಷಧ ಸೇವನೆ ಮಾಡಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಎಂಟು ವರ್ಷಗಳ ಬ್ಯಾನ್ ಮಾಡಲಾಗಿದೆ. ಈಗ ಧನಲಕ್ಷ್ಮೀ ಅವರು ನಿಷೇಧಿತ ಔಷಧವನ್ನು ಗಮನಕ್ಕೆ ಬಾರದೆ ಸೇವಿಸಿರುವೆ ಎಂದು ಸಾಬೀತು ಪಡಿಸಿದರೆ ಮಾತ್ರ ಶಿಕ್ಷೆಯ ಪ್ರಮಾಣ ಕಡಿಮೆಯಾಗಲಿದೆ.

