ರಾಷ್ಟ್ರೀಯ ಜೂನಿಯರ್ ಆಟ್ಯ-ಪಟ್ಯ ಕರ್ನಾಟಕ ಚಾಂಪಿಯನ್
ಚಂಡೀಗಢ: ಇಲ್ಲಿನ ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ನಡೆದ 36ನೇ ರಾಷ್ಟ್ರೀಯ ಬಾಲಕ ಹಾಗೂ ಬಾಲಕಿಯರ ರಾಷ್ಟ್ರೀಯ ಆಟ್ಯಾ-ಪಟ್ಯ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಬಾಲಕರ ತಂಡವನ್ನು ಪ್ರತಿನಿಧಿಸಿದ್ದ ಚಂದಗರಿ ಕ್ರೀಡಾ ಶಾಲೆಯ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. Chandaragi Sports school which represent Karnataka won the National Junior Atya-Patya Championship held at Chandigarh.
ಮಹಾರಾಷ್ಟ್ರ ವಿರುದ್ಧ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ 11-13, 11-11, 14-12 ಅಂತರದಲ್ಲಿ ಜಯ ಗಳಿಸಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ಹೆಚ್ಚುವರಿ ಅವಧಿಯಲ್ಲಿ 7-9 ಅಂತರದಲ್ಲಿ ಜಯ ಗಳಿಸಿತ್ತು. ಸೆಮಿಫೈನಲ್ ಪಂದ್ಯಲ್ಲಿ ಕರ್ನಾಟಕ ತಂಡ ಪಾಂಡಿಚೇರಿ ವಿರುದ್ಧ 24-07, 22-10 (2-0) ಅಂತರದಲ್ಲಿ ಜಯ ಗಳಿಸಿ ಫೈನಲ್ ಪ್ರವೇಶಿಸಿತ್ತು. ಕರ್ನಾಟಕ ತಂಡದ ಕೋಚ್ ಆಗಿ ಚಂದರಗಿ ಕ್ರೀಡಾ ಶಾಲೆಯ ಆಟ್ಯಾ-ಪಟ್ಯ ಕೋಚ್ ಲಕ್ಷ್ಮಣ್ ಲಮಾಣಿ ಅವರು ಕಾರ್ಯನಿರ್ವಹಿಸಿದ್ದರು. ತಂಡದ ಮ್ಯಾನೇಜರ್ ಆಗಿ ಮೇಹೇಶ್ ಜೊತೆಗಿದ್ದರು.
ಆಟಗಾರರಾದ ಶಶಾಂಕ್ ಎಚ್ ಹುರಳಿ, ಪ್ರಶಾಂತ್ ಎಸ್ ಹಕ್ಕಿ, ಉಲವೇಶ್ ಎಸ್ ಲಮಾಣಿ, ಪ್ರೀತಮ್ ಡಿ ಪಾಟೀಲ್, ಸಮರ್ಥ್ ಟಿ ತಾರಿಹಾಳ್ ಹಾಗೂ ಅಕ್ಷಯ್ ಎಂ, ಹಿರೇಮಠ್ ಅವರು ತಂಡದ ಜಯಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ.
ಚಾಂಪಿಯನ್ ತಂಡಕ್ಕೆ ಹಾಗೂ ಉತ್ತಮ ತರಬೇತಿ ನೀಡಿದ ಕೋಚ್‌ಗೆ ಚಂದರಗಿ ಕ್ರೀಡಾ ಶಾಲೆಯ ಸ್ಥಾಪಕರಾದ ಎಸ್. ಎಂ. ಕಲೂತಿ ಹಾಗೂ ಸ್ಪೊಕೊದ ಅಧ್ಯಕ್ಷರಾದ ಮೃಣಾಲಿನಿ ಪಟ್ಟಣ್ ಹಾಗೂ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದೆ.

