Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

KIUG2025: ಪದಕ ಗಳಿಕೆಯಲ್ಲಿ ಅಗ್ರ ಸ್ಥಾನಕ್ಕೇರಿದ ಗುರುನಾನಕ್‌

ಜೈಪುರ: ಇಲ್ಲಿನ ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣ ಸೇರಿದಂತೆ ರಾಜಸ್ಥಾನದ ವಿವಿಧ ಕ್ರೀಡಾಂಗಣಗಳಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನ ಪದಕ ಗಳಿಕೆಯಲ್ಲಿ ಅಮೃತಸರದ ಗುರು ನಾನಕ್‌ ದೇವ್‌ ವಿಶ್ವವಿದ್ಯಾನಿಲಯ ಅಗ್ರ ಸ್ಥಾನಕ್ಕೇರಿದೆ. Gur Nnanak Dev University of Amristar at the top of the medal tally in Khelo Indian University Games Jaipur.

ಮೊದಲ ಐದು ದಿನಗಳಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದ ಕರ್ನಾಟಕದ ಜೈನ್‌ ವಿಶ್ವವಿದ್ಯಾನಿಲಯವನ್ನು ಹಿಂದಿಕ್ಕುವಲ್ಲಿ ಗುರುನಾನಕ್‌ ವಿಶ್ವವಿದ್ಯಾನಿಲಯ ಯಶಸ್ವಿಯಾಗಿದೆ. ಗುರುನಾನಕ್‌ ವಿಶ್ವವಿದ್ಯಾನಿಲಯ 30 ಚಿನ್ನ, 10 ಬೆಳ್ಳಿ ಹಾಗೂ 11 ಕಂಚಿನ ಪದಕಗಳೊಂದಿಗೆ ಒಟ್ಟು 51 ಪದಕಗಳನ್ನು ಗೆದ್ದುಕೊಂಡಿದೆ. ಜೈನ್‌ ವಿಶ್ವವಿದ್ಯಾನಿಲಯ 27 ಚಿನ್ನ, 9 ಬೆಳ್ಳಿ ಹಾಗೂ 9 ಕಂಚಿನ ಪದಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಜೈನ್‌ ವಿಶ್ವವಿದ್ಯಾನಿಲಯವು ಎಲ್ಲ ಪದಕಗಳನ್ನು ಈಜಿನಲ್ಲೇ ಗೆದ್ದಿರುವುದು ವಿಶೇಷ, ಬೇರೆ ಕ್ರೀಡೆಗಳಲ್ಲಿ ಜೈನ್‌ ವಿಶ್ವವಿದ್ಯಾನಿಲಯ ಪದಕ ಗೆಲ್ಲುವಲ್ಲಿ ಸದ್ಯಕೆ ವಿಫಲವಾಗಿದೆ. ಆದರೆ ಗುರುನಾನಕ್‌ ವಿಶ್ವವಿದ್ಯಾನಿಲಯ ಸೈಕ್ಲಿಂಗ್‌, ಫೆನ್ಸಿಂಗ್‌, ಜೂಡೋ, ಆರ್ಚರಿ  ಹಾಗೂ ಶೂಟಿಂಗ್‌ ಕ್ರೀಡೆಗಳಲ್ಲಿ ಪದಕಗಳನ್ನು ಗೆದ್ದು ಅಗ್ರ ಸ್ಥಾನಕ್ಕೇರಿದೆ.

ಪಂಜಾಬ್‌ನ ಲವ್ಲಿ ಪ್ರೊಫೆಷನಲ್‌ ವಿಶ್ವವಿದ್ಯಾನಿಲಯ 22 ಚಿನ್ನ, 19 ಬೆಳ್ಳಿ ಹಾಗೂ 10 ಕಂಚಿನ ಪದಕಗಳೊಂದಿಗೆ ಮೂರನೇ  ಸ್ಥಾನದಲ್ಲಿದೆ.


administrator