Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಪ್ರೋ ಲೀಗ್‌ ಹಾಕಿ: ಭಾರತಕ್ಕೆ ಜಯ ತಂದ ಹಾಸನದ ಮೋಹಿತ್‌

ಹೊಬಾರ್ಟ್‌:  ಎಫ್‌ಐಎಚ್‌ ಪ್ರೋ ಲೀಗ್‌ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಸತತ ಸೋಲಿನಿಂದ ಕಂಗೆಟ್ಡಿದ್ದ ಭಾರತ ಹಾಕಿ ತಂಡ ಕರ್ನಾಟಕದ ಗೋಲ್‌ಕೀಪರ್‌ ಮೋಹಿತ್‌ ಶಶಿಕುಮಾರ್‌ ಹೊನ್ನೇನಹಳ್ಳಿ ಅವರ ಅದ್ಭುತ ಗೋಲ್‌ಕೀಪಿಂಗ್‌ನಿಂದಾಗಿ ಬಲಿಷ್ಠ ಆಸ್ಟ್ರೇಲಿಯಾದ ವಿರುದ್ಧ ಜಯ ಗಳಿಸಿದೆ. FIH Pro League 2025-26: India Stun Australia in Shoot-Out to Register first Win

ಹೊಬಾರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ವಿಶ್ವದಲ್ಲಿ 3ನೇ ರಾಂಕ್‌ ಹೊಂದಿರುವ ಆಸ್ಟ್ರೇಲಿಯಾದ ವಿರುದ್ಧ ಭಾರತ ಶೂಟೌಟ್‌ನಲ್ಲಿ 3-1 ಅಂತರದಲ್ಲಿ ಜಯ ಗಳಿಸಿದೆ. ನಿಗದಿತ ಅವಧಿಯಲ್ಲಿ ಇತ್ತಂಡಗಳು 1-1 ಗೋಲಿನಿಂದ ಸಮಬಲ ಸಾಧಿಸಿದ್ದವು.

ನೆನಾಲ್ಟಿ ಶೂಟೌಟ್‌ನಲ್ಲಿ ಭಾರತದ ಪರ ಲಾಕ್ರಾ, ಮಣಿಂದರ್‌ ಸಿಂಗ್‌ ಹಾಗೂ ವಿಷ್ಣುಕಾಂತ್‌ ಸಿಂಗ್‌ ಅವರು ಗೋಲು ಗಳಿಸಿದರು. ಆಸೀಸ್‌ ಪರ ಹೆವಾರ್ಡ್‌ ಮಾತ್ರ ಗೋಲು ಗಳಿಸಿದರು. ಕರ್ನಾಟಕದ ಗೋಲ್‌ಕೀಪರ್‌ ಮೋಹಿತ್‌ ಶಶಿಕುಮಾರ್‌ ಹೊನ್ನೇನಹಳ್ಳಿ ಆಸ್ಟ್ರೇಲಿಯಾದ ಪಾಲಿಗೆ ಸೋಲಿನ ಗೋಡೆಯಾದರು.


administrator