Wednesday, November 6, 2024

ಡೆಲ್ಲಿ ತಂಡದ ಸಹಾಯಕ ಕೋಚ್‌ಗೆ ಕೈಫ್ ಆಯ್ಕೆ

ದೆಹಲಿ:

ಭಾರತ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅವರನ್ನು ಐಪಿಎಲ್ 2019ರ ಅವೃತ್ತಿಗೆ ಡೆಲ್ಲಿ ಡೇರ್  ಡೆವಿಲ್ಸ್  ತಂಡದ ಸಹಾಯಕ ಕೋಚ್ ಆಗಿ  ಶುಕ್ರವಾರ ನೇಮಕ ಮಾಡಲಾಗಿದೆ.

2017ರ ಆವೃತ್ತಿಯಲ್ಲಿ ಗುಜರಾತ್ ಲಯನ್ಸ್  ತಂಡದ ಮುಖ್ಯ ಕೋಚ್ ಬ್ರಾಡ್ ಹಾಡ್ಜ್  ಅವರಿಗೆ ಸಹಾಯಕ ತರಬೇತುದಾರರಾಗಿ ಕೈಫ್ ಕಾರ್ಯ ನಿರ್ವಹಿಸಿದ್ದರು. ಡೆಲ್ಲಿ ಡೇರ್ ಡೆವಿಲ್ಸ್  ತಂಡದ ರಿಕ್ಕಿ ಪಾಂಟಿಂಗ್ ಹಾಗೂ ಜೇಮ್ಸ್ ಹೋಪ್ಸ್ ಅವರ ತರಬೇತುದಾರ ತಂಡಕ್ಕೆ ಇದೀಗ ಮೊಹಮ್ಮದ್ ಕೈಫ್ ಸೇರ್ಪಡೆಗೊಂಡಿದ್ದಾರೆ. ಡೆಲ್ಲಿ ಡೇರ್ ಡೆವಿಲ್ಸ್  ತಂಡದಲ್ಲಿ ಈ ಅವಕಾಶ ಸಿಕ್ಕಿರುವುದು ಖುಷಿ ತಂದಿದೆ. ತಂಡದಲ್ಲಿ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡುವಂತೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕೈಫ್ ತಿಳಿಸಿದರು.

Related Articles