ಡಿವೈಇಎಸ್ ಎ ತಂಡಕ್ಕೆ ಹಾಕಿ ಕರ್ನಾಟಕ ಚಾಂಪಿಯನ್ ಪಟ್ಟ
ಬೆಂಗಳೂರು: ಕೊನೆಯ ದಿನದ ಪಂದ್ಯದಲ್ಲಿ ಕೆನರಾ ಬ್ಯಾಂಕ್ ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸಿದರೂ ಹಿಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿ ಅಗ್ರ ಸ್ಥಾನ ಪಡೆದಿದ್ದ ಕರ್ನಾಟಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ (DYES) ತಂಡ 2025ನೇ ಸಾಲಿನ, 9ನೇ ಆವೃತ್ತಿಯ ಹಾಕಿ ಕರ್ನಾಟಕ ಲೀಗ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. Department of Youth Empowerment & Sports won the 9th Edition Hockey Karnataka League Championship 2025.
ವಿಜೇತ ಡಿವೈಇಎಸ್ ತಂಡ ಟ್ರೋಫಿಯೊಂದಿಗೆ 50,000 ರೂ. ನಗದು ಬಹುಮಾನ ಗೆದ್ದುಕೊಂಡಿತು. ಹುಬ್ಬಳ್ಳಿಯ ನೈಋತ್ಯ ರೇಲ್ವೆ ತಂಡ ರನ್ನರ್ಸ್ ಅಪ್ ಗೌರವಕ್ಕೆ ಪಾತ್ರವಾಯಿತು. ಎರಡನೇ ಸ್ಥಾನ ಪಡೆದ ರೈಲ್ವೆ ತಂಡ ಟ್ರೋಫಿಯೊಂದಿಗೆ 30,000 ರೂ. ಬಹುಮಾನ ಗೆದ್ದುಕೊಂಡಿತು.
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ (ಡಿವೈಇಎಸ್) ಬಿ ತಂಡ ಮೂರನೇ ಸ್ಥಾನ ಗೆದ್ದಕೊಂಡು ಟ್ರೋಫಿಯೊಂದಿಗೆ 20,000 ರೂ. ನಗದುನ್ನು ತನ್ನದಾಗಿಸಿಕೊಂಡಿತು.
ಫೇರ್ ಪ್ಲೇ ಟ್ರೋಫಿಯನ್ನು ದಿವೈಇಎಸ್ ಬಳ್ಳಾರಿ ತಂಡಕ್ಕೆ ನೀಡಲಾಯಿತು.

