ವಿಭಾಗೀಯ ಮಟ್ಟಕ್ಕೆ ಕೋಸ್ಟಾ ಬ್ಯಾಡ್ಮಿಂಟನ್ ಚಾಂಪಿಯನ್ಸ್
ಕುಂದಾಪುರ: ಉಡುಪಿ ಜಿಲ್ಲೆಯ ಪ್ರತಿಷ್ಠಿತ ಬ್ಯಾಡ್ಮಿಂಟನ್ ಅಕಾಡೆಮಿ ಎನಿಸಿರುವ ಕುಂದಾಪುರದ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್‌ನ ವಿದ್ಯಾರ್ಥಿಗಳು ಈ ಬಾರಿಯ ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದು ಜಿಲ್ಲಾ ಮಟ್ಟದಲ್ಲಿ ಚಾಂಪಿಯನ್ ಪಟ್ಟ ಗೆದ್ದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. Costa Badminton Centre Kundapura players selected for Zonal level Badminton Championship after winning at Udupi District level.
ಉತ್ತಮ ತರಬೇತಿ ನೀಡಿದರೆ ಉತ್ತಮ ಚಾಂಪಿಯನ್ನರನ್ನು ಸಿದ್ಧಗೊಳಿಸಬಹುದು ಎಂಬುದನ್ನು ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ ಸಾಬೀತುಪಡಿಸಿದೆ. ಇಲ್ಲಿ ತರಬೇತಿ ಪಡೆಯುತ್ತಿರುವ ಕಿರಿಯ ಆಟಗಾರರಾದ ಮೆಲ್ರಾನ್ ಕೋಥಾ ಹಾಗೂ ಶಯನ್ ಶೆಟ್ಟಿ ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ಆಯೋಜಿಸಿದ್ದ ಉಡುಪಿ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ U14 ಡಬಲ್ಸ್ ಹಾಗೂ ಸಿಗಲ್ಸ್‌ನಲ್ಲಿ ಚಾಂಪಿಯನ್ ಪಟ್ಟ ಗೆದ್ದು ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಉಡುಪಿಯ ಅಜ್ಜರಕಾಡ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಚಾಂಪಿಯನ್‌ಷಿಪ್‌ನಲ್ಲಿ ಪಿಯಷ್ ನಗರ ಚರ್ಚ್ (St. Pius X English Medium High School Hanglur) ಶಾಲೆಯ ವಿದ್ಯಾರ್ಥಿಗಳಾದ ಶಯನ್ ಶೆಟ್ಟಿ ಹಾಗೂ ಡಬಲ್ಸ್‌ನಲ್ಲಿ ಮೆಲ್ರಾನ್ ಕೋಥಾ ಕುಂದಾಪುರ ತಾಲೂಕು ಹಾಗೂ ಉಡುಪಿ ಜಿಲ್ಲಾ ಮಟ್ಟದಲ್ಲಿ ಚಾಂಪಿಯನ್ ಪಟ್ಟ ಗೆದ್ದು ತಾವು ತರಬೇತಿ ಪಡೆದ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ ಹಾಗೂ ಕಲಿಯುತ್ತಿರುವ ಶಾಲೆಗೆ ಮಾತ್ರವಲ್ಲ ಕುಂದಾಪುರ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಶಯನ್ ಶೆಟ್ಟಿ ಹಾಗೂ ಮೆಲ್ರಾನ್ ಜೋಡಿ ತಾಲೂಕು ಮಟ್ಟದ ಡಬಲ್ಸ್‌ನಲ್ಲಿ ಚಾಂಪಿಯನ್ ಪಟ್ಟ ಗೆದ್ದು ನಂತರ ಜಿಲ್ಲಾ ಮಟ್ಟದಲ್ಲೂ ಅಗ್ರ ಸ್ಥಾನ ಗಳಿಸಿ ವಿಭಾಗೀಯ ಮಟ್ಟಕ್ಕೆ ಅರ್ಹತೆ ಪಡೆದರು. ಜಿಲ್ಲಾ ಮಟ್ಟದಲ್ಲಿ ಮೆಲ್ರಾನ್ 14 ವರ್ಷ ವಯೋಮಿತಿಯ ಬಾಲಕರ ಸಿಂಗಲ್ಸ್‌ನಲ್ಲೂ ಚಾಂಪಿಯನ್ ಪಟ್ಟ ಹಾಗೂ ಶಯನ್ ಶೆಟ್ಟಿ ಜೊತೆ ಸೇರಿ ಡಬಲ್ಸ್‌ನಲ್ಲೂ ಪ್ರಶಸ್ತಿ ಗೆದ್ದುಕೊಂಡರು. ತಾಲೂಕು ಮಟ್ಟದಲ್ಲಿ ಜೋಷುವಾ ಡಿಮೆಲ್ಲೋ ಹಾಗೂ ಅನ್‌ಸ್ವಿ ಡಿಸೋಜಾ ಅವರು ಬೆಳ್ಳಿ ಪದಕ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಅಕಾಡೆಮಿ ಇನ್ನಿಬ್ಬರು ಪ್ರತಿಭೆಗಳಾದ ವಿಲ್ಷಾ ಡಿ ಅಲ್ಮೆಡಾ ಹಾಗೂ ಝುಲೆಕಾ ಬಾಲಕಿಯರ ತಾಲೂಕು ಮಟ್ಟದ U17 ಬಾಲಕಿಯರ ಡಬಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.
ಕೋಸ್ಟಾದಲ್ಲಿ ಉತ್ತಮ ಕೋಚಿಂಗ್: ಕಳೆದ ಒಂದು ವರ್ಷದಲ್ಲಿ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ ಉತ್ತಮ ಪ್ರತಿಭೆಗಳನ್ನು ಹುಟ್ಟು ಹಾಕಿದೆ. ಇಲ್ಲಿ ತರಬೇತಿ ನೀಡುತ್ತಿರುವ ಸೋಮಣ್ಣ ನಂಜಪ್ಪ ಅವರು ಯುವ ಪ್ರತಿಭೆಗಳಿಗೆ ಉತ್ತಮ ಪ್ರೋತ್ಸಾಹ ನೀಡುತ್ತಿದ್ದಾರೆ. ಬೆಳಿಗ್ಗೆ 5 ಗಂಟೆಯಿಂದ ಮಕ್ಕಳು ಇಲ್ಲಿ ತರತಬೇತಿ ಪಡೆಯುತ್ತಿರುತ್ತಾರೆ. ಇಲ್ಲಿಯ ಮ್ಯಾನೇಜರ್ ನಿಧೀಶ್ ಆಚಾರ್ಯ ಅವರು ಕೂಡ ಆಟಗಾರರ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.
ಕೋಸ್ಟಾ ಬ್ಯಾಡ್ಮಿಂಟನ್ ಅಕಾಡೆಮಿಯ ವಿದ್ಯಾರ್ಥಿಗಳ ಸಾಧನೆಗೆ ಅಕಾಡೆಮಿಯ ಮಾಲೀಕರಾದ ರೇಷ್ಮಾ ಹಾಗೂ ಅಜಿತ್ ಡಿಕೋಸ್ಟಾ ಅವರು ಅಭಿನಂದನೆ ಸಲ್ಲಿಸಿದ್ದಾರೆ.