Friday, February 23, 2024

ಕೆಕೆಆರ್‌ಗೆ ಮೆಂಟರ್‌ ಆಗಿ ಗೌತಮ್‌ ಗಂಭೀರ್‌

ಕೋಲ್ಕೊತಾ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ Indian Premier League ನಲ್ಲಿ ಕೋಲ್ಕೋತಾ ನೈಟ್‌ ರೈಡರ್ಸ್‌ ತಂಡದ ನಾಯಕನಾಗಿ ಕಾರ್ಯನಿರ್ವಹಿಸಿದ್ದ ಗೌತಮ್‌ ಗಂಭೀರ್‌ ಈಗ ಅದೇ ತಂಡದ ಮೆಂಟರ್‌ ಆಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ. Gautam Gambhir return to IPL as KKR mentor.

ಒಂದೆಡೆ ಸಂಸದರಾಗಿ ಮುಸ್ಲಿಂ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದ ಗೌತಮ್‌ ಗಂಭೀರ್‌ ಉತ್ತಮ ಸಂಭಾವನೆ ಸಿಕ್ಕರೆ ಯಾರ ಮಾಲೀಕತ್ವದ ತಂಡವಾದರೂ ಚಿಂತೆ ಇಲ್ಲ ಎಂಬ ಸತ್ಯಾಂಶವನ್ನು ಸಮಾಜಕ್ಕೆ ತಿಳಿಸಿದ್ದಾರೆ.

2012 ಹಾಗೂ 2014ರಲ್ಲಿ ಗಂಭೀರ್‌ ನಾಯಕತ್ವದಲ್ಲಿ ಕೋಲ್ಕೊತಾ ನೈಟ್‌ರೈಡರ್ಸ್‌ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತ್ತು, ಈಗ 2024ರ ಋತುವಿನಲ್ಲಿ ತಂಡದ ಮೆಂಟರ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ.

2007ರ ಟಿ20 ಚಾಂಪಿಯನ್‌ ಹಾಗೂ 2011ರ ವಿಶ್ವಕಪ್‌ ಚಾಂಪಿಯನ್‌ ಗೌತಮ್‌ ಗಂಭಿರ್‌, 2011ರಲ್ಲಿ ಕೆಕೆಆರ್‌ ಸೇರಿ 2017ರವರೆಗೂ ತಂಡದಲ್ಲಿದ್ದರು. ಈ ಅವಧಿಯಲ್ಲಿ ಕೆಕೆಆರ್‌ ಐದು ಬಾರಿ ಪ್ಲೆ ಆಫ್‌ ತಲುಪಿತ್ತು. ಅಲ್ಲದೆ ಒಂದು ಬಾರಿ ಚಾಂಪಿಯನ್ಸ್‌ ಲೀಗ್‌ನ ಫೈನಲ್‌ ತಲುಪಿತ್ತು.

ಚಂದ್ರಕಾಂತ್‌ ಪಂಡಿತ್‌ ಅವರು ಕೆಕೆಆರ್‌ನ ಪ್ರಧಾನ ಕೋಚ್‌ ಆಗಿದ್ದು, ಅಭಿಷೇಕ್‌ ನಾಯರ್‌ ಹಾಗೂ ಜೇಮ್ಸ್‌ ಪೋಸ್ಟರ್‌ ಸಹಾಯಕ ಕೋಚ್‌ ಆಗಿದ್ದಾರೆ. ಭರತ್‌ ಅರುಣ್‌ ಬೌಲಿಂಗ್‌ ಕೋಚ್‌ ಹಾಗೂ ರೆಯಾನ್‌ ಟೆನ್‌ ಡಾಯ್ಷೆಟ್‌ ಫೀಲ್ಡಿಂಗ್‌ ಕೋಚ್‌ ಆಗಿದ್ದಾರೆ,

Related Articles