ಯುವಿ ಸ್ಟ್ರಾಂಗ್ @ 37
ದೆಹಲಿ:
ಕ್ರಿಕೆಟಿಗ ಯುವರಾಜ್ ಸಿಂಗ್ ಮಂಗಳವಾರ ತಮ್ಮ 37ನೇ ಹುಟ್ಟುಹಬ್ಬ ಆಚರಿಸಿಕೊಂಡರು.
2011ರ ವಿಶ್ವಕಪ್ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆ ಭಾಜನರಾಗಿದ್ದರು. ಅವರು 40 ಟೆಸ್ಟ್ , 304 ಏಕದಿನ , 58 ಟಿ-20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾಾರೆ. ಯುವರಾಜ್ ಸಿಂಗ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ 2000ರಲ್ಲಿ ಪದಾರ್ಪಣೆ ಮಾಡಿದ್ದರು. ಟೆಸ್‌ಟ್ ವಿಭಾಗದಲ್ಲಿ 1900, ಏಕದಿನ ಮಾದರಿಯಲ್ಲಿ 8,701 ಹಾಗೂ ಟಿ-20 ಮಾದರಿಯಲ್ಲಿ 1177 ರನ್ ದಾಖಲಿಸಿದ್ದಾರೆ. ಅಲ್ಲದೇ, 2007 ರ ಚುಟುಕು ವಿಶ್ವಕಪ್ ಕೇವಲ 12 ಎಸೆತಗಳಿಗೆ ಸ್ಪೋಟಕ ಅರ್ಧ ಶತಕ ಸಿಡಿಸಿ ವಿಶ್ವದಾಖಲೆ ಮಾಡಿದ್ದರು. ಇವರ ಜನುಮ ದಿನಕ್ಕೆೆ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ಜಹೀರ್ ಖಾನ್ ಸೇರಿದಂತೆ ಅನೇಕ ಕ್ರಿಕೆಟ್ ದಿಗ್ಗಜರು ಶುಭಾಶಯ ಕೋರಿದ್ದಾರೆ.