Friday, October 4, 2024

ಐಪಿಎಲ್ ಸಂತೆಯಲ್ಲಿ ಆಟಗಾರರ ಹರಾಜು

ಸ್ಪೋರ್ಟ್ಸ್ ಮೇಲ್ ವರದಿ

2009ರ ಇಂಡಿಯನ್ ಸೂಪರ್ ಲೀಗ್ ಗೆಲ್ಲುವ ಸಲುವಾಗಿ ಎಂಟು ಫ್ರ್ಯಾಂಚೈಸಿಗಳು ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದ್ದರೂ, ಇತರ 345 ಆಟಗಾರರಲ್ಲಿ ಉತ್ತಮರನ್ನು ಆಯ್ಕೆ ಮಾಡಿಕೊಳ್ಳವ ಸಲುವಾಗಿ ಮಂಗಳವಾರ (ಡಿಸೆಂಬರ್ 18) ಜೈಪುದಲ್ಲಿ ನಡೆಯಲಿರುವ ಹರಾಜಿನಲ್ಲಿ ಪಾಲ್ಗೊಳ್ಳಲಿವೆ.

ಇದುವರೆಗೂ ಹರಾಜ ಪ್ರಕ್ರಿಯೆ ಎರಡು ದಿನಗಳ ಕಾಲ ನಡೆಯುತ್ತಿತ್ತು, ಆದರೆ ಈ ಬಾರಿ ಕೇವಲ ಅರ್ಧದಿನ ನಡೆಯಲಿದೆ. 226 ಮಂದಿ ಭಾರತೀಯ ಆಟಗಾರರು ಸೇರಿದಂತೆ ಒಟ್ಟು 345 ಆಟಗಾರರನ್ನು ಹರಾಜಿಗೆ ಒಳಪಡಿಸಲಾಗುವುದು. ಫ್ರಾಂಚೈಸಿಗಳಿಗೆ ಖರೀದಿಸುವ ಮೊತ್ತದಲ್ಲಿ ಏರಿಕೆ ಮಾಡಲಾಗಿದ್ದು, 80 ರಿಂದ 82 ಕೋಟಿ ರೂ.ಗಳಿಗೆ ಏರಿಸಲಾಗಿದೆ.
ಬ್ಯಾಟ್ಸ್‌ಮನ್, ಬೌಲರ್ಸ್ ಹಾಗೂ ಆಲ್ರೌಂಡರ್‌ಗಳಾಗಿ ಆಟಗಾರರನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಹೆಚ್ಚಿನ ಫ್ರ್ಯಾಂಚೈಸಿಗಳು ಈಗಾಗಲೇ ತಮಗೆ ಸೂಕ್ತವಲ್ಲದ ಆಟಗಾರರನ್ನು  ಕೈಬಿಡಲಾಗಿದೆ. ಮೂಲ ಬೆಲೆ 20 ಲಕ್ಷ ರೂ.ಗಳಿಂದ 2 ಕೋಟಿ ರೂ.ಗಳವರೆಗೂ ಇರುತ್ತದೆ. 9 ಆಟಗಾರರು 2 ಕೋಟಿ ರೂ. ಮೂಲ ಬೆಲೆಯನ್ನು ಹೊಂದಿರುತ್ತಾರೆ. 1.5 ಕೋಟಿ ರೂ. ಮೂಲಬೆಲೆಯನ್ನು ಹೊಂದಿರುವ ಜೈದೇವ್ ಉನಾದ್ಕಟ್ ಭಾರತದ ಪರ ಅತಿ ಹೆಚ್ಚು ಬೆಲೆಯ ಮೂಲ ಮೊತ್ತವನ್ನು ಹೊಂದಿರುವ ಆಟಗಾರ.
ಹರಾಜು ಹಾಕುವವರೂ ಬದಲು
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾದಾಗಿನಿಂದ ರಿಚರ್ಡ್ ಹ್ಯಾಡ್ಲಿ ಅವರು ಹರಾಜು ಪ್ರಕ್ರಿಯೆಯನ್ನು ನಡೆಸಿಕೊಡುತ್ತಿದ್ದರು. ಆದರೆ ಈ ಬಾರಿ ಹ್ಯೂಗ್ ಎಡ್ಮೇಡ್ಸ್ ಅವರು ಹರಾಜು ನಡೆಸಿಕೊಡಲಿದ್ದಾರೆ.ಫೈನ್  ಆರ್ಟ್ಸ್, ಕ್ಲಾಸಿಕ್ ಕಾರುಗಳು ಹಾಗೂ ಚಾರಿಟಿ ಹರಾಜಿಗೆ ಪ್ರಸಿದ್ಧರಾಗಿರುವ ಎಡ್ಮೇಡ್ಸ್ ಜೈಪುರದಲ್ಲಿ ಕಾಣಿಸಿಕೊಳ್ಳುವರು. ಇಂದು ಮಧ್ಯಾಹ್ನ 2:30ಕ್ಕೆ ಹರಾಜು ನಡೆಯಲಿದೆ.

Related Articles