ಬಾಕ್ಸಿಂಗ್ ಚಾಂಪಿಯನ್ ಶಿಪ್: ಫೈನಲ್ ತಲುಪಿದ ಗೌರವ್

0
206
ಪುಣೆ:

ವಿಶ್ವ ಚಾಂಪಿಯನ್‍ಶಿಪ್ ಕಂಚಿನ ಪದಕ ವಿಜೇತ ಗೌರವ್ ಬಿಧುರಿ ಅವರು ಹಿರಿಯ ಪುರುಷರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಶಿಪ್ ನ 56 ಕೆ.ಜಿ ವಿಭಾಗದಲ್ಲಿ ಫೈನಲ್ ಗೆ ತಲುಪಿದರು. ಆದರೆ, ಮಾಜಿ ಯೂತ್ ವಿಶ್ವ ಚಾಂಪಿಯನ್ ಸಚಿನ್ ಸಿವಚ್ ಅವರು 52 ಕೆ.ಜಿ ವಿಭಾಗದ ಸೆಮಿಫೈನಲ್ ನಲ್ಲಿ ಸೋಲುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ರೈಲ್ವೆ ಸ್ಪೋಟ್ರ್ಸ್ ಪ್ರೋಮೋಷನ್ ಬೋರ್ಡ್ ಪರ ಆಡಿದ ಗೌರವ್ ಬಿಧುರ ಅವರು ತಮಿಳುನಾಡಿನ ಆರ್. ಮಾಧವನ್ ಅವರನ್ನು 5-0 ಅಂತರದಲ್ಲಿ ಮಣಿಸುವ ಮೂಲಕ ಪ್ರಶಸ್ತಿ ಸುತ್ತಿಗೆ ಪ್ರವೇಶ ಮಾಡಿದರು. ಇನ್ನೂ, ಸಚಿನ್ ಅವರು ಹಿರಿಯರ ಮಟ್ಟದ ಚೊಚ್ಚಲ ಪಂದ್ಯದಲ್ಲಿ ಸರ್ವಿಸ್ ಕಂಟ್ರೊಲ್ ಬೋರ್ಡ್‍ನ ಪಿ.ಎಲ್. ಪ್ರಸಾದ್ ವಿರುದ್ಧ ಸೆಮಿಫೈನಲ್ ನಲ್ಲಿ ಸೋತು ಕಂಚಿನ ಪದಕಕ್ಕೆ ಸಮಾಧಾನಗೊಂಡರು.
ಕಾಮನ್ ವೆಲ್ತ್ ಕ್ರೀಡಾಕೂಟದ ಬೆಳ್ಳಿ ಪದಕ ವಿಜೇತ ಮನೀಶ್ ಕೌಶಿಕ್(ಎಸ್‍ಎಸ್‍ಸಿಬಿ) ಅವರು ತಮಿಳುನಾಡಿನ ಎಂ.ಮೊವಿಂದ್ರನ್ ಅವರನ್ನು 60 ಕೆ.ಜಿ ವಿಭಾಗದಲ್ಲಿ ಸೋಲುಣಿಸಿದರು.