Friday, December 13, 2024

ಕಿವೀಸ್ ಎ ವಿರುದ್ಧ ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ಮನೀಶ್ ಪಡೆ

ಮೌಂಟ್ ಮೌಂಗ್‌ನ್ಯುಯಿ:

ಭಾರತ ‘ಎ’ ತಂಡದ ಸಂಘಟಿತ ಪ್ರದರ್ಶನದಿಂದ ನ್ಯೂಜಿಲೆಂಡ್ ‘ಎ’ ವಿರುದ್ಧದ ಮೂರನೇ ಅನಧೀಕೃತ ಏಕದಿನ ಪಂದ್ಯದಲ್ಲಿ 75 ರನ್‌ಗಳ ಜಯ ದಾಖಲಿಸಿತು. ಈ ಮೂಲಕ ಮನೀಶ್ ಪಾಂಡೆ ಪಡೆ ಮೂರು ಪಂದ್ಯಗಳ ಸರಣಿಯಲ್ಲಿ 3-0 ಅಂತರದಲ್ಲಿ ಸರಣಿಯನ್ನು ವೈಟ್‌ವಾಶ್ ಮಾಡಿಕೊಂಡಿತು.

ಇಲ್ಲಿನ ಬೇ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆೆ 275 ಮೊತ್ತ ದಾಖಲಿಸಿತು. ಭಾರತದ ಪರ ಉತ್ತಮ ಬ್ಯಾಾಟಿಂಗ್ ಮಾಡಿದ ಅನ್ಮೋಲ್‌ಪ್ರೀತ್ ಸಿಂಗ್ 71 ರನ್ ಗಳಿಸಿದರೆ, ಅಂಖಿತ್ ಬಾವ್ನೆೆ 48 ರನ್ ಹಾಗೂ ವಿಜಯ್ 42 ರನ್ ಗಳಿಸಿ ತಂಡಕ್ಕೆೆ ನೆರವಾದರು. ಈ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಭಾರತದ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಲು ವಿಫಲವಾಗಿ 44.2 ಓವರ್‌ಗಳಲ್ಲಿ 200 ರನ್‌ಗಳಿಗೆ ಕುಸಿಯಿತು. ನ್ಯೂಜಿಲೆಂಡ್ ಎ ಪರ ಡ್ಯಾರಿಲ್ ಮಿಚೆಲ್ 30 ರನ್ ಗಳಿಸಿದರೆ, ಟಿಮ್ ಸೈರ್ಫಟ್ 73 ಎಸೆತಗಳಲ್ಲಿ ಒಂದು ಸಿಕ್‌ಸ್‌ ಹಾಗೂ ನಾಲ್ಕು ಬೌಂಡರಿಗಳೊಂದಿಗೆ ಅರ್ಧ ಶತಕ(55) ಗಳಿಸಿದರು. ಇವರನ್ನು ಬಿಟ್ಟರೆ ಇನ್ನುಳಿದ ಬ್ಯಾಟ್ಸ್  ಮನ್‌ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಅಂತಿಮವಾಗಿ ಸೋಲುಂಡರು.

Related Articles