ಹುಬ್ಬಳ್ಳಿ ಕೈಗರ್ಸ್‌ಗೆ ಮಹಾರಾಣಿ ಟ್ರೋಫಿ
ಬೆಂಗಳೂರು: ಇಲ್ಲಿನ ಆಲೂರು ಅಂಗಣದಲ್ಲಿ ನಡೆದ ಕೆಎಸ್‌ಸಿಎ ವನಿತೆಯರ ಮಹಾರಾಣಿ ಟಿ20 ಚಾಂಪಿಯನ್‌ಷಿಪ್‌ನಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ 11 ರನ್ ಅಂತರದಲ್ಲಿ ಜಯ ಗಳಿಸಿದ ಹುಬ್ಬಳ್ಳಿ ಟೈಗರ್ಸ್ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. Hubballi Tigers won KSCA Maharani Trophy beating Mysuru Warriors in Final.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್ 19.5 ಓವರ್‌ಗಳಲ್ಲಿ 107 ರನ್‌ಗೆ ಆಲೌಟ್ ಆಯಿತು. ಮೊನಿಕಾ ಸಿ ಪಟೇಲ್ (23) ಹಾಗೂ ತೇಜಸ್ವಿನಿ (22) ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಸಾಧಾರಣ ಮೊತ್ತಕ್ಕೆ ನೆರವಾದರು. ಮೈಸೂರು ವಾರಿಯರ್ಸ್ ಪರ ಸಹನಾ ಎಸ್ ಪವಾರ್ 27 ರನ್‌ಗೆ 2 ವಿಕೆಟ್, ವಂದಿತಾ ಕೃಷ್ಣರಾವ್ 8 ರನ್‌ಗೆ 3 ವಿಕೆಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು. ಪೂಜಾ ಕುಮಾರಿ 27 ರನ್‌ಗೆ 4 ವಿಕೆಟ್ ಗಳಿಸಿದರು.
108 ರನ್‌ಗಳ ಸಾಧಾರಣ ಮೊತ್ತವನ್ನಬ ಎಂಬತ್ತಿದ ಮೈಸೂರು ವಾರಿಯರ್ಸ್ ಹುಬ್ಬಳ್ಳಿ ಟೈಗರ್ಸ್ ತಂಡದ ಶಿಸ್ತಿನ ಬೌಲಿಂಗ್ ದಾಳಿಗೆ ಸಿಲುಕಿ 20 ಓವರ್‌ಗಳಲ್ಲಿ ಕೇವಲ 96 ರನ್ ಗಳಿಸಿ ಪ್ರಶಸ್ತಿಯಿಂದ ವಂಚಿತವಾಯಿತು. ಯಾಶಿಕಾ ಕೆ. ಗೌಡ (33) ಹಾಗೂ ಶಿಶಿರ ಎ. ಗೌಡ (41) ಉತ್ತಮ ಬ್ಯಾಟಿಂಗ್ ಪ್ರದರ್ಶಿಸುದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಮೊನಿಕಾ ಸಿ ಪಟೇಲ್ 21 ರನ್‌ಗೆ 2 ವಿಕೆಟ್ ಹಾಗೂ ಪ್ರಿಯಾ ಚವಾಣ್ 10 ರನ್‌ಗೆ 3 ವಿಕೆಟ್ ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.
ಸಂಕ್ಷಿಪ್ತ ಸ್ಕೋರ್
ಹುಬ್ಬಳ್ಳಿ ಟೈಗರ್ಸ್ : 19.5 ಓವರ್‌ಗಳಲ್ಲಿ 107 ಆಲೌಟ್ [ಮೋನಿಕಾ ಸಿ ಪಟೇಲ್ 23, ಬಿಜಿ ತೇಜಶ್ವಿನಿ 22, ಸಹನಾ ಎಸ್ ಪವಾರ್ 2/27, ವಂದಿತಾ ಕೃಷ್ಣರಾವ್ 3/8, ಪೂಜಾ ಕುಮಾರಿ ಎಂ 4/27]
ಮೈಸೂರು ವಾರಿಯರ್ಸ್ : 20 ಓವರ್‌ಗಳಲ್ಲಿ 7 ವಿಕೆಟ್‌ಗೆ 96 [ಯಾಶಿಕಾ ಕೆ ಗೌಡ 33, ಶಿಶಿರ ಎ ಗೌಡ 41, ಮೋನಿಕಾ ಸಿ ಪಟೇಲ್ 2/21, ಪ್ರಿಯಾ ಚವಾಣ್ 3/10]