ಬಿಲಿಯರ್ಡ್ಸ್ ಮಾಜಿ ವಿಶ್ವ ಚಾಂಪಿಯನ್ ಮನೋಜ್ ಕೊಠಾರಿ ನಿಧನ
ಬೆಂಗಳೂರು: ಬಿಲಿಯರ್ಡ್ಸ್ ಮಾಜಿ ವಿಶ್ವ ಚಾಂಪಿಯನ್ ಮನೋಜ್ ಕೋಠಾರಿ ಸೋಮವಾರ ಬೆಳಿಗ್ಗೆ ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನರಾದರು. Former World billiards champion Manoj Kothari passed away following a cardiac arrest at a private hospital in Tirunelveli, Tamil Nadu, on Monday morning.
67 ವರ್ಷ ಪ್ರಾಯದ ಮನೋಜ್ ಅವರು ಪತ್ನಿ, ಮಗಳು ಹಾಗೂ ಎರಡು ಬಾರಿ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಪಟ್ಟ ಗೆದ್ದಿರುವ ಮಗ ಸೌರವ್ ಕೊಠಾರಿ ಅವರನ್ನು ಅಗಲಿದ್ದಾರೆ. ಕೊಠಾರಿ ಕುಟುಂಬದಲ್ಲಿ ಎಲ್ಲರೂ ಬಿಲಿಯರ್ಡ್ಸ್ & ಸ್ನೂಕರ್ ಆಟಗಾರರೆಂಬುದು ವಿಶೇಷ.
ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದು ಬಿಲಿಯರ್ಡ್ಸ್ ಚಾಂಪಿಯನ್ ಪಟ್ಟ ಗೆಲ್ಲುವ ಮೂಲಕ ಮನೋಜ್ ಕೊಠಾರಿ ಕ್ರೀಡಾ ಜಗತ್ತಿನಲ್ಲಿ ಅಚ್ಚರಿ ಮೂಡಿಸಿದ್ದರು. 1990ರ ವಿಶ್ವಕಪ್‌ನಲ್ಲಿ ಪಿಲಿಪ್ಪಿನ್ಸ್‌ನ ಸ್ಪರ್ಧಿ ಕೊನೆಯ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಮನೋಜ್ ಕೊಠಾರಿಗೆ ಅವಕಾಶ ಸಿಕ್ಕಿತು. ನ್ಯಾಷನಲ್ ಚಾಂಪಿಯನ್‌ಷಿಪ್ ಗೆಲ್ಲದ ಮನೋಜ್ ಕುಮಾರ್ ವಿಶ್ವಕಪ್ ಫೈನಲ್‌ನಲ್ಲಿ ಭಾರತದವರೇ ಆದ ಅಶೋಕ್ ಶಾಂಡಿಲ್ಯ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದು ಇತಿಹಾಸ ಬರೆದರು.
ಪ್ರತಿಷ್ಠಿತ ಧ್ಯಾನ್‌ಚಂದ್ ಪ್ರಶಸ್ತಿಗೆ ಭಾಜನರಾಗಿರುವ ಮನೋಜ್ ಕೊಠಾರಿ ಅವರು ಭಾರತ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು.

