Wednesday, November 13, 2024

ರಾಷ್ಟ್ರೀಯ ಕ್ರೀಡಾಕೂಟ: ಈಜು ಕೊಳದಲ್ಲಿ ʼಮಹಾʼ ಮೋಸ!

ಗೋವಾ: ಕೆಲ ದಿನಗಳ ಹಿಂದೆ ಕರ್ನಾಟಕದ ಕ್ರೀಡಾಪಟುಗಳಿಗೆ ಸಂಘಟಕರಿಂದ ಅನ್ಯಾಯವಾಗಿದ್ದು ಸುದ್ದಿ ಆಗಲೇ ಇಲ್ಲ, ಆದರೆ ಈಜು ಕೊಳದಲ್ಲಿ ಮಹಾರಾಷ್ಟ್ರ ತಂಡದವರು ಸರ್ವಿಸಸ್‌ಗೆ ಮಾಡಿರುವ ಅನ್ಯಾಯ ಸುದ್ದಿಯಾಗಿದೆ.  Controversy marred the Men’s Water Polo Finals at the National Games 2023.

ಪೊಲೋ ಫೈನಲ್‌ ಶೂಟೌಟ್‌ನಲ್ಲಿ ಮೋಸದ ಆಟ ನಡೆದಿದೆ ಎಂದು ದೇಶದ ಪ್ರತಿಷ್ಠಿತ ಕ್ರೀಡಾ ಸಂಸ್ಥೆ ಸರ್ವಿಸಸ್‌ನ ಈಜುಗಾರರು ಆರೋಪ ಮಾಡಿದ್ದಾರೆ.  ನಿಗದಿತ ಅವಧಿಯಲ್ಲಿ ಇತ್ತಂಡಗಳು 10-10 ಅಂಕಗಳಿಂದ ಸಮಬಲ ಸಾಧಿಸಿದಾಗ ಶೂಟೌಟ್‌ನಲ್ಲಿ ಗೋಂದಲ ಸೃಷ್ಟಿಯಾಯಿತು.

ಮಹಾರಾಷ್ಟ್ರದ ಮಂದಾರ್‌ ಬೊಯಿರ್‌ ಎರಡು ಪೆನಾಲ್ಟಿ ಥ್ರೋ ಆದ ಬಳಿಕ ಗೋಲ್‌ ಲೈನ್‌ನಿಂದ ಹೊರ ಬಂದಿರುವುದನ್ನು ಸರ್ವಿಸಸ್‌ ಆಟಗಾರರು ಪ್ರತಿಭಟಿಸಿದರು. ನಿರಂತರವಾಗಿ ಈ ರೀತಿ ಮೋಸದಾಟ ನಡೆಯುತ್ತಿರುವಾಗ ಸರ್ವಿಸಸ್‌ ಈಜುಗಾರರು ಪ್ರತಿಭಟನೆ ಮುಂದುವರಿಸಿದರು. ಸರ್ವಿಸಸ್‌ ಕೋಚ್‌ ಹಾಗೂ ತಾಂತ್ರಿಕ ಸಿಬ್ಬಂದಿ ನಡುವೆ ಕೆಟ್ಟ ರೀತಿಯಲ್ಲಿ ಮಾತಿನ ಚಕಮಕಿ ನಡೆಯಿತು. “ಈ ರೀತಿ ಫಲಿತಾಂಶಕ್ಕಾಗಿ ಎಷ್ಟು ಹಣ ಪಡೆದಿದ್ದೀರಿ” ಎಂದು ಸರ್ವಿಸಸ್‌ ಕೋಚ್‌ಗಳು ತಾಂತ್ರಿಕ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಅಂತಿಮವಾಗಿ ಸರ್ವಿಸಸ್‌ ತಂಡ ಆಟದಲ್ಲಿ ಮುಂದುವರಿಯಲು ನಿರಾಕರಿಸಿತು.

“ಮೊದಲು ತೀರ್ಪುಗಾರರು ಗೋಲ್‌ಕೀಪರ್‌ನನ್ನು ಗೋಲ್‌ಲೈನ್‌ನಿಂದ ದೂರ ಸರಿಯುವಂತೆ ಹೇಳಿದರು, ಮತ್ತೆ ಸ್ವಲ್ಪ ಹೊತ್ತಿನಲ್ಲೇ ಅವಕಾಶ ಮಾಡಿಕೊಟ್ಟರು. ಇದು ನಮಗೆ ಅಡ್ಡಿಯನ್ನುಂಟು ಮಾಡುತ್ತಿತ್ತು. ಇದು ಆಟದ ಕ್ರಮವಲ್ಲ,” ಎಂದು ಸರ್ವಿಸಸ್‌ನ ಅಧಿಕಾರಿಯೊಬ್ಬರು ಕ್ರೀಡಾ ವೆಬ್‌ಸೈಟ್‌ವೊಂದಕ್ಕೆ ತಿಳಿಸಿದ್ದಾರೆ.

ಪೋಲೋ ಸ್ಪರ್ಧೆ ನಡೆಯುತ್ತಿರುವಾಗ ಅಂತಿಮ ಹಂತದಲ್ಲಿ ಗೋಲ್‌ ತೀರ್ಪುಗಾರರೇ ಇಲ್ಲದಿರುವುದು ಸಂಘಟಕರ ಮತ್ತೊಂದು ಪ್ರಮಾದ, ಅಂತಿಮವಾಗಿ ತಮ್ಮ ಸಾಧನೆಯನ್ನೇ ಸಮರ್ಥಿಸಿಕೊಂಡ ಮಹಾರಾಷ್ಟ್ರ ಚಿನ್ನದ ಪದಕ ಗೆದ್ದುಕೊಂಡು ಸಂಭ್ರಮಿಸಿತು. ಯೋಧರಿಂದ ಕೂಡಿದ ಸರ್ವಿಸಸ್‌ ತಂಡ ನೋವಿನಿಂದ ಮನೆ ಸೇರಿತು.

Related Articles