Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

SG Pipers ತಂಡಕ್ಕೆ 8 ಹೊಸ ಮಹಿಳಾ ಆಟಗಾರರ ಸೇರ್ಪಡೆ

ಹೊಸದಿಲ್ಲಿ: SG ಪೈಪರ್ಸ್ ಮಹಿಳಾ ತಂಡವು ಹಾಕಿ ಇಂಡಿಯಾ ಲೀಗ್ ಸೀಸನ್ 2 ಹರಾಜಿನಲ್ಲಿ ಎಂಟು ಹೊಸ ಆಟಗಾರರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ.  ಈ ಮೂಲಕ SG ಪೈಪರ್ಸ್ ಯುವ ಹಾಗೂ ಅನುಭವೀ ಆಟಗಾರರ ಜೊತೆಗೆ ತಂಡವನ್ನು ಬಲಿಷ್ಠಗೊಳಿಸುವತ್ತ ಮಹತ್ವದ ಹೆಜ್ಜೆಯನ್ನಿಟ್ಟಿದೆ.  Hockey India League SG Pipers team added 8 new players for the team.

ಈ ಬಗ್ಗೆ ಮಾತನಾಡಿದ ತಂಡದ ನಾಯಕಿ ನವನೀತ್ ಕೌರ್ ‘ಕ್ರೀಡಾಪಟುಗಳಾಗಿ SG ಪೈಪರ್ಸ್ ನಮಗೆ ಈ ಅವಕಾಶ ನೀಡಿರುವುದಕ್ಕೆ ಹೆಮ್ಮೆ ಪಡುತ್ತೇವೆ. ಮೈದಾನದಲ್ಲಿರುವ ಆಟಗಾರರಿಂದ ಇನ್‌ಪುಟ್‌ಗಳನ್ನು ಪಡೆಯುವುದು ಮತ್ತು ನಮ್ಮ ತರಬೇತುದಾರ  ಸಹಾಯ ಮಾಡಿದರು. ಉದಿತಾ ಸೇರಿದಂತೆ ರಾಷ್ಟ್ರೀಯ ತಂಡದ ಅನುಭವ ಹೊಂದಿರುವ ಮೂವರು ಆಟಗಾರರನ್ನು ಕರೆತರುವುದು ನಮ್ಮ ತಂಡವನ್ನು ಬಲಪಡಿಸುತ್ತದೆ ಎಂದರು.

SG ಪೈಪರ್ಸ್ ಮಹಿಳಾ ಹಾಕಿ ಇಂಡಿಯಾ ಲೀಗ್ ತಂಡಕ್ಕೆ ಆಯ್ಕೆಯಾದ ಕ್ರೀಡಾಪಟುಗಳು:

1.ಉದಿತಾ, 2. ಲೋಲಾ ರೀರಾ, 3. ಜುವಾನಾ ಮೊರೆಲ್ಲೊ, 4. ತೆರೇಸಾ ವಿಯಾನಾ, 5.ಕ್ರಿಸ್ಟಿನಾ ಕೊಸೆಂಟಿನೋ, 6. ಕೋಸ್ಟಾ ವಾಲೆಂಟಿನಾ ಇಸಬೆಲ್, 7. ಥೌಡಮ್ ಸುಮನ್ ದೇವಿ, 8. ಪ್ರೀತಿ ದುಬೆ

ಹೊಸ ಸೇರ್ಪಡೆಯ ಬಗ್ಗೆ ಮುಖ್ಯ ತರಬೇತುದಾರ ಸೋಫಿ ಗಿಯರ್ಟ್ಸ್ ಮಾತನಾಡಿ ಕ್ರಿಸ್ಟಿನಾ ಕೊಸೆಂಟಿನೋ ಅವರನ್ನು ಗೋಲ್ಕೀಪರ್ ಆಗಿ ಆರಿಸುವುದು ಸ್ಪಷ್ಟ ನಿರ್ಧಾರವಾಗಿತ್ತು. ನಮ್ಮ ಭಾರತೀಯ ಆಟಗಾರರಾದ ಉದಿತಾ, ಸುಮನ್ ದೇವಿ ಥೌಡಂ, ಪ್ರೀತಿ ದುಬೆ, ಕೈಟ್ಲಿನ್ ನಾಬ್ಸ್ ಮತ್ತು ವಿಕ್ಟೋರಿಯಾ ತಂಡಕ್ಕೆ ಒಳ್ಳೆಯ  ರಾಷ್ಟ್ರೀಯ ಅನುಭವವನ್ನು ನೀಡಲಿದ್ದಾರೆ ಎಂದರು.

ಹೊಸ ಟೀಮ್ ನೊಂದಿಗೆ  SG ಪೈಪರ್ಸ್ ಸೀಸನ್ 2ರಲ್ಲಿ ಬಲಿಷ್ಠ ಪ್ರದರ್ಶನ ನೀಡಲು ಸಜ್ಜಾಗಿದೆ.


administrator