Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಡೋಪಿಂಗ್‌: ಜಗತ್ತಿಗೆ ನಾವೇ NO 1 ಮತ್ತು ಹ್ಯಾಟ್ರಿಕ್‌!!

ಹೊಸದಿಲ್ಲಿ: ವಿಶ್ವ ಉದ್ದೀಪನ ಔಷಧ ನಿಯಂತ್ರಣ ಘಟಕ (WADA) ಹಾಗೂ ಭಾರತದ ರಾಷ್ಟ್ರೀಯ ಉದ್ದೀಪನ ಔಷಧ ನಿಯಂತ್ರಣ ಘಟಕ (NADA) ಪ್ರಕಟಿಸಿದ ನೂತನ ಅಂಕಿ ಅಂಶಗಳ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ. ಭಾರತದಲ್ಲಿ ಡೋಪಿಂಗ್‌ನಲ್ಲಿ ಸಿಕ್ಕಿ ಬೀಳುತ್ತಿರುವ ಕ್ರೀಡಾಪಟುಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. For the third year running, India has achieved the dubious distinction of being the country with the highest number of dope cheats in the world.

2024ರ ವರದಿಯ ಪ್ರಕಾರ ಭಾರತದಲ್ಲಿ 7,113 ಕ್ರೀಡಾಪಟುಗಳ ಮೂತ್ರ ಹಾಗೂ ರಕ್ತ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 260 ಕ್ರೀಡಾಪಟುಗಳು ನಿಷೇಧಿತ ಡ್ರಗ್‌ ಸೇವನೆ ನಿಯಮ ಉಲ್ಲಂಘನೆ ಮಾಡಿರುವುದು ಸಾಬೀತಾಗಿದೆ. ಭಾರತ ಸತತ ಮೂರನೇ ಬಾರಿಗೆ ಈ ಅಪಕೀರ್ತಿಗೆ ಗುರಿಯಾಗುತ್ತಿದೆ. ವಿಶೇಷವೆಂದರೆ ಈ ಬಾರಿ ಜಗತ್ತಿನಲ್ಲಿ ಬೇರೆ ಯಾವುದೇ ದೇಶವು ಮೂರು ಅಂಕೆಗಳ ಸಂಖ್ಯೆಯನ್ನು ತಲುಪಿಲ್ಲ. ಡಗ್ರ್‌ ಸೇವನೆ ಮಾಡಿರುವುದು ಬಾಬೀತಾಗಿರುವ ಪ್ರಮಾಣ (3.6%) ಕೂಡ ಜಗತ್ತಿನಲ್ಲೇ ಅಗ್ರ ಸ್ಥಾನದಲ್ಲಿದೆ. ಚೀನಾದಲ್ಲಿ 24,214 ಕ್ರೀಡಾಪಟುಗಳನ್ನು ಪರೀಕ್ಷೆಗೆ ಗುರಿಪಡಿಸಲಾಗಿದ್ದು ಅವರಲ್ಲಿ 43 ಪ್ರಕಣಗಳು ಪಾತ್ರ ಪಾಸಿಟಿವ್‌.

ಭಾರತದಲ್ಲಿ ಐವರಲ್ಲಿ ಒಬ್ಬ ಡೋಪಿಂಗ್‌ನಲ್ಲಿ ಸಿಕ್ಕಿ ಬಿದ್ದಿರುವುದು ಸಾಬೀತಾಗಿದೆ. 2023 ರಲ್ಲಿ 213 ಅಥ್ಲೀಟ್‌ಗಳು ಸಿಕ್ಕಿಬಿದ್ದಿದ್ದರು. ಖೇಲೋ ಇಂಡಿಯಾದಂಥ ಕ್ರೀಡಾಕೂಟಗಳಲ್ಲೇ ಸ್ಪರ್ಧಿಗಳು ಪಾಕ್ಗೊಲ್ಳುತ್ತಿಲ್ಲ. ಕೆಲವೊಂದು ಸ್ಪರ್ಧೆಗಳಲ್ಲಿ ಒಬ್ಬರು ತಪ್ಪಿದರೆ ಇಬ್ಬರು ಪಾಲ್ಗೊಳ್ಳುತ್ತಿರುವುದ ಸಾಮಾನ್ಯವಾಗಿತ್ತು. ಇದಕ್ಕೆ ಮುಖ್ಯ ಕಾರಣ ಸ್ಥಳದಲ್ಲೇ ಡೋಪಿಂಗ್‌ ನಿಯಂತ್ರಣ ಏಜೆನ್ಸಿಯ ಅಧಿಕಾರಿಗಳು ಹಾಜರಿರುವುದು.

ಅಥ್ಲೆಟಿಕ್ಸ್‌, ವೇಟ್‌ಲಿಫ್ಟಿಂಗ್‌ ಹಾಗೂ ಕುಸ್ತಿಯಲ್ಲಿ ಹೆಚ್ಚಿನ ಡೋಪಿಂಗ್‌ ನಡೆಯುತ್ತಿರುವುದು ಫಲಿತಾಂಶದಿಂದ ಸಾಬೀತಾಗಿದೆ, ಅಥ್ಲೆಟಿಕ್ಸ್‌ನಲ್ಲಿ 76 ಪ್ರಕರಣಗಳು, ವೇಟ್‌ಲಿಫ್ಟಿಂಗ್‌ನಲ್ಲಿ 43 ಪ್ರಕರಣಗಳು ಹಾಗೂ ಕುಸ್ತಿಯಲ್ಲಿ 29 ಪ್ರಕರಣಗಳು ಪತ್ತೆಯಾಗಿದೆ.


administrator