Friday, June 14, 2024

ಫೆಡರೇಷನ್‌ ಕಪ್‌ ಅಥ್ಲೆಟಿಕ್ಸ್‌: ರಾಜ್ಯದ ಪ್ರಿಯಾ ಚಿನ್ನದ ಸಾಧನೆ

SportsMail Desk

ರಾಂಚಿಯ ಬಿಸ್ರಾಮುಂಡಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 26ನೇ ಫೆಡರೇಷನ್‌ ಕಪ್‌ ಹಿರಿಯರ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ Federation Cup Athletic Championship ಕರ್ನಾಟಕದ ಪ್ರಿಯಾ ಮೋಹನ್‌ Priya Mohan ಚಿನ್ನದ ಸಾಧನೆ ಮಾಡಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಅಲ್ಲದೆ ಏಷ್ಯನ್‌ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದಿದ್ದಾರೆ.

ವನಿತೆಯ 400 ಮೀ. ಓಟದಲ್ಲಿ ಪ್ರಿಯಾ ಮೋಹನ್‌ 53.40 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರಲ್ಲಿದೆ ಏಷ್ಯನ್‌ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದಿದ್ದಾರೆ. ಈ ವಿಭಾಗದಲ್ಲಿ ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನ ಸ್ಪರ್ಧಿಗಳು ಅನುಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗಳಿಸಿದರು.

ವನಿತೆಯರ 100 ಮೀ, ಓಟದಲ್ಲಿ 11.69 ಸೆಕೆಂಡುಗಳಲ್ಲಿ ಗುರಿ ತಲುಪಿದ ರಾಜ್ಯದ ಧಾನೇಶ್ವರಿ ಕಂಚಿನ ಪದಕ ಗಳಿಸಿದರು. ಒಡಿಶಾ ಮತ್ತು ತಮಿಳುನಾಡಿನ ಸ್ಪರ್ಧಿಗಳು ಚಿನ್ನ ಹಾಗೂ ಬೆಳ್ಳಿಯ ಸಾಧನೆ ಮಾಡಿದರು.

Federation Cup Athletic Championship ಪುರುಷರ ಹೈಜಂಪ್‌ ವಿಭಾಗದಲ್ಲಿ ರಾಜ್ಯದ ಜೆಸ್ಸೆ ಸಂದೇಶ್‌ 2.18 ಮೀ. ಎತ್ತರಕ್ಕೆ ಜಿಗಿದು ಬೆಳ್ಳಿಯ ಪದಕ ಗೆದ್ದಿದ್ದಾರೆ. ಮಹಾರಾಷ್ಟ್ರದ ಸರ್ವೇಶ್‌ ಸನಿಲ್‌ ಚಿನ್ನ ಹಾಗೂ ಒಡಿಶಾದ ಸ್ವಾದೀನ್‌ ಕುಮಾರ್‌ ಕಂಚಿನ ಪದಕ ಗೆದ್ದರು.

ಇದನ್ನೂ ಓದಿ: ರಾಜ್ಯ ಯುವಜನ ಸೇವಾ ಕ್ರೀಡಾ ಇಲಾಖೆಯ ಕ್ರೀಡಾಂಗಣಗಳು ವೈಜ್ಞಾನಿಕವಾಗಿ ಮೇಲ್ದರ್ಜೆಗೆ

Related Articles