Saturday, July 27, 2024

ಟೆನಿಸ್ ಬಾಲ್ ಕ್ರಿಕೆಟ್ ನ ಶತಕ ವೀರ ಗಿಳಿಯರು ನಾಗ

ಆರ್.ಕೆ.ಆಚಾರ್ಯ ಕೋಟ

ಕಳೆದ ಕೆಲವು ವರ್ಷಗಳಿಂದೀಚೆಗೆ “ಫ್ರೆಂಡ್ಸ್ ಗಿಳಿಯಾರು ಟ್ರೋಫಿ” ಹೊನಲು ಬೆಳಕಿನ ಮೂವತ್ತು ಗಜಗಳ

ಪಂದ್ಯಾಟದಲ್ಲಿ ಬೆಸ್ಟ್ ಬ್ಯಾಟ್ಸ್‌ಮನ್‌ ಆಗಿ ಗುರುತಿಸಿಕೊಂಡು ಬೆಳಕಿಗೆ ಬಂದ ಗ್ರಾಮೀಣ ಮಟ್ಟದ ಈ ಆಟಗಾರ ಇಂದು ಬೆಂಗಳೂರಿನ ಬಲಿಷ್ಠ ತಂಡ ” ಫ್ರೆಂಡ್ಸ್ ಬೆಂಗಳೂರು”ತಂಡದ ಆಧಾರ ಸ್ತಂಭ.ಆತ ಬೇರೆ ಯಾರು ಅಲ್ಲ ಟೆನಿಸ್ ಬಾಲ್ ಕ್ರಿಕೆಟ್ ನಲ್ಲಿ ಶತಕ ಸಿಡಿಸಿ ಅಚ್ಚರಿ ಮೂಡಿಸಿದ ರಾಜ್ಯದ ಪ್ರತಿಭಾವಂತ ಆಟಗಾರ ನಾಗರಾಜ ಪೂಜಾರಿ, ಪ್ರೀತಿಯ ಗಿಳಿಯರು ನಾಗ.

“ನಿಸರ್ಗ ಫ್ರೆಂಡ್ಸ್” ಗಿಳಿಯಾರಿನ ಪರವಾಗಿ ಕ್ರಿಕೆಟ್‌ ಅಭಿಯಾನ ಪ್ರಾರಂಭಿಸಿದ ಇವರಿಗೆ ಅಂದಿನ ಪ್ರದರ್ಶನ ಫಲವಾಗಿ “ಫ್ರೆಂಡ್ಸ್ ಗಿಳಿಯಾರು” ಮತ್ತು “ಅಭಿಮತ ಗಿಳಿಯಾರು” ತಂಡದ ಬಾಗಿಲು ತೆರೆಯಿತು.ಹಲವಾರು ಟ್ರೋಫಿಗಳನ್ನು ಅಜೇಯವಾಗಿ ಗೆಲ್ಲುತ್ತಾ, ನಂತರದ ದಿನಗಳಲ್ಲಿ ರಾಜ್ಯದ ಬಲಿಷ್ಠ ತಂಡಗಳಾದ ಜಾನ್ಸನ್ ಕುಂದಾಪುರ,ಎಸ್.ಎಫ್.ಸಿ ಅಲೆವೂರು,ಉಡುಪಿ ಫ್ರೆಂಡ್ಸ್ ಹಲವಾರು ತಂಡಗಳಲ್ಲಿ ಅತಿಥಿ ಆಟಗಾರನಾಗಿ ಆಡುವ ಅವಕಾಶವನ್ನು  ಪಡೆದ ಇವರು, ತನ್ನ ಅದ್ಭುತ ದಾಂಡಿಗತನ ಪ್ರದರ್ಶನದಿಂದ ಮುಂದಿನ ದಿನಗಳಲ್ಲಿ ರಾಜ್ಯದ ಭರವಸೆಯ ದಾಂಡಿಗನಾಗಿ ಮೂಡಿಬರುವತ್ತ ಹೆಜ್ಜೆ ಯಿರಿಸಿದ್ದರು.

ಈ ಅದ್ಭುತ ಪ್ರದರ್ಶನದ ಪ್ರತಿಯಾಗಿ, ಬೆಂಗಳೂರಿನ ಎರಡೂವರೆ ದಶಕಗಳ ಇತಿಹಾಸದ,ಹೃದಯವಂತ ಕ್ರೀಡಾಪೋಷಕ ಶ್ರೀಯುತ ರೇಣು ಗೌಡರವರ ಮಾಲೀಕತ್ವದ “ಫ್ರೆಂಡ್ಸ್ ಬೆಂಗಳೂರು” ತಂಡದಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಂಡರು.ಹಲವಾರು ಪಂದ್ಯಗಳಲ್ಲಿ ಸೋಲಿನಂಚಿನಲ್ಲಿದ್ದ ತನ್ನ ತಂಡವನ್ನು
“One Man Show” ಪ್ರದರ್ಶನದಿಂದ ಪಾರುಮಾಡಿದ ಬಹಳಷ್ಟು ಉದಾಹರಣೆಗಳಿದೆ.ತನ್ನ ತಂಡದಲ್ಲಿ ಹಲವಾರು ಯುವ ಆಟಗಾರರಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ತನ್ನ ಅದ್ಭುತ ಕಲಾತ್ಮಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಹಲವಾರು ಟೂರ್ನಿಗಳಲ್ಲಿ “ಬೆಸ್ಟ್ ಬ್ಯಾಟ್ಸ್‌ಮನ್‌” ಪ್ರಶಸ್ತಿಯನ್ನು ಪಡೆದಿರುವರು.

ಇತ್ತೀಚೆಗಷ್ಟೆ ದೇವಾಡಿಗ ಸಂಘದವರು ಏರ್ಪಡಿಸಿದ್ದ ರಾಜ್ಯಮಟ್ಟದ ಆಟಗಾರರನ್ನೊಳಗೊಂಡ “D.P.L”

ಪಂದ್ಯಾಟದಲ್ಲಿ  ಸೆಮಿ ಹಾಗೂ ಫೈನಲ್ ನಲ್ಲಿ 8 ಓವರ್ ಗಳ ಪಂದ್ಯಾಟದಲ್ಲಿ ಬಿರುಸಿನ ಬೌಂಡರಿ,ಸಿಕ್ಸರ್ ಗಳ ಸಹಿತ ಕ್ರಮವಾಗಿ ಅಜೇಯ 94 ಹಾಗೂ ಅಜೇಯ ಶತಕ 104 ರನ್  ಬಾರಿಸಿ ಟೆನ್ನಿಸ್ ಬಾಲ್ ಇತಿಹಾಸದಲ್ಲಿ
ಶತಕ‌ ಬಾರಿಸಿದ ಮೊದಲ ಆಟಗಾರನ ಕೀರ್ತಿಗೆ ಭಾಜನರಾದರು.

ಗ್ರಾಮೀಣ ಮಟ್ಟದಿಂದ ಗುರುತಿಸಿಕೊಂಡು,ತನ್ನ ಅಬ್ಬರದ ಬ್ಯಾಟಿಂಗ್ ಮೂಲಕ ರಾಜ್ಯಾದ್ಯಾಂತ ಹೆಸರು ಗಳಿಸಿರುವ ಕೋಟ ಗಿಳಿಯಾರಿನ “ನಾಗರಾಜ ಪೂಜಾರಿ” (ಗಿಳಿಯಾರು ನಾಗ)ಇವರಿಗೆ “ಸ್ಪೋರ್ಟ್ಸ್ ಮೇಲ್” ವತಿಯಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

Related Articles