ಸ್ಪೋರ್ಟ್ಸ್ ಮೇಲ್ ವರದಿ:ಋತುವಿನ ಮೊದಲ ಪಂದ್ಯದಲ್ಲಿ ಬೆಂಗಳೂರು ಫುಟ್ಬಾಲ್ ಕ್ಲಬ್ ಸೋಲನುಭವಿಸಿದೆ. ಸ್ಪೇನ್ ನ ವೇಲೆನ್ಸಿಯಾ ದಲ್ಲಿ ನಡೆದ ಅಟ್ಲೆಟಿಕೊ ಸಗುಂಟಿನೊ ಕ್ಲಬ್ ವಿರುದ್ಧ ನಡೆದ ಸೌಹಾರ್ದ ಪಂದ್ಯದಲ್ಲಿ ಬೆಂಗಳೂರು ತಂಡ ೨-೧ ಗೋಲುಗಳ ಅಂತರದಲ್ಲಿ ಸೋಲನುಭಾವಿಸಿದೆ.
ಡೇವಿಡ್ ಫಾಸ್ ಅವರು ಪಂದ್ಯ ಆರಂಭಗೊಂಡ ೭ನೇ ನಿಮಿಷದಲ್ಲಿ ಗೋಲು ಗಳಿಸಿ ಆತಿಥೇಯ ತಂಡಕ್ಕೆ ಮುನ್ನಡೆ ಕಲ್ಪಿಸಿದರು. ದ್ವಿತೀಯಾರ್ಧದಲ್ಲಿ ಬೆಂಗಳೂರು ತಂಡ ಪ್ರಭುತ್ವ ಸಾಧಿಸಿತು. ಆದರೂ ಅಟ್ಲೆಟಿಕೊ ತಂಡದ ಗೋಲ್ ಕೀಪರ್ ಪೋಯೆರ್ ಎರಡು ಬಾರಿ ಉತ್ತಮ ರೀತಿಯಲ್ಲಿ ಗೋಲ್ ತಡೆದು ಬೆಂಗಳೂರಿಗೆ ಅಡ್ಡಿಯಾದರು. ದಿಮಾಸ್ ಡೆಲ್ಗಡೊ ೫೩ನೇ ನಿಮಿಷಿದಲ್ಲಿ ಗಳಿಸಿದ ಗೋಲಿನಿಂದ ಬಿ ಫ್ ಸಿ ಸಮಬಲ ಸಾಧಿಸಿತು. ಕ್ಸಿಸ್ಕೊ ಅವರ ಉತ್ತಮ ಆಟ ಪ್ರಯೋಜನಕ್ಕೆ ಬರಲಿಲ್ಲ. ಸಗುಂಟಿನೊ ೮೪ನೇ ನಿಮಿಷದಲ್ಲಿ ಗಳಿಸಿದ ಗೋಲು ಅಟ್ಲೆಟಿಕೊ ತಂಡಕ್ಕೆ ಜಯ ತಂದುಕೊಟ್ಟಿತು.
